POWER SAMACHARA | KANNADA NEWS | 21-04-2023

ದಾವಣಗೆರೆ : ಎಸ್ ಸಿ ಮೀಸಲು ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದ ಬಿಎಂ ವಾಗೀಶ್ ಸ್ವಾಮಿ ನಾಮಪತ್ರ ತಿರಸ್ಕೃತವಾಗಿದೆ..
ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನಲೆ ಪಕ್ಷೇತರನಾಗಿ ವಾಗೀಶ್ ಸ್ವಾಮಿ ನಾಮಪತ್ರ ಸಲ್ಲಿಕೆ ಮಾಡಿದ್ದರು,
ಬೆಂಗಳೂರು ನಗರ ಜಿಲ್ಲೆಯಿಂದ 2020ರಲ್ಲಿ ಬೇಡ ಜಂಗಮ ಎಸ್ ಸಿ ಜಾತಿ ಪ್ರಮಾಣ ಪತ್ರವನ್ನ ಬಿಎಂ ವಾಗೀಶ್ ಸ್ವಾಮಿ ಪಡೆದಿದ್ದರು, ಈ ಸಂದರ್ಭದಲ್ಲಿ ಬೇಡ ಜಂಗಮರು ದಲಿತರ ಎಂದು ದಲಿತ ಸಂಘಟನೆಗಳು ಹೋರಾಟ ಮಾಡಿದ್ದರು, ಜೊತೆಗೆ ರೈತ ಮುಖಂಡ ಶೇಖರ್ ನಾಯ್ಕ್ ಸೇರಿದಂತೆ ವಿವಿಧ ದೂರಗಳ ಸಲ್ಲಿಕೆ ಆಗಿದ್ದವು, ಈ ಹಿನ್ನಲೆ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಲಾಗಿ, ವಿಚಾರಣೆ ಬಳಿಕ ಸುಳ್ಳು ಜಾತಿ ಪ್ರಮಾಣ ಎಂದಿ ಪ್ರಮಾಣ ಪತ್ರವನ್ನ ಬೆಂಗಳೂರು ನಗರ ಡಿಸಿ ಕೆಎ ದಯಾನಂದ್ ಅವರು ಇದೇ 19ರಂದು ರದ್ದುಗೊಳಿಸಿ ಆದೇಶ ಮಾಡಿದ್ದರು.. ಇದೇ ಆದೇಶದನ್ವಯ ಮಾಯಕೊಂಡ ಚುನಾವಣಾ ಅಧಿಕಾರಿ ದುರ್ಗಾ ಶ್ರೀ ಅವರು ಬಿಎಂ ವಾಗೀಶ್ವಸ್ವಾಮಿ ಅವರ ನಾಮಪತ್ರವನ್ನ ರದ್ದು ಮಾಡಿದ್ದಾರೆ ಎನ್ನಲಾಗಿದೆ..
ದಲಿತರು -ಬೇಡ ಜಂಗಮರ ಮಧ್ಯೆ ಈ ಹಿಂದೆ ಜಟಾಪಟಿ ನಡೆದಿತ್ತು, ಬೇಡ ಜಂಗಮರು ದಲಿತರಲ್ಲ ಎಂದು ದಲಿತ ಮುಖಂಡರು ದೂರಿದ್ದರು, ಆದರು ಸಹ ಕೆಲವೆಡೆ ವೀರಶೈವ ಬೇಡ ಜಂಗಮರಿಗೆ ಎಸ್ ಸಿ ಸರ್ಟಿಫಿಕೇಟ್ ನೀಡಲಾಗಿತ್ತು. ಮಾಯಕೊಂಡ ಕ್ಷೇತ್ರ ಲಿಂಗಾಯಿತ ಮತಗಳು ಹೆಚ್ಚಿದ್ದು, ಲಿಂಗಾಯಿತ ಮತ ಪಡೆದು ಗೆಲ್ಲುತ್ತೇನೆ ಎಂದು ವಾಗೀಶ್ ಸ್ವಾಮಿ ಪ್ರಚಾರ ನಡೆಸಿದ್ದರು. ಆದರೆ ನಾಮಪತ್ರ ತಿರಸ್ಕಾರ ಆದ ಹಿನ್ನಲೆ ನಿರಾಸೆಗೊಂಡಿದ್ದಾರೆ ಎನ್ನಲಾಗಿದೆ.. ಇನ್ನೊಂದೆಡೆ ವಾಗೀಶ್ ಸ್ವಾಮಿ ಪತ್ನಿ ಪುಷ್ಪಾ ನಾಮಪತ್ರ ಪುರಸ್ಕಾರ ಆಗಿದೆ ಎನ್ನಲಾಗಿದ್ದು ಪ್ರಶ್ನೆ ಹುಟ್ಟು ಹಾಕಿದೆ. ರೈತ ಮುಖಂಡ ಶೇಖರ್ ನಾಯ್ಕ್ ನಾಮಪತ್ರವು ಸಹ ತಿರಸ್ಕಾರ ಆಗಿದೆ..