POWER SAMACHARA | KANNADA NEWS | BREKING NEWS| 31-05-2023

ದಾವಣಗೆರೆ: ನಗರದ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು, ಜಿಎಂಐಟಿ ಆವರಣದಲ್ಲಿ ಇಂದು ಬುಧವಾರ ಬೆಳಿಗ್ಗೆಯಿಂದ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ..

ಒಟ್ಟು 35 ಕಂಪನಿಗಳು ಕೆಲಸ ಕೊಡಲು ಆಗಮಿಸಿವೆ, ಸುಮಾರು 4800 ಉದ್ಯೋಗವಕಾಶಗಳು ವಿವಿಧ ಕಂಪನಿಗಳಲ್ಲಿ ಲಭ್ಯವಿದೆ, ಹತ್ತನೇ ಕಾಸ್ ಪಾಸಾದ ವಿದ್ಯಾರ್ಥಿಗಳಿಂದ ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಉದ್ಯೋಗವಕಾಶಗಳು ದೊರೆಯಲಿವೆ..

ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, ಸೈಡರ್ ಎಲೆಕ್ನಿಕ್, ಬಜಾಜ್ ಅಲಿಯನ್, ಬಿ ಎಫ್ ಡಬ್ಲ್ಯೂ, ಸಾಮಂಗ್, ಲೈಟಿಂಗ್ ಟೆಕ್ನಾಲಜೀಸ್, ಸೆವೆಂತ್ ಸೆನ್ ಟೆಕ್ನಾಲಜಿಸ್, ಜಿಎಂ ಸಮೂಹ ಸಂಸ್ಥೆಗಳು, ಫೇಸ್ ಪವರ್ ಸಿಸ್ಟಮ್ಸ್, ಹೋಂಡಾ ಮೋಟಾರ್ಸ್, ಸಾಸ್ಮೋಸ್ ಟೆಕ್ನಾಲಜೀಸ್ ಮುಂತಾದ ಹಲವು ಪ್ರತಿಷ್ಟಿತ ಕಂಪನಿಗಳು ಭಾಗವಹಿಸಲಿವೆ..

ಇನ್ನೂ ಈ ಬಗ್ಗೆ ಮಾಹಿತಿ ನೀಡಿರುವ ಜಿಎಂಐಟಿ ಕಾಲೇಜಿನ ಜಿಎಂಐಟಿ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್.ತೇಜಸ್ವಿ ಕಟ್ಟಿಮನಿ, ಈಗಾಗಲೇ 2100 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಜಿಎಂಎಸ್ ಕಾಲೇಜಿನ ಪ್ರಾಂಶುಪಾಲೆ ಪ್ರೋ. ಶ್ವೇತಾ ಮರಿಗೌಡರ್ ಮಾತನಾಡಿ, 31ನೇ ಬುಧವಾರದಂದು ಬೆಳಿಗ್ಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಭೀಮಸಮುದ್ರದ ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಖಜಾಂಚಿ ಜಿ.ಎಸ್. ಅನಿತ್ ಕುಮಾರ್ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಡಿ ಕುಂಬಾರ್ ಮತ್ತು ವಿವಿಧ ರಾಜಕೀಯ ಗಣ್ಯರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ತಮ್ಮ ಎಲ್ಲಾ ಕಲಿಕ ಅಂಕಪಟ್ಟೆಗಳು ಮತ್ತು ಬಯೋಟೊದೊಂದಿಗೆ ಕನಿಷ್ಠ 5 ರಿಂದ 10 ಪ್ರತಿಗಳೊಂದಿಗೆ ಬರಬೇಕಾಗಿ ಕೋರಲಾಗಿದೆ. ಬೆಳಗ್ಗೆ ಯಿಂದ ಸಾಯಂಕಾಲ 4 ಗಂಟೆವರೆಗೆ ಉದ್ಯೋಗ ಮೇಳವು ನಡೆಯಲಿದೆ. ಭಾಗವಹಿಸುವ ವಿದ್ಯಾರ್ಥಿಗಳು ನೊಂದಣಿ ಮಾಡಿಕೊಳ್ಳಲು https: //tinyurl.com/yne4jm54 ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.