Friday, June 20, 2025
  • Home
  • ರಾಜ್ಯ
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಷ್ಟ್ರೀಯ ಸುದ್ದಿ
Power Samachara
  • Home
  • ದಾವಣಗೆರೆ
  • ಪ್ರಮುಖ ಸುದ್ದಿ
  • ರಾಜ್ಯ
  • ರಾಷ್ಟ್ರೀಯ ಸುದ್ದಿ
  • Login
No Result
View All Result
Power Samachara
Home ಪ್ರಮುಖ ಸುದ್ದಿ

ದೇವರಗುಡ್ಡದಲ್ಲಿ ದೇವರ ಮೊರೆ ಹೋದ ಸಿಎಂ ಸಿದ್ದರಾಮಯ್ಯ..! ಗುಡ್ಡದಯ್ಯ ಮಾಲತೇಶ ದೇವರಲ್ಲಿ ಸಿಎಂ ಬೇಡಿಕೊಂಡಿದ್ದೇನು..!?

Power Samachara News by Power Samachara News
August 30, 2024
in ಪ್ರಮುಖ ಸುದ್ದಿ, Home, ದಾವಣಗೆರೆ
0
ದೇವರಗುಡ್ಡದಲ್ಲಿ ದೇವರ ಮೊರೆ ಹೋದ ಸಿಎಂ ಸಿದ್ದರಾಮಯ್ಯ..!  ಗುಡ್ಡದಯ್ಯ ಮಾಲತೇಶ ದೇವರಲ್ಲಿ ಸಿಎಂ ಬೇಡಿಕೊಂಡಿದ್ದೇನು..!?
0
SHARES
0
VIEWS
Share on WhatsappShare on FacebookShare on Twitter

POWER SAMACHARA | KANNADA NEWS | BREKING NEWS| 30-08-2024

ಹಾವೇರಿ: ಮೂಡಾ ಸೈಟ್ ಪ್ರಕರಣ ಗಂಭೀರ ಪಡೆಯುತ್ತಿದ್ದಂತೆ ಇತ್ತ ಸಿಎಂ ಸಿದ್ದರಾಮಯ್ಯ ದೇವರ ಮೊರೆ ಹೋಗಿದ್ದಾರೆ, ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಪುರಾಣ ಪ್ರಸಿದ್ದಿ ದೇವರಗುಡ್ಡದ ಮಾಲತೇಶ ದೇವರ ದರ್ಶನ ಮಾಡಿದ್ದಾರೆ.

Related posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

May 14, 2025
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025

ದೇವರಗುಡ್ಡದಲ್ಲಿ ಮಾಲತೇಶ್ ಸ್ವಾಮಿ ದೇವಸ್ಥಾನಕ್ಕೆ ಇಂದು ಸಂಜೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಪೂಜೆ ಸಲ್ಲಿಕೆ‌ ಮಾಡಿ ಕೈ ಮುಗಿದು ಬೇಡಿಕೊಂಡಿದ್ದಾರೆ. ಸಂಕಷ್ಟ ನಿವಾರಣೆಗಾಗಿ ಗುಡ್ಡದಯ್ಯನಿಗೆ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೂ ಇದೇ ವೇಳೆ ದೇವರ ಗುಡ್ಡದಲ್ಲಿ ನಿರ್ಮಾಣಗೊಂಡಿದ್ದ ಸಂಗೊಳ್ಳಿ ರಾಯಣ್ಣ ಪುತ್ಥಳಿ, ಕನಕ ಭವನವನ್ನೂ ಸಿಎಂ ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕನಕ ಭವನ ಲೋಕಾರ್ಪಣೆ ಮಾಡಿದ್ದೇನೆ, ನನಗೆ ಮಾಲತೇಶ ದೇವರ ದರ್ಶನ ಪಡೆಯುವ ಅವಕಾಶ ಸಿಕ್ಕಿದೆ, ಮಾಲತೇಶ ದೇವರು ನನಗೆ, ನಿಮಗೆ ಒಳ್ಳೆಯದು ಮಾಡಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇನೆ, ಜನರ ಆಶೀರ್ವಾದ ಇದ್ದರೆ ಮಾತ್ರ ಅಧಿಕಾರದಲ್ಲಿ ಇರಲು ಸಾಧ್ಯ, ಜನರ ಆಶೀರ್ವಾದ ಇಲ್ಲದಿದ್ದರೆ ಯಾರು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜನರ ಆಶೀರ್ವಾದದಿಂದ ನಾನು ಸಿಎಂ ಆಗಿದ್ದು, ಜನಾಶೀರ್ವಾದ ಸಿಕ್ಕಮೇಲೆ ಜನರಿಗೆ ನಂಬಿಕೆ ದ್ರೋಹ ಮಾಡಬಾರದು, ಕೊಟ್ಟ ಮಾತನ್ನ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು, 2013ರಲ್ಲಿ ಸಿಎಂ ಆದಾಗ ಅನೇಕ ಭಾಗ್ಯಗಳನ್ನ‌ ಕೊಟ್ಟಿದ್ದೆ, 2023ರಲ್ಲಿ ಐದು ಗ್ಯಾರಂಟಿ ಜಾರಿ ಮಾಡ್ತೇವೆ ಅಂತಾ ಹೇಳಿದ್ದೆವು, ಐದು ಗ್ಯಾರಂಟಿ ಜಾರಿ ಮಾಡಿದ್ದೇವೆ, ಜನಸೇವೆ ಮಾಡುವ ಮೂಲಕ ದೇವರ ಸೇವೆ ಮಾಡುವ ಕೆಲಸ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..

ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ

ದೇವರಗುಡ್ಡದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಿಎಂ‌, ನಾನು ಜನರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಜನರಿಗೆ ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇವೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜನರ ಮಡಿಲಿಗೆ ಹಾಕುವ ಮೂಲಕ ನುಡಿದಂತೆ ನಡೆದಿದ್ದೇನೆ. ಎರಡನೇ ಬಾರಿ ಸಿಎಂ ಆಗಿ ಒಂದೇ ವರ್ಷದಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿ ಮಾಡಿದ್ದೇನೆ ಎಂದರು. ನಾನು ಅಸೂಯೆ ಮಾಡುವವರಿಂದ ದ್ವೇಷದ ರಾಜಕಾರಣ ಮಾಡುವವರಿಂದ ಅಧಿಕಾರಕ್ಕೆ ಬರಲಿಲ್ಲ. ಜನರ ಆಶೀರ್ವಾದದಿಂದ ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ‌ ಆಗಿರೋದು. ಜನರ ಆಶೀರ್ವಾದ ಇರುವವರೆಗೂ ನನಗೆ ಯಾರೂ ಏನೂ ಮಾಡಲಾಗುವುದಿಲ್ಲ ಎಂದು BJP-JDS ಗೆ ಎಚ್ಚರಿಕೆ ನೀಡಿದರು. ಜಾತಿ ವ್ಯವಸ್ಥೆಯ ಈ ಸಮಾಜದಲ್ಲಿ ಅತ್ಯಂತ ಕಟ್ಟ ಕಡೆಯ ವ್ಯಕ್ತಿಗೂ ಅವಕಾಶ ಸಿಗಬೇಕು ಎಂದು ಮಹಾತ್ಮಗಾಂಧಿ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟು ಕಾರ್ಯಕ್ರಮ ರೂಪಿಸುತ್ತಿದ್ದೇನೆ. ಇದೇ BJP-JDS ನವರಿಗೆ ಹೊಟ್ಟೆಕಿಚ್ಚು. ಈ ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಎಚ್ಚರಿಸಿದರು.

ನಾನು ಯಾರಿಗೂ, ಯಾವುದೇ ಪಿತೂರಿ-ಷಡ್ಯಂತ್ರಕ್ಕೂ ಭಯ ಪಡುವವನಲ್ಲ. ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದ ಗೆರಿಲ್ಲಾ ಸೇನಾನಿ ರಾಯಣ್ಣನನ್ನು ಬ್ರಿಟೀಷರಿಗೆ ಮೋಸದಿಂದ ಹಿಡಿದುಕೊಟ್ಟವರು ನಮ್ಮವರೇ. ಇಂಥಾ ದೇಶದ್ರೋಹಿಗಳು ನಮ್ಮೊಳಗೆ ಈಗಲೂ ಇದ್ದಾರೆ. ಇಂಥಾ ದೇಶದ್ರೋಹಿಗಳು ಎಲ್ಲಾ ಕಾಲದಲ್ಲೂ ಇರುತ್ತಾರೆ. ಇಂಥವರನ್ನು ನಾವು ಒಗ್ಗಟ್ಟಿನಿಂದ ಎದುರಿಸಬೇಕು, ಸೋಲಿಸಬೇಕು ಎಂದರು.

ಸಂಗೊಳ್ಳಿ ರಾಯಣ್ಣನವರ ದೇಶಪ್ರೇಮ, ಹೋರಾಟ ಮನೋಭಾವವನ್ನು ನಾವು ರೂಢಿಸಿಕೊಂಡಾಗ ಮಾತ್ರ ರಾಯಣ್ಣನ ಆಶಯ ಈಡೇರುತ್ತದೆ ಎಂದರು. ತಿಂಥಣಿ ಕನಕ ಗುರುಪೀಠದ ಸಿದ್ದರಾಮೇಶ್ವರ ಸ್ವಾಮೀಜಿ, ನರಸೀಪುರ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಕಾರ್ಣಿಕದ ನಾಗಪ್ಪಜ್ಜ ಉರ್ಮಿ, ದೇವರಗುಡ್ದದ ಕರಿಯಪ್ಪಜ್ಜ ಹಕಾರಿ ಅವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಶಿವಣ್ಣ ವಹಿಸಿದ್ದರು. ಸಚಿವರಾದ ಎಚ್.ಕೆ.ಪಾಟೀಲ್, ಶಿವಾನಂದ ಪಾಟೀಲ್, ಉಪಸಭಾಪತಿಗಳಾದ ರುದ್ರಪ್ಪ ಮಾ.ಲಮಾಣಿ, ವಿಧಾನಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ್ ಮಾನೆ , ಮಾಜಿ ಸಚಿವ ಶಂಕರ್, ನೆಹರೂ ಓಲೆಕಾರ್, ಗುಡ್ಡದಾಪುರ ಗ್ರಾ.ಪಂ.ಅಧ್ಯಕ್ಷರಾದ ದ್ಯಾಮವ್ವ ಮೈ ಸತಗಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Tags: cm siddaramayyadevaraguddahaverimalthesha templesangolli rayannaಗುಡದಯ್ಯಗುಡ್ಡದಾಪುರ ಗ್ರಾ.ಪಂ.ಅಧ್ಯಕ್ಷರಾದ ದ್ಯಾಮವ್ವದೇವರಗುಡ್ಡನೆಹರೂ ಓಲೆಕಾರ್ಮಾಜಿ ಸಚಿವ ಶಂಕರ್ಮಾಲತೇಶ ಸ್ವಾಮಿಶಾಸಕರಾದ ಶ್ರೀನಿವಾಸ್ ಮಾನೆಸಂಗೊಳ್ಳಿ ರಾಯಣ್ಣಸಿ.ಎಂ.ಸಿದ್ದರಾಮಯ್ಯಹಾವೇರಿ

Related Posts

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!
Home

ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಬ್ಯಾಂಕ್ ಲೂಟಿ, ಚಿನ್ನಾಭರಣ ಕದ್ದು ಮಜಾ ಮಾಡಿದ ಬ್ಯಾಂಕ್ ಸಿಬ್ಬಂದಿ..!

by Power Samachara News
May 14, 2025
0

POWER SAMACHARA | KANNADA NEWS | BREKING NEWS| 14-05-2025.. ದಾವಣಗೆರೆ: ಇತ್ತೀಚೆಗೆ ಬಂದಿದ್ದ ಲಕ್ಕಿ ಭಾಸ್ಕರ್ ಸಿನಿಮಾ ಸ್ಟೈಲ್ ನಲ್ಲಿ ಇಲ್ಲೊಬ್ಬ ಬ್ಯಾಂಕ್ ಸಿಬ್ಬಂದಿ...

Read more
ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

ಕೇಂದ್ರ ಈಗ ಎಚ್ಚೆತ್ತಿದೆ, ಜಾತಿ ಗಣತಿಯನ್ನ ಸಿದ್ದರಾಮಯ್ಯ ಮಾಡಿ ಮುಗಿಸಿದ್ದಾರೆ..!

May 1, 2025
ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ..!

April 30, 2025
ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

ಬಿಐಇಟಿ ಕಾಲೇಜಿನಲ್ಲಿ ನಮ್ಮ ದವನ ಸಮಾರೋಪ

April 29, 2025
ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

ಜಿಲ್ಲಾ ಕನಕ ಸಮುದಾಯ ಭವನಕ್ಕೆ ಸರ್ಕಾರದಿಂದ 2 ಕೋಟಿ ರೂ ಅನುದಾನ: ಸಿ.ಎಂ ಸಿದ್ದರಾಮಯ್ಯ ಘೋಷಣೆ

April 25, 2025
ಮೊಬೈಲ್ ಬಿಟ್ಟೆ, ಕಷ್ಟ ಮೆಟ್ಟಿ ನಿಂತೆ, ಯಶಸ್ಸಿನ ಮೆಟ್ಟಿಲು ಹತ್ತೆಬಿಟ್ಟೆ..!  ಕುರಿ ಮಂದೆಯಲ್ಲಿ ಸಾಧನೆಯ ಶಿಖರ ಏರಿದ ‘ಬೀರದೇವ’

© 2023 Power Samachara -Design by Newbie Techy.

No Result
View All Result
  • Power Samachara

© 2023 Power Samachara -Design by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In