POWER SAMACHARA | KANNADA NEWS | BIG BREKING NEWS|17-05-2022

ದಾವಣಗೆರೆ: ಭಾರೀ ಹಗ್ಗಜಗ್ಗಟ್ಟಾದ ನಡುವೆ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಎರಡನೇ ಭಾರೀಗೆ ಸಿದ್ದರಾಮಯ್ಯ ಆಯ್ಕೆಗೊಂಡಿದ್ದಾರೆ ಎನ್ನಲಾಗಿದೆ, ಆದರೆ ಅಧಿಕೃತವಾಗಿಲ್ಲ..

ನವ ದೆಹಲಿಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ನಡೆದ ಮೂರು ಸುತ್ತಿನ ಮಾತುಕತೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದ್ದು, ಶಾಸಕರ ಬಲದೊಂದಿಗೆ ಸಿದ್ದರಾಮಯ್ಯ ಆಯ್ಕೆಗೊಂಡಿದ್ದಾರೆ..?

ಪಕ್ಷದಲ್ಲಿ ಆಂತರಿಕವಾಗಿ ಈಗಾಗಲೇ ಘೋಷಣೆ ಮಾಡಲಾಗಿದ್ದು, ಇಂದು ಮಧ್ಯಾಹ್ನ ಒಂದು ಗಂಟೆಗೆ ಅಥವಾ ಸಂಜೆ ಒಳಗಾಗಿ ಅಧಿಕೃತವಾಗಿ ಘೋಷಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ..

ಡಿಕೆ ಪಟ್ಟು, ಸಂಧಾನ ಸಕ್ಸಸ್..

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಅಧ್ಯಕ್ಷನಾಗಿ ಪಕ್ಷ ಅಧಿಕಾರಕ್ಕೆ ತಂದಿದ್ದು ಮೊದಲ ಅವಧಿಯಲ್ಲಿ ಸಿಎಂ ಸ್ಥಾನ ನೀಡಿ ಎಂದು ಪಟ್ಟು ಹಿಡಿದು ಕೂತಿದ್ದರು, ಎಲ್ಲವನ್ನು ಗಮನಿಸಿದ ಹೈಕಮಾಂಡ್ ಮುಂಬರುವ ಲೋಕಸಭೆ ಚುನಾವಣೆ ದೃಷ್ಠಿ ಇಟ್ಟುಕೊಂಡು ಮೊದಲು ಅವಧಿಗೆ ಸಿದ್ದರಾಮಯ್ಯ ಅವರನ್ನು ಆಯ್ಕೆಗೊಳಿಸಿದೆ, ಉಳಿದಂತೆ ಮುಂದಿನ ದಿನಗಳಲ್ಲಿ 60:60 ಸೂತ್ರ ಅಂದರೆ 30 ತಿಂಗಳಿಗೆ ಒಬ್ಬರಂತೆ ಸಿಎಂ ಆಯ್ಕೆಗೊಳಿಸಲಾಗಿದೆ ಎಂದು ಎಂದು ತಿಳಿದು ಬಂದಿದ್ದು, ಎಲ್ಲವನ್ನು ವರಿಷ್ಠರು ಸ್ಪಷ್ಟಪಡಿಸಬೇಕಿದೆ..

ನಾಳೆ ಪ್ರಮಾಣ ವಚನ..?

ನಾಳೆ ಸಂಜೆ ವಿಧಾನಸೌಧ ಆವರಣ ಅಥವಾ ಕಂಠಿರವ ಸ್ಟೂಡಿಯೋದಲ್ಲಿ ಪ್ರಮಾಣ ವಚನಕ್ಕೆ ಸಿದ್ದರಾಮಯ್ಯ ಬೆಂಬಲಿಗರು ಸಿದ್ದತೆ ಮಾಡಲು ತಯಾರಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ..