POWER SAMACHARA | KANNADA NEWS |23-04-2023
ದಾವಣಗೆರೆ : ನಗರದ ಜಿಎಂಐಟಿ ಗೆಸ್ಟ್ ಹೌಸ್ನ ಲ್ಲಿಂದು ಕುಂದುವಾಡ ಯುವ ಮುಖಂಡ ಕರಿಗಾರ್ ಮಂಜುನಾಥ್ ಹಾಗೂ ನೂರಾರು ಯುವಕರು ಬಿಜೆಪಿ ಸೇರ್ಪಡೆಗೊಂಡರು..
ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಂಜುನಾಥ್, ಟಿಕೆಟ್ ಸಿಗದ ಹಿನ್ನಲೆ, ಸಂಸದ ಜಿಎಂ ಸಿದ್ದೇಶ್ವರ್, ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಸೇರಿದಂತೆ ವಿವಿಧ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕರಿಗಾರ್ ಮಂಜುನಾಥ್, ಜೆಡಿಎಸ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿದ್ದೆ ಆದರೆ ಕುತಂತ್ರದಿಂದ ಟಿಕೆಟ್ ತಪ್ಪಿಸಿದರು, ಈ ಹಿನ್ನಲೆ ನನ್ನ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಿದ್ದೇನೆ, ಉತ್ತರ ಮತ್ತು ದಕ್ಷಿಣದಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು..
ಸಂಸದ ಜಿಎಂ ಸಿದ್ದೇಶ್ವರ್ ಮಾತನಾಡಿ, ಅನೇಕ ಯುವಕರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ, ಯುವ ಮುಖಂಡ ಕರಿಗಾರ್ ಮಂಜುನಾಥ್ ಅವರು ಬಿಜೆಪಿಗೆ ಬಂದಿರುವುದು ಮತ್ತಷ್ಟು ಶಕ್ತಿ ನೀಡಿದೆ, ಮಂಜುನಾಥ್ ಉತ್ತಮ ನಾಯಕತ್ವ ಹೊಂದಿದ್ದಾರೆ, ಅವರ ಬೆಂಬಲಿಗರು ಸಹ ಸೇರ್ಪಡೆಯಾಗಿರುವುದು ಖುಷಿ ವಿಚಾರ, ಈ ಸೇರ್ಪಡೆಯಿಂದ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಅನುಕುಲ ಆಗಲಿದೆ ಎಂದರು..
ಈ ಸಂದರ್ಭದಲ್ಲಿ ಉತ್ತರ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ದೂಡಾ ಮಾಜಿ ಸದಸ್ಯರಾದ ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಬಿಎಂ ಸತೀಶ್, ಶ್ರೀನಿವಾಸ್ ದಾಸಕರಿಯಪ್ಪ, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್ ಜಿ ಗಣೇಶಪ್ಪ, ಸಂಗನಗೌಡ್ರು, ಬಿಎಸ್ ಜಗದೀಶ್, ಕಾರ್ಪೋರೇಟರ್ ಪ್ರಸನ್ನಕುಮಾರ್, ಅಣ್ಣಪ್ಪ, ಮಹೇಶಪ್ಪ, ನವೀನ್ ಸೇರಿದಂತೆ ಮತ್ತಿತರರಿದ್ದರು..