POWER SAMACHARA | KANNADA NEWS | BREKING NEWS| 22-06-2023

ದಾವಣಗೆರೆ: ಕಾಂಗ್ರೆಸ್ ಸರ್ಕಾರದ ವಿರುದ್ದ ಮೂರು ತಿಂಗಳಲ್ಲೇ ಜನ ಬಡಿಗೆ ತೆಗೆದುಕೊಂಡು ಬೆನ್ನು ಹತ್ತುತ್ತಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದ್ದಾರೆ..

ಮೂರು ತಿಂಗಳಲ್ಲಿ ಜನ ತಿರುಗಿ ಬೀಳಲಿದ್ದಾರೆ, ಗ್ಯಾರಂಟಿ ಕೊಡಲಾರದೆ ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ, ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು..

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರ್ಯಕರ್ತರು ಕಾರಣರಲ್ಲ, ಬಿಜೆಪಿ ಸೋಲಿಗೆ ಕಾರಣ ಬಿಜೆಪಿ ನಾಯಕರಾದ ನಾವು, ಕಾಂಗ್ರೆಸ್ ನವರು 5 ಗ್ಯಾರಂಟಿಗಳನ್ನ ಘೋಷಣೆ ಮಾಡಿದರು, ನಾವು ಗ್ಯಾರಂಟಿ ಯೋಜನೆಗಳನ್ನ ರಾಜ್ಯದ ನಾಯಕರು ಹಗುರವಾಗಿ ಪರಿಗಣಿಸಿದ್ವಿ, ಇದು ಬಿಜೆಪಿ ಸೋಲಿಗೆ ಕಾರಣವಾಯಿತು ಎಂದರು..

ಅಧಿಕಾರದ ಗಂಧ ಗಾಳಿಯು ಗೊತ್ತಿಲ್ಲದೆ ಪ್ರಚಾರ ಮಾಡಿದರು, ಗ್ಯಾರಂಟಿ ಯೋಜನೆ ಘೋಷಣೆ ಮಾಡಿ ಚುನಾವಣೆ ಗೆದ್ದರು, ಇವುಗಳನ್ನ ಹಗುರವಾಗಿ ಪರಿಗಣಿಸಿ ನಾವು ಸೋಲಿಗೆ ಕಾರಣರಾದ್ವಿ, ಧಾರವಾಡ ಹುಚ್ಚಾಸ್ಪತ್ರೆಯಲ್ಲಿ ತಪ್ಪಿಸಿಕೊಂಡವರ ರೀತಿ ಕಾಂಗ್ರೆಸ್ ಸಚಿವರು ಮಾತನಾಡ್ತಾರೆ, ಬಿಜೆಪಿಯವರು ಸರ್ವರ್ ಹ್ಯಾಕ್ ಮಾಡಿದ್ದಾರೆ ಅಂತ ಹೇಳ್ತಾರೆ, ಗ್ಯಾರಂಟಿ ಯೋಜನೆ ಕೊಡಲಾರದೆ ಸುಳ್ಳು ಸುದ್ದಿ ಹಬ್ಬಿಸುತಿದ್ದಾರೆ, ಖಜಾನೆಯಲ್ಲಿ ಇರೋ ಹಣವನ್ನ ಯೋಜನೆ ಘೋಷಣೆ ಮಾಡಬೇಕು, ಮುಂದಿನ ದಿನಗಳಲ್ಲಿ ಇವರನ್ನ ಜನರು ದೊಣ್ಣೆ ತೆಗೆದುಕೊಂಡು ಬೆನ್ನತ್ತಾರೆ ನೋಡ್ತಾ ಇರಿ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ..