POWER SAMACHARA | KANNADA NEWS | 29-04-2023
ದಾವಣಗೆರೆ: ಅಲ್ಲಿದ್ದವರು ಒಮ್ಮೆ ದಿಗ್ಭ್ರಮೆ ಆಗಿದ್ದರು, ಅವರು ಬರ್ತಾ ಇರೋ ಮಾಹಿತಿ ಪೊಲೀಸರಿಗೂ ಇರಲಿಲ್ಲ, ಯಾರಿಗೂ ಮಾಹಿತಿ ನೀಡದೇ ಪ್ರಧಾನಿ ನರೇಂದ್ರ ಮೋದಿಯವರು ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವಪಟ್ಟಣಕ್ಕೆ ಬಂದು ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಮತ ಯಾಚನೆ ಮಾಡಿದರು, ಮೋದಿ ಅವರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು, ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ನೂಕು ನುಗ್ಗಲು ಉಂಟಾಯಿತು..
I
ನಡ್ಡಾಗಿಂತ ಜೂ. ಮೋದಿಗೆ ಸೆಲ್ಫಿಗೆ ಮುಗಿಬಿದ್ದ ಜನ..
ಅಯ್ಯೋ ಇದೆಲ್ಲ ನಿಜವೇ ಎಂದುಕೊಂಡರೇ, ಆ ವ್ಯಕ್ತಿಯನ್ನ ನೋಡಿದರೇ ನಿಜವೇ ಅನ್ನಿಸುತ್ತದೆ, ಅಷ್ಟಕ್ಕೂ ಅಲ್ಲಿಗೆ ಬಂದಿದ್ದು, ಜೂನಿಯರ್ ನರೇಂದ್ರ ಮೋದಿ, ಹೌದು.. ಮೋದಿ ವೇಷ ಧರಿಸಿದ್ದು ಬೇರೆ ಯಾರು ಅಲ್ಲ ಉಡುಪಿಯ ಸದಾನಂದ ನಾಯ್ಕ್, ಥೇಟ್ ಮೋದಿಯವರ ರೀತಿ ಕಾಣುವ ಸದಾನಂದ ಅವರು ಬಸವಪಟ್ಟಣಕ್ಕೆ ಆಗಮಿಸಿ ಪ್ರಚಾರ ನಡೆಸಿದ್ದರು..
ಎಲ್ಲರು ಒಮ್ಮೆ ಶಾಕ್ ಆಗಿದ್ದರು, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರ್ಯಾಲಿಗೂ ಮುಂಚೆ ಆಗಮಿಸಿದ್ದ ಜೂ. ಮೋದಿಯನ್ನ ನೋಡಲು ಜನರು ಮುಗಿಬಿದ್ದಿದ್ದರು. ನಡ್ಡಾಗಿಂತ ಹೆಚ್ಚಾಗಿಯೇ ಜೂ. ಮೋದಿ ಜೊತೆ ಜನ ಸೆಲ್ಫಿಗೆ ಮುಗಿಬಿದ್ದಿದ್ದರು..