POWER SAMACHARA | KANNADA NEWS | BREKING NEWS| 16-06-2023..

ದಾವಣಗೆರೆ : ಮತಾಂತರ ನಿಷೇಧ ಕಾಯ್ದೆ ವಾಪಾಸ್ ಹಿನ್ನಲೆ ದಾವಣಗೆರೆಯಲ್ಲಿ ಅರಣ್ಯ-ಪರಿಸರ ಇಲಾಖೆ ಸಚಿವ ಈಶ್ವರ್ ಖಂಡ್ರೆ ಹೇಳಿಕೆ ನೀಡಿದ್ದಾರೆ, ಮತಾಂತರ ನಿಷೇಧ ವಾಪಸ್ ಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕಿದೆ, ಯಾವುದು ಆಕ್ರೋಶ ಇಲ್ಲ, ಬಿಜೆಪಿ ಸಮಾಜ ಹೊಡೆಯುವುದಕ್ಕೆ ಹೊರಟ್ಟಿತ್ತು, ಜಾತಿ ಧರ್ಮದ ಮಧ್ಯೆ ಹೊಡೆದಾಳುವ ನೀತಿ ಅನುಸರಿಸುತ್ತಿದ್ದರು, ಭಾವನಾತ್ಮಕವಾಗಿ ಕೆರಳಿಸಿ ದಾರಿ ತಪ್ಪಿಸುವ ಕೆಲಸ ಮಾಡಿದ್ರು, ಅದನ್ನು ನಾವು ತಡೆಗಟ್ಟಿದ್ದೇವೆ ಎಂದರು.

ಬಿಜೆಪಿ ಕಾಲದಲ್ಲಿ ವಿದ್ಯುತ್ ಬಿಲ್ ಏರಿಕೆ

ಬಿಜೆಪಿಯವರು ನಿರುದ್ಯೋಗಿಗಳಾಗಿದ್ದಾರೆ, ಅವರಿಗೆ ಉದ್ಯೋಗ ಇಲ್ಲ, ಕೆಲಸ ಇಲ್ಲ ಅಂತಾ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ, ವಿದ್ಯುತ್ ದರ ಏರಿಸಿದ್ದೇ ಅವರು, ಅವರ ಕಾಲದಲ್ಲೇ ದರ ಏರಿಕೆ ಆಗಿದೆ ಎಂದರು..

ಅಂತಹದ್ದೇನು ಕಂಡಿಷನ್ ಇಲ್ಲ..!

ಗ್ಯಾರಂಟಿಯಲ್ಲಿ ಕಂಡಿಷನ್ ಇಲ್ಲ, ಕರ್ನಾಟಕದಲ್ಲಿರಬೇಕು ಅಂದಿದ್ದು ಕಂಡಿಷನ್ನಾ.? ಯಾವುದೇ ಕಾರ್ಯಕ್ರಮ ಜಾರಿ ಮಾಡಬೇಕಾದ್ರೆ ಒಂದು ವ್ಯವಸ್ತೆ ಇರಬೇಕಲ್ವಾ, 99% ಜನರಿಗೆ ಲಾಭ ಆಗುತ್ತದೆ ಎಂದರು..

ಕಾಲಮಿತಿಯಲ್ಲಿ ವಿಲೇವಾರಿ

ಬಗರಹುಕ್ಕುಂ ವಿಲೆ ಪೆಂಡಿಂಗ್ ಇದೆ, ಬಗರಹುಕ್ಕುಂ ಸಮಿತಿ ಚರ್ಚೆ ಆಗುತ್ತಿದೆ, ಸಚಿವ ಸಂಪುಟದಲ್ಲಿ ಕೃಷ್ಣ ಭೈರೇಗೌಡರು ಸುತ್ತೋಲೆ ಹೊರಡಿಸಿದ್ದಾರೆ, ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತೆ, ನ್ಯಾಯ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತದೆ, ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಡಿಸಿ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು..