POWER SAMACHARA | KANNADA NEWS |19-05-2023

ದಾವಣಗೆರೆ: ಮಾದಿಗ ಸಮುದಾಯದ ಮಹಾಶಕ್ತಿಯಾಗಿರುವ ಹೆಚ್. ಆಂಜನೇಯರವರು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಒಳ ಮೋಸದಿಂದ ಚುನಾವಣೆಯಲ್ಲಿ ಸೋತಿದ್ದಾರೆ.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಅವರ ಸೇವೆ ಪರಿಗಣಿಸಿ ಪರಿಷತ್ ಸದಸ್ಯತ್ವ ನೀಡಿ ಸಚಿವ ಸಂಪುಟದಲ್ಲಿ ಸೇರ್ಪಡೆಯೊಂದಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟ ಆಗ್ರಹಿಸಿದೆ..

ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಒಕ್ಕೂಟದ ರಾಜ್ಯ ಸಂಚಾಲಕರಾದ ಹೆಚ್.ಮಲ್ಲೇಶ್ ಮಾತನಾಡಿ, 1970 ರಲ್ಲಿ ದಾವಣಗೆರೆ ನಗರ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, 1973 ರಲ್ಲಿ ಕಾಂಗ್ರೆಸ್ ಸೇವಾದಳದ ದಾವಣಗೆರೆ ತಾಲೂಕು ಅಧ್ಯಕ್ಷರಾಗಿ 1974 ರಲ್ಲಿಯೆ ಕಾಂಗ್ರೆಸ್ ಪಕ್ಷಕ್ಕೆ ಕ್ರಿಯಾಶೀಲ ಸದಸ್ಯರಾಗಿ ಸೇರಿ ತಮ್ಮ ರಾಜಕೀಯ ಪ್ರಯಾಣ ಆರಂಭಿಸಿದ ಅವರು ರಾಜಕಾರಣದಲ್ಲಿ ಹಿಂತಿರುಗಿ ನೋಡಲಿಲ್ಲ. 2004 ರಲ್ಲಿ ಭರಮಸಾಗರ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 2012 ರಲ್ಲಿ ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿಯಾಗಿ ಈವರೆಗೆ ಸತತವಾಗಿ ಸೇವೆ ಸಲ್ಲಿಸಿದ್ದಾರೆ. 2013 ರಲ್ಲಿ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. 2013 ರಿಂದ 2018 ರವರೆಗೆ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯ ಸಚಿವರಾಗಿ 2013ರ ಬೆಳಗಾವಿ ಅಧಿವೇಶನದಲ್ಲಿ ಎಸ್. ಸಿ. ಎಸ್. ಪಿ,ಟಿ.ಎಸ್ .ಪಿ ಕಾಯಿದೆಯನ್ನು ದೇಶದಲ್ಲೇ ಪ್ರಪ್ರಥಮವಾಗಿ ರಾಜ್ಯದಲ್ಲಿ ಮಂಡಿಸಿ ಜಾರಿಗೊಳಿಸಿದ ಕೀರ್ತಿ ಅವರದ್ದಾಗಿದೆ. ಮಾದಿಗ ಸಮುದಾಯದ ನಾಡಿನ ಬಹಳದೊಡ್ಡ ಶಕ್ತಿಯಾಗಿರುವ ಎಚ್.ಆಂಜನೇಯ ಅವರನ್ನು ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಸದಸ್ಯರಾಗಲು ಅವಕಾಶ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಹೆಗ್ಗೆರೆ ರಂಗಪ್ಪ, ಕುಕ್ಕವಾಡ ಮಲ್ಲೇಶ್,ಕಣ್ಣಾಳ್ ಅಂಜನಪ್ಪ,ಅಳಗವಾಡಿ ನಿಂಗರಾಜ್,ರಾಮಚಂದ್ರ, ಚಿಕ್ಕನಹಳ್ಳಿ ಹನುಮಂತಪ್ಪ, ಪ್ರದೀಪ್,ಮಹಾಂತೇಶ್ ಉಪಸ್ಥಿತರಿದ್ದರು...