POWER SAMACHARA | KANNADA NEWS | 29-04-2023
ದಾವಣಗೆರೆ : ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರೋಡ್ ಶೋ ನಡೆಸಿ, ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ..

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಪಟ್ಟಣದ ಗ್ರಾಮ ಪಂಚಾಯತ್ ನಿಂದ ಮಾವಿನಕಟ್ಟೆ ರಸ್ತೆವರೆಗೂ ಭರ್ಜರಿ ರೋಡ್ ಶೋ ಮಾಡಿ, ಬಸವರಾಜ್ ನಾಯಕ್ ಪರ ಪ್ರಚಾರ ಮತ್ತು ಮತಯಾಚನೆ ಮಾಡಿದ್ರು,

ಪಕ್ಷದ ಧ್ವಜ ಹಿಡಿದು ರೋಡ್ ಶೋನಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ರು, ಲಂಬಾಣಿ ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ ಪ್ರದರ್ಶನವನ್ನ ಬಂಜಾರ ಸಮಾಜದ ಮಹಿಳೆಯರು ನಡೆಸಿದ್ರು, ನಡ್ಡಾಗೆ ಸಂಸದ ಜೆ ಎಂ ಸಿದ್ದೇಶ್ವರ, ಹಾಲಿ ಶಾಸಕ ಪ್ರೊ.ಲಿಂಗಣ್ಣ ಅಭ್ಯರ್ಥಿ ಬಸವರಾಜ ನಾಯಕ್ ಸಾಥ್ ನೀಡಿದ್ರು..

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮಾತನಾಡುತ್ತಿದೆ, ಡಿಕೆಶಿ, ರಾಗಾ, ಸೋನಿಯಾ ಎಲ್ಲರೂ ಬೇಲ್ ಮೇಲೆ ಹೊರಗಡೆ ಇದ್ದಾರೆ, ಇಂತವರು ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ..

ಅರ್ಕಾವತಿ ಬಡಾವಣೆ ಅವ್ಯವಹಾರ ಯಾರ ಕಾಲದಲ್ಲಿ ಆಯಿತು.. ಸಿದ್ದರಾಮಯ್ಯ ಸರ್ಕಾರದಲ್ಲಿ ಆಗಿದೆ, ಶಿಕ್ಷಕರು, ಪೊಲೀಸರ ನೇಮಕಾತಿ ಹಗರಣ ಆಗಿದ್ದು ಸಿದ್ದು ಕಾಲದಲ್ಲಿ ಆಗಿದ್ದು, ಸ್ಕೈ ಸ್ಟೀಲ್ ಬ್ರಿಡ್ಜ್ ಹಗರಣ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ, ಹೀಗಾಗಿ ಕಾಂಗ್ರೆಸ್ ನ್ನ ಮನೆಗೆ ಕಳುಹಿಸಿ, ಬಸವರಾಜ್ ನಾಯಕ್ ಅವರ ಆಯ್ಕೆ, ಸಮಾಜದ ವಿಕಾಸಕ್ಕೆ ಅಗತ್ಯವಾಗಿದೆ ಎಂದರು..

ರೈತರ ಪಟ್ಟಿ ಕೇಳಿದಾಗ ಕುಮಾರಸ್ವಾಮಿ ಕಡಿಮೆ ರೈತರ ಹೆಸರು ಕೊಟ್ಟು, ತಪ್ಪು ಮಾಹಿತಿ ನೀಡಿದ್ದರು, ಮುಂದೆ ಬಿಎಸ್ ವೈ 54 ಲಕ್ಷ ರೈತರ ಅಧಿಕೃತವಾಗಿರುವ ಪಟ್ಟಿ ನೀಡಿದರು, ಇಂದು ಆ ರೈತನ ಖಾತೆಗೆ 2000 ಹಣ ನೀಡಲಾಗುತ್ತಿದೆ, ಲಿಂಗಾಯಿತರಿಗೆ, ಪಂಚಮಸಾಲಿ ಸಮಾಜಕ್ಕೆ ಬಿಜೆಪಿ ಮೀಸಲಾತಿ ನೀಡಿದೆ, ಆದರೆ ಕಾಂಗ್ರೆಸ್ ಸರ್ಕಾರ ಈ ಮೀಸಲಾತಿ ತೆಗೆಯುತ್ತೇವೆ ಎಂದಿದ್ದಾರೆ, ಹೀಗಾಗಿ ಕಾಂಗ್ರೆಸ್ ಸರ್ಕಾರವನ್ನ ಅಧಿಕಾರಕ್ಕೆ ತರಬೇಡಿ ಎಂದ ಜೆಪಿ ನಡ್ಡಾ ಕರೆ ನೀಡಿದ್ದಾರೆ...