POWER SAMACHARA | KANNADA NEWS | BREKING NEWS| 30-06-2023..

ದಾವಣಗೆರೆ: ಸೋಲಿಲ್ಲದ ಸರದಾರ ಜಿಎಂ ಸಿದ್ದೇಶ್ವರ್, ನಾಲ್ಕು ಭಾರಿ ಸಂಸದರಾಗಿ ಆಯ್ಕೆಯಾಗಿ 20 ವರ್ಷ ಪುರೈಸುತ್ತಿರುವ ಹಿನ್ನಲೆ ಹಾಗೂ 71ನೇ ವರ್ಷದ ಜನ್ಮದಿನ ಹಿನ್ನಲೆ ಅದ್ದೂರಿ ಜನ್ಮದಿನ ಸಂಭ್ರಮ ಹಮ್ಮಿಕೊಳ್ಳಲು ಸಿದ್ದೇಶ್ವರ ಅಭಿಮಾನಿ ಬಳಗ ಸಿದ್ದತೆ ಕೈಗೊಂಡಿದೆ..

ಜಿ.ಎಂ ಸಿದ್ದೇಶ್ವರ್ ಜನ್ಮದಿನದ ಪ್ರಯುಕ್ತ ಜುಲೈ ೫ ರಂದು ಬೆಳಗ್ಗೆ ೧೦.೩೦ ಕ್ಕೆ ಅದ್ದೂರಿ ಕಾರ್ಯಕ್ರಮವನ್ನು ಅಭಿಮಾನಿಗಳ ಬಳಗದಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಮುಖಂಡ ಯಶವಂತ್ ರಾವ್ ಜಾಧವ್ ತಿಳಿಸಿದ್ದಾರೆ..

ನಗರದ ಪಿಬಿ ರಸ್ತೆಯಲ್ಲಿರುವ ವಾಣಿ ಹೋಂಡಾ ಶೋರೂಂ ಆವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಎಂ ಸಿದ್ದೇಶ್ವರ್ ಲೋಕಸಭಾ ಸದಸ್ಯರಾಗಿ ೨೦ ವರ್ಷವಾಗಿದೆ. ಇಷ್ಟು ಸುಧೀರ್ಘ ಅವಧಿಗೆ ಅವರು ಸಂಸದರಾಗಿದ್ದಾರೆ, ಆದ್ದರಿಂದ ಜುಲೈ ೫ ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಲಾಗುವುದು. ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರವೇರಿಸಲಿದ್ದಾರೆ. ಇದೇ ವೇಳೆ ಪೌರ ಕಾರ್ಮಿಕರಿಗೆ ಸನ್ಮಾನ, ಕ್ರೀಡಾಪಟುಗಳಿಗೆ ಸನ್ಮಾನ, ಪಕ್ಷದ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದರು.

ಮಾಜಿ ಸಚಿವರಾದ ಎಸ್.ಎ ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಎ.ನಾರಾಯಣಸ್ವಾಮಿ, ಮಾಜಿ ಸಚಿವರುಗಳಾದ ಕೆ.ಎಸ್ ಈಶ್ವರಪ್ಪ, ಶ್ರೀರಾಮುಲು, ಮುರುಗೇಶ್ ನಿರಾಣಿ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮುಖಂಡರು ಆಗಮಿಸಲಿದ್ದಾರೆ ಕಾರ್ಯಕ್ರಮದಲ್ಲಿ ಸುಮಾರು ೨೦ ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ದೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ದೇವರಮನೆ ರಾಜನಹಳ್ಳಿಶಿವಕುಮಾರ್, ಎವೈ ಪ್ರಕಾಶ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಹೆಚ್.ಎನ್. ಶಿವಕುಮಾರ್, ಕೊಂಡಜ್ಜಿ ಜಯಪ್ರಕಾಶ್, ಜಿ.ಎಸ್. ಶ್ಯಾಮ್, ಎನ್. ರಾಜಶೇಖರ್, ಜೀವನ್ ಮೂರ್ತಿ ಸೇರಿದಂತೆ ಮತ್ತಿತರರಿದ್ದರು.