POWER SAMACHARA | KANNADA NEWS | BREKING NEWS| 03-07-2023..

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಮೂರು ತಿಂಗಳಲ್ಲೆ ಪತನ ಆಗುತ್ತೆ ಎಂದು ದಾವಣಗೆರೆಯಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಸ್ಪೋಟಕ ಹೇಳಿಕೆ ನೀಡಿದ್ದಾರೆ..

ಅಜಿತ್ ಪವಾರ್ ರೀತಿಯಲ್ಲಿ ರಾಜ್ಯದಲ್ಲಿ ಕೆಲವರು ಹೊರ ಬರ್ತಾರೆ, ಈ ಸರ್ಕಾರ ಬಹಳ ದಿನಗಳ ಕಾಲ ನಡೆಯಲ್ಲ, ಈ ಸರ್ಕಾರ ಕೇವಲ ಮೂರು ತಿಂಗಳು ಮಾತ್ರ ಇರುತ್ತೆ, ಕಾದು ನೋಡಿ ರಾಜ್ಯದಲ್ಲಿ ಏನಾಗುತ್ತೆ ಅಂತ ಎಂದು ಹೇಳಿದ್ದಾರೆ..

ಜನರಿಂದ ಆಯ್ಕೆಯಾದ ಶಾಸಕರಿಗೆ ಸುಳ್ಳು ಅಧಿಕಾರಕ್ಕೆ ಬಂದೆವು ಅನ್ನೋದು ಕಾಡ್ತಾ ಇದೆ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದ್ದೇವೆ ಅನ್ನೋದು ಅವರಿಗೂ ಕೂಡ ಕಾಡ್ತಾ ಇದೆ, ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿ ಕೂಡ ಆಗಲಿದೆ ಎಂದು ಹೇಳಿದ್ದಾರೆ..

ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರ ನೇಮಕ ವಿಳಂಬ ವಿಚಾರವಾಗಿ ಮಾತನಾಡಿದ ಈಶ್ವರಪ್ಪ, ಕರ್ನಾಟಕ ರಾಜ್ಯ ಅದಕ್ಕೆ ವಿಶೇಷ, ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಆಯ್ಕೆ ಮಾಡ್ತಾರೆ, ಶೀಘ್ರದಲ್ಲೇ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯಾಧ್ಯಕ್ಷರ ನೇಮಕ ಮಾಡ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ..