POWER SAMACHARA | KANNADA NEWS | BREKING NEWS| 05-08-2023..

ಚಿತ್ರದುರ್ಗ : ಆ ಗ್ರಾಮದಲ್ಲಿ ಐದು ದಿನದಿಂದ ಶೋಕ ಮಡುಗಟ್ಟಿದೆ, ನಿಗೂಢ ಸಾವುಗಳಿಗೆ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದೆ, ಸಾವು ಯಾಕಾಯ್ತು ಅನ್ನೋದು ಜಿಲ್ಲಾಡಳಿತಕ್ಕೂ ತಲೆನೋವ್ವು ತರಿಸಿದೆ, ಇನ್ನಷ್ಟೆ ಪ್ರಪಂಚಕ್ಕೆ ಕಾಲಿಡಬೇಕಿದ್ದ ಪುಟ್ಟ ಕಂದಮ್ಮ ಸಹ ಅಸುನೀಗಿದ್ದು ಇಡೀ ಗ್ರಾಮಕ್ಕೆ ಗ್ರಾಮವೇ ಸ್ಮಶಾನವಾಗಿ ಬಿಟ್ಟಿದೆ.. ಅಷ್ಟಕ್ಕೂ ಏನಾಯ್ತು, ಯಾಕಾಯ್ತು ಅನ್ನೋದೆ ನಿಗೂಢ..

ಗ್ರಾಮದಲ್ಲಿ ಅರ್ಧ ಗಂಟೆಗೊಮ್ಮೆ ಅಂಬ್ಯುಲೆನ್ಸ್ ಸೈರನ್ ಸದ್ದು, ಸೈರನ್ ಸದ್ದಿಗೆ ಬೆಚ್ಚಿಬೀಳುತ್ತಿರುವ ಗ್ರಾಮಸ್ಥರು, ಶವದ ಮುಂದೆ ಕಣ್ಣೀರಿಡುತ್ತಿರುವ ಮೃತರ ಸಂಬಂಧಿಗಳು, ಭೂಮಿಗೆ ಬರಬೇಕಿದ್ದ ಪುಟ್ಟ ಕಂದಮ್ಮ ಹೊಟ್ಟೆಯಲ್ಲೇ ಸಾವು.. ಹೌದು.. ಈ ಘನಘೋರ ದುರಂತ ಸಂಭವಿಸಿರೋದು ಚಿತ್ರದುರ್ಗದ ಕವಾಡಿಗರಹಟ್ಟಿ ಗ್ರಾಮದಲ್ಲಿ.. ಐದು ದಿನಗಳಿಂದ ಗ್ರಾಮಕ್ಕೆ ಗ್ರಾಮವೇ ಸ್ಮಶಾನವಾಗಿ ಬಿಟ್ಟಿದೆ, ಅರ್ಧ ಗಂಟೆಗೊಂದರಂತೆ ವಾಂತಿಭೇದಿಯಿಂದ ನರಳುತ್ತಿದ್ದವರು ಆಸ್ಪತ್ರೆ ಸೇರುತ್ತಿದ್ದಾರೆ, ಅಸ್ವಸ್ಥರ ಸಂಖ್ಯೆ 170 ದಾಟಿದೆ, ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆ ರೋಗಿಗಳಿಂದ ತುಂಬಿ ತುಳುಕುತ್ತಿದೆ, ಇತ್ತ ಸಾವಿನ ಸಂಖ್ಯೆ ಐದಕ್ಕೆ ಏರಿದೆ, ಕಲುಷಿತ ನೀರು ದುರಂತ ಪ್ರಕರಣಕ್ಕೆ ಕಣ್ಣುಬಿಡುವ ಮೊದಲೇ ನವಜಾತ ಶಿಶು ಬಾರದ ಲೋಕಕ್ಕೆ ತೆರಳಿದೆ, ವಾಂತಿ ಬೇದಿಯಿಂದ ಜಿಲ್ಲಾಸ್ಪತ್ರೆಗೆ ಉಷಾ ದಾಖಲಾಗಿದ್ದರು, ಉಷಾ 8 ತಿಂಗಳು 10 ದಿನದ ತುಂಬು ಗರ್ಭಿಣಿಯಾಗಿದ್ದು, ಆಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಿದಾಗ ಗರ್ಭದೊಳಗಿನ ಶಿಶು ಹಾರ್ಟ್ ಬಿಟ್ ಸ್ಥಬ್ದವಾಗಿದೆ, ಕೂಡಲೇ ಸಿಜರಿನ್ ಮಾಡುವ ಮೂಲಕ ಶಿಶುವನ್ನು ಹೊರತೆಗೆದಿದ್ದು, ಹೊರ ತೆಗೆಯುವ ಮೊದಲೇ ಗಂಡು ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ನಡೆದಿದೆ, ಈ ಉಷಾ ಅವರ ಸಹೋದರ ಮೊನ್ನೆ ಇದೇ ಪ್ರಕರಣದಲ್ಲಿ ಸಾವನ್ನಪ್ಪಿದ್ದು ಇಡೀ ಕುಟುಂಬ ಕಣ್ಣಿರಲ್ಲಿ ಮುಳುಗಿದೆ.

ಐವರು ಅಮಾನತು..!

ಕವಾಡಿಗರಹಟ್ಟಿಯಲ್ಲಿ ನೀರು ಕುಡಿಯಲು ಯೋಗ್ಯವಿರಲಿಲ್ಲ, ಈ ಕುರಿತು ಮೈಕ್ರೋ ಬಯೋಲಾಜಿಕಲ್ ರಿಪೋರ್ಟ್ ಬಂದಿದೆ, ಕರ್ತವ್ಯ ನಿರ್ಲಕ್ಷ ಈ ಘಟನೆಯಲ್ಲಿ ಮೇಲ್ನೋಟಕ್ಕೆ ಕಂಡುಬರುತ್ತೆ, ಈ ಹಿನ್ನೆಲೆ ಐವರನ್ನ ಸಸ್ಪೆಂಡ್ ಮಾಡಲಾಗಿದೆ, ಎಇಇ ಗಿರಡ್ಡಿ ಮಂಜುನಾಥ್, ಜೂನಿಯರ್ ಇಂಜಿನಿಯರ್ ಕಿರಣ್ ಅಮಾನತ್ತಿಗೆ ಸರಕಾರಕ್ಕೆ ಶಿಫಾರಸ್ಸು ಮಾಡಿದ್ದು, ಸರಕಾರದಿಂದ ಅವರ ಅಮಾನತ್ತು ಮಾಡಲಾಗಿದೆ, ನೀರು ಸರಬರಾಜು ಮಾಡುತ್ತಿದ್ದ ಪ್ರಕಾಶ್ ಬಾಬು, ನೀರಗಂಟೆ ಪ್ರಕಾಶ್, ಸುರೇಶ್ ರನ್ನ ಅಮಾನತ್ ಮಾಡಲಾಗಿದೆ, ರ್ಯಾಪಿಡ್ ಆಕ್ಷನ್ ಟೀಮ್ ಕೂಡ ಬಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾಹಿತಿ ನೀಡಿದ್ದಾರೆ..

ಕೇಂದ್ರ ಸಚಿವ ನಾರಾಯಣಸ್ವಾಮಿ ಗರಂ..!

ಇನ್ನೂ ಜಿಲ್ಲಾಸ್ಪತ್ರೆಗೆ, ಬಸವೇಶ್ವರ ಆಸ್ಪತ್ರೆಗೆ ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು, ಫೈಲ್ ಮೇಂಟೇನ್ ಮಾಡದ ಡಿಎಚ್ ಓ, ನರ್ಸ್ ಗೆ ತರಾಟೆಗೆ ತೆಗೆದುಕೊಂಡರು, ಡೇಂಜರ್ ಟ್ಯಾಂಕ್ ಡೆಮಾಲಿಷ್ ಗೆ ಸೂಚನೆ ನೀಡಿದ್ದೇನೆ, ಎಕೆ ಕಾಲೋನಿಗೆ ವಿಷ ಹಾಕಿದಾರೆ ಎಂದು ಆರೋಪ ಮಾಡಲಾಗುತ್ತಿದೆ, FSLರಿಫೊರ್ಟ್ ಬಂದಿದೆ, ವಿಷದ ಅಂಶ ಇಲ್ಲ ಕಾಲಾರ ರಿಪೋರ್ಟ್ ಬರ್ತಿದೆ, ಟ್ಯಾಂಕರ್ ನಲ್ಲಿ ವಿಷ ಇದ್ದರೆ ಈ ಮಟ್ಟಿಗೆ ಡೆತ್ ಆಗೋದಿಲ್ಲ, ಭೇದಿ ಆಗೋದಿಲ್ಲ, ಇತ್ತ ಕಲುಷಿತ ನೀರು ಇದ್ದರು ಸಹ ಇಷ್ಟೊಂದು ಸಾವಾಗಲ್ಲ, ಏನಾಗಿದೆ ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕಿದೆ, ಮತ್ತೊಂದು ರಿಫೊರ್ಟ್ ಗೆ ಸೂಚನೆ ನೀಡಲಾಗಿದೆ., ಎರಡು ದಿನ ವರದಿ ಬರುತ್ತೆ, ಕಾದು ನೋಡೊಣ, ಟ್ಯಾಂಕರ್ ಇಳಿದು ನೋಡಿದಾಗ ಈ ನೀರು ಪ್ರಾಣಿಗಳು ಕುಡಿಯೋದಕ್ಕೂ ಯೋಗ್ಯವಾಗಿಲ್ಲ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ಪರಿಹಾರ ವಿಳಂಭ; ಡಿಸಿಗೆ ತರಾಟೆ..

ಪ್ರಕರಣ ಐದು ದಿನ ಕಳೆದರು ಜಿಲ್ಲಾಡಳಿತ ಪರಿಹಾರ ನೀಡಿಲ್ಲ, ಸಾವನ್ನಪ್ಪಿದವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದ್ದರು, ಆದರೆ ಸಾವನ್ನಪ್ಪಿ ಮೂರ್ನಾಲ್ಕು ದಿನ ಕಳೆದರು ಪರಿಹಾರ ನೀಡಲು ನಿರ್ಲಕ್ಷ್ಯ ವಹಿಸಲಾಗಿದೆ.

ಕವಾಡಿಗರ ಹಟ್ಟಿಗೆ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ಭೇಟಿ ನೀಡಿದ್ದರು, ಸಿಎಂಗೆ ಕರೆ ಮಾಡಿ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದರು, ಸಚಿವರ ಮನವಿಗೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ತಕ್ಷಣ ಐದು ಲಕ್ಷ ಪರಿಹಾರದ ಚೆಕ್ ವಿತರಿಸಲು ಖಡಕ್ ಸೂಚನೆ ನೀಡಿದರು, ಸ್ಥಳದಲ್ಲಿ ಚೆಕ್ ವಿತರಿಸುತ್ತೇನೆ ಎಂದು ಡಿಸಿ ದಿವ್ಯ ಪ್ರಭು ಹೇಳಿದರು, ಇನ್ನೂ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನಲೆ ಡಿಸಿ ದಿವ್ಯ ಪ್ರಭು ವಿರುದ್ದ ಸಚಿವ ತಿಮ್ಮಾಪಿರ ಗರಂ ಆದರು, ಈ ಕೂಡಲೇ ಚೆಕ್ ವಿತರಿಸಿ ಎಂದು ಸೂಚನೆ ನೀಡಿದರು..

ಎಸ್ಪಿ ಏನೂ ಹೇಳಿದ್ರೂ..!

ಕವಾಡಿಗರಹಟ್ಟಿಯಲ್ಲಿ ಎಸ್ಪಿ ಕೆ. ಪರುಶುರಾಮ್ ಹೇಳಿಕೆ ನೀಡಿದ್ದಾರೆ, ಘಟನೆ ಸಂಬಂಧ ಟ್ಯಾಂಕ್ ನಲ್ಲಿನ ನೀರು, ಮೃತರ ಹಾಗೂ ಅಸ್ವಸ್ಥರ ಮನೆಯ ನೀರಿನ ಸ್ಯಾಂಪಲ್ ಕಲೆಕ್ಟ್ ಮಾಡಲಾಗಿತ್ತು, ಈ ಸ್ಯಾಂಪಲ್ ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು, ಎಫ್ಎಸ್ಎಲ್ ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಅಂತಾ ವರದಿ ಬಂದಿದೆ, ವರದಿಯನ್ನು ಈಗಾಗಲೇ ಜಿಲ್ಲಾಡಳಿತ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನೀಡಿದ್ದೇವೆ, ದಾವಣಗೆರೆಯ ಆರ್ ಎಫ್ಎಸ್ಎಲ್ ನಿಂದ ಈ ವರದಿ ಬಂದಿದೆ, ಎಫ್ಎಸ್ಎಲ್ ಪರೀಕ್ಷೆ ಎರಡು ಬಾರಿ ಮಾಡಲು ಅವಕಾಶವಿಲ್ಲ, ಗೊಂದಲಗಳಿದ್ದರೆ ಮೊದಲೇ ಅವರು ರಿಪಿಟೇಶನ್ ಮಾಡಿ ಮಾಡ್ತಾರೆ, ಈಗ ಮೃತರಾದವರ ಯುಡಿಆರ್ ಮಾಡಿದೀವಿ, ಪರೀಕ್ಷೆಗೆ ಕಳಸಿ ವರದಿ ಪಡೀತಿವಿ, ತನಿಖೆ ಪ್ರಗತಿಯ ಹಂತದಲ್ಲಿದೆ, ಅಂತಿಮ ವರದಿ ಸಲ್ಲಿಸುವವರೆಗೆ ಮಾಹಿತಿ ಬಹಿರಂಗ ಪಡಿಸಲ್ಲ ಎಂದಿದ್ದಾರೆ..

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಭೇಟಿ..

ಕವಾಡಿಗರಹಟ್ಟಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗಮಿಸಿ, ಘಟನೆ ಕುರಿತು ಡಿಸಿ ದಿವ್ಯಾಪ್ರಭು ರವರಿಂದ ಮಾಹಿತಿ ಪಡೆದರು, ಅಸ್ವಸ್ಥರ ಚಿಕಿತ್ಸೆಗೆ ಮಾಡಿಕೊಂಡ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದು, ಕೇವಲ ದಲಿತರ ಕಾಲೋನಿಯಲ್ಲಿ ಮಾತ್ರ ಏಕೆ ಹೀಗಾಗಿದೆ ಅಂತಾ ಡಿಸಿಗೆ ಸಚಿವರು ಪ್ರಶ್ನೆ ಮಾಡಿದರು..

ಕೇಸನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಅಂತಾ ಸಚಿವರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.. ಇನ್ನೂ ಈ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕವಾಡಿಗರಹಟ್ಟಿಯ ದುರ್ಘಟನೆ ನಮ್ಮೆಲ್ಲರಿಗೂ ನೋವು ತಂದಿದೆ, ಪ್ರಕರಣದ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಲು ಸಿಎಂ ಸೂಚಿಸಿದ್ದಾರೆ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲು ತೀರ್ಮಾನ ಮಾಡಿದ್ದು, ಇಂದು ಮೂರು ಕುಟುಂಬಕ್ಕೆ ತಲಾ 10ಲಕ್ಷದ ಚೆಕ್ ವಿತರಣೆ ಮಾಡಲಾಗುತ್ತಿದೆ, ಈ ರೀತಿಯ ಘಟನೆ ಪುನರಾವರ್ತನೆ ಆಗಬಾರದು, ಘಟನೆಗೆ ಕಾರಣವೇನೆಂಬುದರ ಬಗ್ಗೆ ಅಧಿಕಾರಿಗಳಿಂದ ಸೂಕ್ತ ವರದಿ ಪಡೆಯುತ್ತೇವೆ, ಇಲಾಖೆಯ ಲೋಪದೋಷವಿದ್ದರೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ, ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ಧಿಗೆ ನಾವು ಸಿದ್ದವಾಗಿದ್ದೇವೆ, ಸ್ಪಷ್ಟ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಜರುಗಿಸುತ್ತೇವೆ ಎಂದರು..

ಒಟ್ಟಾರೆ ಕವಾಡಿಗರಹಟ್ಟಿ ಸಾವು ನೋವುಗಳು ಯಾಕಾಗ್ತಿವಿ ಎನ್ನೋದೆ ನಿಗೂಢ ಮತ್ತು ಯಕ್ಷ ಪ್ರಶ್ನೆಯಾಗಿ ಉಳಿದಿದೆ, ಮತ್ತಷ್ಟು ಸಾವು ಸಂಭವಿಸುವ ಮುನ್ನ ಜಿಲ್ಲಾಡಳಿತ, ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ..