POWER SAMACHARA | KANNADA NEWS | BREKING NEWS| 04-10-2023..
ದಾವಣಗೆರೆ : ಮೀಸಲಾತಿ ಬೇಕಂದ್ರೆ ಬಸ್ಸಿಗೆ ಬೆಂಕಿ ಹಚ್ಚಿ ಕಲ್ಲು ತೂರಿ ಎಂದು ದಾವಣಗೆರೆಯಲ್ಲಿ ಹಡಪದ ಶ್ರೀಗಳಿಂದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ, ದಾವಣಗೆರೆಯಲ್ಲಿ ನಡೆದ ಹಡಪದ ಜಯಂತಿ, ಜನಜಾಗೃತಿ ಸಮಾವೇಶದಲ್ಲಿ ಮುದ್ದೆಬಿಹಾಳ್ ತಂಗಡಗಿ ಹಡಪದ ಮಠದ ಶ್ರೀ ಅನ್ನದಾನಿ ಭಾರತಿ ಹಡಪದ ಅಣ್ಣಪ್ಪ ಸ್ವಾಮೀಜಿ ವಿವಾದ ಸೃಷ್ಟಿಸಿದ್ದು, ಯಾರು ಸಹ ಕರೆದು ಮೀಸಲಾತಿ ಸೌಲಭ್ಯ ಕೊಡೋದಿಲ್ಲ, ಮಕ್ಕಳ ಭವಿಷ್ಯಕ್ಕಾಗಿ ಹೋರಾಟ ಅವಶ್ಯಕವಾಗಿದೆ, 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕಿದೆ, ಮಕ್ಕಳ ಭವಿಷ್ಯ ಉಜ್ವಲ ಆಗಬೇಕು ಎಂದರೆ ಬೀದಿಗೆ ಇಳಿಯಿರಿ, ಬೀದಿಗೆ ಇಳಿದು ಕಲ್ಲು ತೂರಿ, ಬೆಂಕಿ ಹಚ್ಚಿ ಎಂದು ಪ್ರಚೋದಿಸಿದ್ದಾರೆ..
ಸೌಲಭ್ಯ ಕೊಡುತ್ತೇವೆ ಎಂದು ಯಾರು ಮುಂದೆ ಬರಲ್ಲ, ತಡ ಮಾಡದೇ ಹೋರಾಟ ಮಾಡಬೇಕಿದೆ, ಆಗ ಸವಲತ್ತು ಸಿಗುತ್ತವೆ, ಸುಮ್ ಸುಮ್ ನೆ ಸೌಲಭ್ಯ ಯಾರು ಕೊಡುವುದಿಲ್ಲ, ನಿಮ್ಮ ಹಕ್ಕು ಕಿತ್ತುಕೊಳ್ಳಿ, ನೀವೆ ಬೆಂಕಿ ಹಚ್ಚಿ, ಇಲ್ಲ ಎಂದರೆ ನಿಮ್ಮ ಹಕ್ಕುಗಳನ್ನು ಮೂಟೆ ಕಟ್ಟೆ ಇಡಿ ಎಂದ ಹಡಪದ ಶ್ರೀ ವಿವಾದಾತ್ಮಕ ಹೇಳಿಕೆ ನೀಡಿದ್ದು ಸಂಚಲನಕ್ಕೆ ಕಾರಣವಾಗಿದೆ..