POWER SAMACHARA | KANNADA NEWS | BREKING NEWS| 12-04-2024
ದಾವಣಗೆರೆ : ದಾವಣಗೆರೆಯಲ್ಲಿ ದಾಖಲೆ ಇಲ್ಲದ ಭಾರೀ ಮೊತ್ತದ ಚಿನ್ನಾಭರಣಗಳನ್ನ ವಶ ಪಡಿಸಿಕೊಳ್ಳಲಾಗಿದ್ದು ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ. ಸರಿಯಾದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 12.50 ಕೋಟಿ ರೂಪಾಯಿ ಮೌಲ್ಯದ ಗೋಲ್ಡ್ ಅಂಡ್ ಡೈಮಂಡನ್ನ ದಾವಣಗೆರೆಯ ನಗರದ ಲೋಕಿಕೆರೆ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ..
ಚುನಾವಣಾ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ಸ್ವತ್ತು ವಶಕ್ಕೆ ಪಡೆದಿದ್ದು ವಿವಿಧ ಆಭರಣ ಅಂಗಡಿಗಳಿಗೆ ಸರಿಯಾದ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ, ಕಳೆದ ತಿಂಗಳ 6 ಮತ್ತು 9ರಂದು ಹಳೆಯ ಬಿಲ್ ಗಳನ್ನು ತೋರಿಸಲಾಗಿದೆ ಎನ್ನಲಾಗಿದ್ದು, ಆಭರಣ ಸಾಗಾಟಕ್ಕೆ ಸರಿಯಾದ ಮಾಹಿತಿ ನೀಡದ ಹಿನ್ನಲೆ 12.50 ಕೋಟಿ ಮೌಲ್ಯದ ಗೋಲ್ಡ್ ನ್ನ ಚುನಾವಣಾ ಅಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್ ನ ಇಲಾಖೆ ಉಪ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಮುಂದಾಗಿದೆ..