POWER SAMACHARA | KANNADA NEWS | BREKING NEWS| 18-08-2023..

ದಾವಣಗೆರೆ : ನಾಗರ ಪಂಚಮಿ ಪ್ರಯುಕ್ತ ದಾವಣಗೆರೆಯಲ್ಲಿ ಶಾಲಾ ಮಕಳಿಗೆ ಹಾಲು ಉಣಿಸುವ ಹಬ್ಬ ಹಮ್ಮಿಕೊಳ್ಳಲಾಗಿತ್ತು, ದಾವಣಗೆರೆ ನಗರದ ಬಿಜಿಎಂ ಶಾಲೆಯಲ್ಲಿ ಕಲ್ಲು ನಾಗರಕ್ಕೆ ಹಾಕುವ ಹಾಲು ಮಕ್ಕಳ ಪಾಲು ಎಂಬ ವಿನೂತಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕೂಡಲ ಸಂಗಮ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು, ನಾಗರ ಪಂಚಮಿಯಲ್ಲಿ ಕಲ್ಲು ನಾಗರಕ್ಕೆ ಹಾಲು ಹಾಕುವ ಬದಲು ಮಕ್ಕಳಿಗೆ ಹಾಲು ನೀಡಿ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ಕಲ್ಲಿನ ನಾಗರಕ್ಕೆ ಹಾಲೇರೆಯುವ ಬದಲು ಮಕ್ಕಳಿಗೆ ಹಾಲುಣಿಸಿದರೆ ಸಾರ್ಥಕವಾಗುತ್ತದೆ, ಮೌಢ್ಯತೆಯನ್ನು ದೂರ ಮಾಡುವ ದೃಷ್ಟಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ, ನಾಗರ ಪಂಚಮಿ ಹಬ್ಬವನ್ನು ಮಕ್ಕಳ ಪಂಚಮಿ ಎಂದು ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯಿಸುವುದಾಗಿ ಜಯ ಮೃತ್ಯುಂಜಯ ಸ್ವಾಮಿ ಹೇಳಿದರು..