POWER SAMACHARA | KANNADA NEWS | 23-04-2023
ದಾವಣಗೆರೆ: ರಾಹುಲ್ ಗಾಂಧಿ ಹೋದ ಕಡೆಗಳಲ್ಲಿ ಕಾಂಗ್ರೆಸ್ ಕೋತಾ ಆಗಲಿದೆ, ಹೀಗಾಗಿ ದಾವಣಗೆರೆಗೆ ರಾಹುಲ್ ಗಾಂಧಿ ಅವರನ್ನ ಕರೆಸಿ, ನಮಗೆ ಗೆಲ್ಲಲ್ಲು ಅನುಕೂಲ ಆಗಲಿದೆ ಎಂದು ದಾವಣಗೆರೆಯ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಸಂಸದ ಜೆ ಎಂ ಸಿದ್ದೇಶ್ವರ್ ಕಿಚಾಯಿಸಿದ್ದಾರೆ....

ಇಂದು ರಾಹುಲ್ ಗಾಂಧಿ ಹುಬ್ಬಳ್ಳಿಗೆ ಆಗಮಿಸಿದ್ದಾರೆ ಹಾಗೂ ಏಪ್ರಿಲ್ 27ಕ್ಕೆ ಹೊನ್ನಾಳಿಗೆ ಆಗಮಿಸಲಿದ್ದು, ಬಿಜೆಪಿಗೆ ಎಫೆಕ್ಟ್ ಆಗುತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಬಂದಲ್ಲೆಲ್ಲ ಸೋಲು ಖಚಿತ ಎಂದು ಇತಿಹಾಸವೇ ಹೇಳುತ್ತದೆ ಎಂದು ಸಂಸದ ಜಿಎಂ ಸಿದ್ದೇಶ್ವರ್, ರಾಗಾ ಕಾಲೆಳೆದಿದ್ದಾರೆ.

ರಾಹುಲ್ ಗಾಂಧಿ ಕಾಲಿಟ್ಟ ಕಡೆ ಕಾಂಗ್ರೆಸ್ ಸೋತಿದೆ, ಹೊನ್ನಾಳಿಗೆ ಅವರು ಬಂದು ಹೋದರೆ ನಮಗೆ ಮತ್ತಷ್ಟು ಅನುಕೂಲ, ದಯಮಾಡಿ ರಾಹುಲ್ ಗಾಂಧಿಯನ್ನು ದಾವಣಗೆರೆಯ ಎಲ್ಲ ಕ್ಷೇತ್ರಗಳಲ್ಲೂ ಸುತ್ತಾಡಿಸಿ, ಎಂಟು ಕ್ಷೇತ್ರದಲ್ಲಿ ಗೆಲುವಿಗೆ ಅನುಕೂಲ ಆಗಲಿದೆ ಎಂದು ಟೀಕೆ ಮಾಡಿದ್ದಾರೆ..

ಬೆಣ್ಣೆನಗರಿಗೆ ಅಮಿತ್ ಷಾ..

ಹೊನ್ನಾಳಿ, ಜಗಳೂರು, ಹರಿಹರ, ಹರಪನಹಳ್ಳಿಯಲ್ಲಿ ಗೆದ್ದಾಗಿದೆ, ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡವನ್ನು ಸಹ ಗೆಲ್ಲುತ್ತೇವೆ, ದಾವಣಗೆರೆಗೆ ಅಮಿತ್ ಷಾ ಬರ್ತಾರೆ, ಮುಂದೆ ದಿನಾಂಕ ನಿಗದಿ ಮಾಡುತ್ತೇವೆ ಎಂದು ಸಿದ್ದೇಶ್ವರ್ ತಿಳಿಸಿದ್ದಾರೆ..

ದಮ್ ಇದ್ದರೆ ಲಿಂಗಾಯಿತರು ಸಿಎಂ ಎಂದು ಘೋಷಿಸಿ..

ಲಿಂಗಾಯಿತ ಸಿಎಂ ವಿಚಾರದಲ್ಲಿ ಮಾಜಿ ಸಿದ್ದರಾಮಯ್ಯ ಏನೇನು ಮಾತನಾಡಿದ್ದಾರೆ, ಅವರಿಗೆ ತಿಳುವಳಿಕೆ ಇಲ್ಲ, ಲಿಂಗಾಯಿತರದ್ದು ಬಹಳ ಜನಸಂಖ್ಯೆ ಇದೆ, ರಾಜ್ಯದಲ್ಲಿ ಹೆಚ್ಚು ಜನರಿದ್ದಾರೆ, ಲಿಂಗಾಯಿತರೇ ಸಿಎಂ ಆಗಲೆಂದು ಬಹಳ ಜನ ಬಯಸಿದ್ದಾರೆ, ಜನರ ಅಪೇಕ್ಷೆ ಇದೆ ಲಿಂಗಾಯಿತರು ಆಗುತ್ತಾರೆ, ಹೀಗಾಗಿ ನಾವು ಲಿಂಗಾಯಿತ ಸಿಎಂ ಅಂತಾ ಹೇಳಿದ್ದೇವೆ, ದಮ್ ಇದ್ದರೆ ಲಿಂಗಾಯಿತರು ಸಿಎಂ ಎಂದು ಕಾಂಗ್ರೆಸ್ ಘೋಷಣೆ ಮಾಡಲಿ ಎಂದು ಜಿಎಂ ಸಿದ್ದೇಶ್ವರ್ ಸವಾಲ್ ಹಾಕಿದ್ದಾರೆ..