POWER SAMACHARA | KANNADA NEWS | 20-04-2023
ದಾವಣಗೆರೆ: ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ - ಕಾಂಗ್ರೆಸ್ ನೇರ ಪೈಪೋಟಿಗೆ ಇಳಿದಿದೆ.. ಈಗಾಗಲೇ ಕಾಂಗ್ರೆಸ್ ನಿಂದ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅಬ್ಬರದ ಪ್ರಚಾರ ನಡೆಸುತ್ತಿದ್ದು, ಬಿಜೆಪಿ ನಾವೇನು ಕಮ್ಮಿ ಇಲ್ಲ ಎಂಬಂತೆ ಬೃಹತ್ ಮೆರವಣಿಗೆ ಮೂಲಕ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ..
ದಾವಣಗೆರೆ ನಗರದ ನಿಟ್ಟುವಳ್ಳಿ ದುರ್ಗಾಂಭಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಲೋಕಿಕೆರೆ ನಾಗರಾಜ್ ಈ ಭಾರೀ ಉತ್ತರದಲ್ಲಿ ಬಿಜೆಪಿ ಅರಳುತ್ತೆ, ಎದುರಾಳಿ ಕಾಂಗ್ರೆಸ್ ಪಕ್ಷ ಸೋಲಿನ ಭೀತಿಯಿಂದ ಕುಕ್ಕರ್ ಹಂಚುತ್ತಿದ್ದಾರೆ ಎಂದು ದೂರಿದರು..
ಏನೇ ಮಾಡಿದರು 25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ.

ಏನೇ ಮಾಡಿದ್ರು ನಾವು 25 ಸಾವಿರ ಮತಗಳ ಅಂತದಲ್ಲಿ ಗೆಲ್ಲುತ್ತೇವೆ, ಸಾವಿರಾರು ಜನಗಳನ್ನು ನೋಡಿದರೆ ಬಿಜೆಪಿಗೆ ಎಷ್ಟು ಶಕ್ತಿ ಇದೆ ಎನ್ನುವುದು ಗೊತ್ತಾಗುತ್ತದೆ, ನಾನೇನು ಹೊಸ ಮುಖ ಅಲ್ಲ, ಜನರಿಗೆ ಹಳೇ ಮುಖ ಅವರ ಸೇವೆ ಮಾಡಿದ್ದೇನೆ, ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಕಳೆದ ಬಾರಿ ಸೋತ ಬಳಿಕ ಕ್ಷೇತ್ರದಲ್ಲಿ ಮುಖ ತೋರಿಸಿಲ್ಲ, ಅವರು ಜನರಿಗೆ ಹೊಸ ಎಂದು ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ವಾಗ್ದಾಳಿ ನಡೆಸಿದ್ದಾರೆ...