POWER SAMACHARA | KANNADA NEWS | BREKING NEWS| 06-06-2023

ದಾವಣಗೆರೆ: ಗರ್ಭಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಚಿಕಿತ್ಸೆಗೆ ಆರ್ಥಿಕ ನೆರವು ಬೇಕಿದೆ ಎಂದು ನೊಂದ ಮಹಿಳೆ ನಿರ್ಮಲ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ತಮ್ಮ ನೋವು ತೋಡಿಕೊಂಡ ನಿರ್ಮಲಾ ಅವರು ಎರಡು ವರ್ಷದಿಂದ ಖಾಯಿಲೆಯಿಂದ ಬಳಲುತ್ತಿದ್ದೇನೆ. ಸಂಬಂಧಿಕರು ಯಾರೂ ನೆರವು ನೀಡುತ್ತಿಲ್ಲ. ಭಗತ್‌ಸಿಂಗ್ ನಗರದಲ್ಲಿ ಸಹೋದರಿಯರೊಂದಿಗೆ ವಾಸವಾಗಿದ್ದೇನೆ. ಮೆಸ್ ನಲ್ಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಜೀವನ ಸಾಗಿಸುವುದೇ ಕಷ್ಟಕರವಾಗಿದೆ ಇದರ ಮೇಲೆ ಗರ್ಭಕೋಶದ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಬೇಕಿದೆ ಆಪರೇಷನ್ ಮಾಡಿಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ, ಅದಕ್ಕೆ ತಗುಲುವ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ನನ್ನ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಿದೆ ಎಂದರು.

ನನ್ನ ಸಹೋದರಿಯರಿಬ್ಬರನ್ನೂ ನಾನೇ ಸಾಕಬೇಕಾಗಿದೆ, ಜೀವನ ನಿರ್ವಹಣೆ ಅತ್ಯಂತ ಕಷ್ಟವಾಗಿದೆ ಆದ್ದರಿಂದ ದಾನಿಗಳು ನೆರವು ನೀಡಬೇಕು ಎಂದರು.