POWER SAMACHARA | KANNADA NEWS | 10-05-2023
ದಾವಣಗೆರೆ: ಸರತಿ ಸಾಲಿನಲ್ಲಿ ನಿಂತು ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಮತ ಚಲಾವಣೆ ಮಾಡಿ ಮಾದರಿಯಾಗಿದ್ದಾರೆ.

ಕುಟುಂಬ ಸಮೇತ ಆಗಮಿಸಿದ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ವಿನಾಯಕ ಬಡಾವಣೆಯ ಮತಗಟ್ಟೆ 255 ರಲ್ಲಿ ಹಕ್ಕು ಚಲಾವಣೆ ಮಾಡಿದರು, ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ, ಸುಲಭವಾಗಿ ಕೈ ಗೆ ಸಿಗುವವನು ಎಂದು ನನ್ನನ್ನು ಗುರುತಿಸುತ್ತಿದ್ದಾರೆ, ಹೀಗಾಗಿ ನೂರಕ್ಕೆ ನೂರರಷ್ಟು ನಾನು ಗೆಲ್ಲುತ್ತೇನೆ ಎಂದು ದಾವಣಗೆರೆಯಲ್ಲಿ ಉತ್ತರ ಕ್ಷೇತ್ರದ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಹೇಳಿಕೆ ನೀಡಿದ್ದಾರೆ..

ತೇಜಸ್ವಿನಿ ಗೌಡ ಮತ ಚಲಾವಣೆ..

ಬೆಂಗಳೂರಿನಿಂದ ಆಗಮಿಸಿ ದಾವಣಗೆರೆಯಲ್ಲಿ ಎಂಎಲ್ ಸಿ ತೇಜಸ್ವಿನಿ ಗೌಡ ಮತ ಚಲಾವಣೆ ಮಾಡಿದ್ದಾರೆ..

ಮೇಯರ್ ಚುನಾವಣೆ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಮತ ನೋಂದಾವಣೆ ಮಾಡಿಸಿಕೊಂಡಿದ್ದರು, ಬೂತ್ ನಂಬರ್ 227 ರಲ್ಲಿ ಮತ ಚಲಾವಣೆ ಮಾಡಿದ್ದು, ಈ ಭಾರೀ ಬಿಜೆಪಿ ಸರಳ ಬಹುಮತದೊಂದಿಗೆ ಮತ್ತೆ ಅಧಿಕಾರ ಹಿಡಿಯಲಿದೆ, ಅಭಿವೃದ್ದಿ ಮೂಲಕ ಮತ ಯಾಚನೆ ಮಾಡಿದ್ದೇವೆ, 115 ಸ್ಥಾನ ಗೆಲ್ಲೋದು ಪಕ್ಕಾ ಆಗಿದೆ, ಬಜರಂಗ ದಳ ನಿಷೇಧ ವಿಚಾರದಿಂದ 150 ಸ್ಥಾನಕ್ಕೆ ಹೋಗಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ..

ಬಸವ ಪ್ರಭು ಸ್ವಾಮಿಜಿ ಮತ ಚಲಾವಣೆ

ದಾವಣಗೆರೆಯಲ್ಲಿ ಮುರುಘಾ ಮಠದ ಶ್ರೀ ಬಸವ ಪ್ರಭು ಸ್ವಾಮಿಜಿ ಮತ ಚಲಾವಣೆ ಮಾಡಿದ್ದಾರೆ..

ದಾವಣಗೆರೆ ನಗರದ ಹೊಂಡದ ಸರ್ಕಲ್ ಬಳಿಯ ಶಾಲೆಯಲ್ಲಿ ಮತದಾನ ಮಾಡಿದ್ದಾರೆ, ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಬಸವ ಪ್ರಭು ಸ್ವಾಮಿಜಿ, ತಪ್ಪದೆ ಎಲ್ಲರು ಮತದಾನ ಮಾಡಬೇಕು, ನಿರ್ಲಕ್ಷ್ಯ ಮಾಡಿ ಮನೆಯಲ್ಲಿಯೇ ಕೂರಬಾರದು, ಉತ್ತಮ ಅಭ್ಯರ್ಥಿಯನ್ನ ಆಯ್ಕೆ ಮಾಡಲು ಇದು ಸುವರ್ಣ ಅವಕಾಶ, ತಪ್ಪದೆ ಎಲ್ಲರು ಮತದಾನ ಮಾಡುವ ಮೂಲಕ ಮತ ಹಬ್ಬದಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು..

ಶಾಸಕ ಎಸ್ ಎ ರವೀಂದ್ರನಾಥ್ ಮತ ಚಲಾವಣೆ..

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ಎ ರವೀಂದ್ರನಾಥ್, ಅವರು ದಾವಣಗೆರೆ ಶಿರಮಗೊಂಡನಹಳ್ಳಿ ಶಾಲೆಯಲ್ಲಿ ಮತ ಚಲಾವಣೆ ಮಾಡಿದರು..

ಮತಗಟ್ಟೆ 175ರಲ್ಲಿ ಮತ ಚಲಾವಣೆ ಮಾಡಿದ್ದು, ಈ ಭಾರೀ ಶಾಸಕ ರವೀಂದ್ರನಾಥ್ ಸ್ಪರ್ಧೆ ನಡೆಸಿಲ್ಲ, ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಲೋಕಿಕೆರೆ ನಾಗರಾಜ್ ಅವರು ಸ್ಪರ್ಧೆ ನಡೆಸಿದ್ದಾರೆ..

ಸಂಸದ ಜಿಎಂ ಸಿದ್ದೇಶ್ವರ್ ಮತ ಚಲಾವಣೆ..

ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ಮತ ಚಲಾವಣೆ ಮಾಡಿದ್ದಾರೆ, ನಗರದ ಮಾಗನೂರು ಬಸಪ್ಪ ಕಾಲೇಜ್ ನಲ್ಲಿ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ದಾರೆ, ದವಾಣಗೆರೆ ಲೋಕಸಭೆ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ 7 ಕ್ಷೇತ್ರ ಗೆಲ್ಲುತ್ತೇವೆ, ಮತದಾರ ಬಿಜೆಪಿ ಪರವಾಗಿ ಇದ್ದಾನೆ, ಹೀಗಾಗಿ ಈ ಭಾರೀ ಕಮಲ ಅರಳುವುದರಲ್ಲಿ ಸಂಶಯವಿಲ್ಲ, ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತೇವೆ ಎಂದಿದ್ದಾರೆ..