<strong>POWER SAMACHARA | KANNADA NEWS | BREKING NEWS| 02-10-2023..</strong> <strong>ದಾವಣಗೆರೆ:</strong> ಲಿಂಗಾಯಿತ ಅಧಿಕಾರಿಗಳು ಮೂಲೆ ಗುಂಪು ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆ ರಾಜಕೀಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ, ಈ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿರುವ ಹೊಸದುರ್ಗ ಕನಕ ಪೀಠದ ಈಶ್ವರಾನಂದಪುರಿ ಸ್ವಾಮಿಜಿ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಸಿದ್ದರಾಮಯ್ಯ ರಾಜ್ಯ ಕಂಡ ಅಪರೂಪದ ರಾಜಕಾರಣಿ, ಬಡವರ ಪರ ಇರುವ ಜನನಾಯಕ ಎಲ್ಲಾ ಸಮುದಾಯದವರಿಗೂ ಒಳ್ಳೆಯದು ಮಾಡುತ್ತಿದ್ದಾರೆ ಎಂದಿದ್ದಾರೆ.. <img class="aligncenter wp-image-2575 size-full" src="https://powersamachara.com/wp-content/uploads/2023/10/eshvaranandhapuri-swamiji.jpg" alt="" width="870" height="570" /> ಕಳೆದ ಭಾರೀ, ಈ ಭಾರೀ ಸಚಿವ ಸಂಪುಟದಲ್ಲಿ ಎಲ್ಲ ಜನಾಂಗದವರಿಗೆ ಪ್ರಾತಿನಿಧ್ಯ ಕೊಟ್ಟಿರುವ ಧೀಮಂತ ನಾಯಕ ಸಿದ್ದರಾಮಯ್ಯನವರು, ಹಿಂದುಳಿದ ನಾಯಕ ಸಿಎಂ ಸ್ಥಾನ ಏರಿದ್ದರಿಂದ ಈ ರೀತಿ ಹೇಳಿಕೆ ಬರುತ್ತಿವೆ, ಎಲ್ಲಾ ಸಮಾಜವನ್ನು ಜೊತೆಗೆ ಕರೆದುಕೊಂಡು ಹೋಗುವ ನಾಯಕ ಸಿದ್ದರಾಮಯ್ಯರಿಗೆ ನಮ್ಮ ಬೆಂಬಲ ಇದೆ, 135 ಶಾಸಕರು, ರಾಜ್ಯದ ಜನರ ಬೆಂಬಲ ಅವರಿಗೆ ಎಂದು ಶ್ರೀಗಳು ಹೇಳಿಕೆ ನೀಡಿದ್ದಾರೆ.. <h3><strong>ಶಾಮನೂರು ಹೇಳಿಕೆ ಅಪ್ರಸ್ತುತ..!</strong></h3> ಸಿಎಂ ಒಳ್ಳೆಯ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶಾಮನೂರು ಹೇಳಿಕೆ ಅಪ್ರಸ್ತುತವಾಗಿದೆ, ಶಾಮನೂರು ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಮಂತ್ರಿ ಇದ್ದಾರೆ ಲಿಂಗಾಯಿತರು ಏಳು ಜನ ಮಂತ್ರಿಗಳು ಕೂಡ ಇದ್ದಾರೆ, ಅನ್ಯಾಯ ಆಗಿದ್ದರೆ ಕೂತು ಬಗೆಹರಿಸಿಕೊಳ್ಳಲಿ, ಬಹಿರಂಗ ಹೇಳಿಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದಿದ್ದಾರೆ, ಶಾಸಕಾಂಗದಲ್ಲಿ ಒಪ್ಪಿಗೆ ಆಗಿ ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಮಾಡಲಾಗಿದೆ, ಲಿಂಗಾಯಿತರ ಅಧಿಕಾರಿಗಳಿಗೆ ಸ್ಥಾನ ಕೊಟ್ಟಿಲ್ಲ ಅನ್ನೋದು ಒಪ್ಪಲು ಸಾಧ್ಯವಿಲ್ಲ, ಶಾಮನೂರು ಸಿಎಂ ಭೇಟಿ ಮಾಡಿ ಸಮಸ್ಯೆ ಸರಿಪಡಿಸಿಕೊಳ್ಳಲು ಮುಂದಾಗಲಿ ಎಂದು ಹೇಳಿಕೆ ನೀಡಿದ್ದಾರೆ..