POWER SAMACHARA | KANNADA NEWS | BREKING NEWS| 27-08-2023..

ದಾವಣಗೆರೆ: ಅಮೇರಿಕದಲ್ಲಿ ದಾವಣಗೆರೆ ಮೂಲದ ಮೂವರು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಕ್ಯಾಟೊನ್ವ್ಸಿಲ್ಲೆ ಎಂಬಲ್ಲಿ ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದ್ದು ಸುಂದರ ಕುಟುಂಬ ದುರಂತ ಅಂತ್ಯ ಕಂಡಿದೆ..

ಹೌದು..ಅವರು ಬದುಕು ಕಟ್ಟಿಕೊಳ್ಳಲು ಸಾಗರದಾಚೆಗೆ ಹೋದವರು, ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸುಂದರ ಬದುಕನ್ನು ಕಟ್ಟಿಕೊಂಡಿದ್ದರು, ಐದು ವರ್ಷಗಳ ನಂತರ ಅಂದರೆ ಡಿಸೆಂಬರ್ ವೇಳೆಗೆ ಭಾರತಕ್ಕೆ ಬರುವ ಸಿದ್ಧತೆಯಲ್ಲಿ ಇದ್ದರು, ಆದರೆ ಅವರಿಗೆ ಅರಿಯದಂತೆ ವಿಧಿ ಅವರ ಬದುಕನ್ನು ಬಲಿ ಪಡೆದಿತ್ತು, ದೂರದೂರಿನಲ್ಲಿದ್ದವರು ಜೀವಂತವಾಗಿ ತಾಯ್ನಾಡಿಗೆ ಮರಳಲಿಲ್ಲ ಅನ್ನೋ ಕೊರಗಿನಲ್ಲಿ ಇಡೀ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ, ಮೃತ ದೇಹಗಳನ್ನು ತವರಿಗೆ ತರೋದ ಅಲ್ಲೇ ಅಂತ್ಯಕ್ರಿಯೆ ಮಾಡೋದ ಎಂಬ ಬಗ್ಗೆ ತೆರೆಬಿದ್ದಿದೆ, ಭಾರತಕ್ಕೆ ಮೃತದೇಹ ತರಲು ಕುಟುಂಬ ತುಂಬಾ ಶ್ರಮಿಸಿತ್ತು, ಆದರೆ ಭಾರತೀಯ ಕಾಲಮಾನ ಶನಿವಾರ ರಾತ್ರಿ ಸುಮಾರು 11.30ರಿಂದ ಅಮೆರಿದಲ್ಲೆ ಅಂತ್ಯಕ್ರಿಯೆ ಪ್ರಕ್ರಿಯೆ ನಡೆದಿದೆ, ಸ್ವಾಮಿಜಿ ಒಬ್ಬರು ವೀರಶೈವ ಲಿಂಗಾಯಿತ ಸಂಪ್ರದಾಯದಂತೆ ಯೋಗೇಶ್, ಯಶ್, ಪ್ರತಿಭಾ ಅವರ ಅಂತ್ಯಕ್ರಿಯೆ ನಡೆಸಿದ್ದಾರೆ, ಅಂತ್ಯಕ್ರಿಯೆ ವೇಳೆ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್, ಪ್ರತಿಭಾ ತಾಯಿ ಹಾಗೂ ಸಹೋದರ ಭಾಗೀಯಾಗಿದ್ದರು. ದೇಹ ಕೊಳೆತ ಹಿನ್ನಲೆ ಹಾಗೂ ತನಿಖೆ ವಿಚಾರವಾಗಿ ಅಮೆರಿಕದಲ್ಲೆ ಅಂತ್ಯಕ್ರಿಯೆ ನಡೆಸಲು ಸ್ಥಳೀಯ ಪೊಲೀಸರು ಸೂಚಿಸಿದ್ದರು, ಈ ಹಿನ್ನಲೆ ಅಮೆರಿಕದಲ್ಲೇ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ..

ಡೆತ್ ನೋಟ್ ಸಿಕ್ರೇಟ್..!

ಪತ್ನಿ ಪ್ರತಿಭಾ, ಪುತ್ರ ಯಶ್ ನನ್ನು ಶೂಟ್ ಮಾಡಿ ಬಳಿಕ ಯೋಗೇಶ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಾಮಿಕ ಮಾಹಿತಿಯಿಂದ ಗೊತ್ತಾಗಿದ್ದು, ಬಾಲ್ಟಿಮೋರ್ ಪೊಲೀಸರಿಂದ ತನಿಖೆ ಮುಂದುವರಿದಿದೆ. ಇನ್ನೂ ಡೆತ್ ನೋಟ್ ನ್ನು ಯೋಗೇಶ್ ತಾಯಿ ಶೋಭಾ ಅವರಿಗೆ ತೋರಿಸಲಾಗಿದ್ದು, ಡೆತ್ ನೋಟ್ ನಲ್ಲಿ ಯೋಗೇಶ್ ಆತ್ಮಹತ್ಯೆಗೆ ಕಾರಣ ಬರೆದಿದ್ದಾರೆ ಎನ್ನಲಾಗಿದ್ದು, ಫೂರ್ಣ ಮಾಹಿತಿ ಹೊರ ಬಿದ್ದಿಲ್ಲ..

ಸುಂದರ ಕುಟುಂಬ ದಾರುಣ ಅಂತ್ಯ..

ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಸಿಟಿಯಲ್ಲಿ ನಡೆದ ಆ ಒಂದು ದುರ್ಘಟನೆ ಎಂತಹ ಕಲ್ಲು ಹೃದಯವನ್ನು ಕರಗಿಸುವಂತಿದೆ, ಬದುಕು ಕಟ್ಟಿಕೊಳ್ಳಲು ಸಾವಿರಾರು ಮೈಲು ದೂರ ಹೋಗಿದ್ದ ಆ ಕುಟುಂಬ ಇಂದು ವಿಧಿಯ ಆಟಕ್ಕೆ ಬಲಿಯಾಗಿದೆ, ದೂರದೂರಿನಲ್ಲಿ ಅನಾಥವಾಗಿ ಬಿದ್ದಿರುವ ತಮ್ಮ ಮನೆಯ ಮೂವರನ್ನು ನೆನೆದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ, ಹೌದು ಸುಮಾರು 9 ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹಾಲೇಕಲ್ಲು ಗ್ರಾಮದಿಂದ ಬದುಕು ಕಟ್ಟಿಕೊಳ್ಳಲು ಅಮೇರಿಕಾದ ಬಾಲ್ಟಿಮೋರ್ ಸಿಟಿ ತಲುಪಿದ್ದ ಯೋಗೇಶ್ ಮತ್ತು ಪ್ರತಿಭಾ ದಂಪತಿಗಳು ಅಮೇರಿಕಾದಲ್ಲಿ ತಾವು ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚೇ ತಮ್ಮ ಜೀವನವನ್ನು ಸುಂದರವಾಗಿಸಿಕೊಂಡಿದ್ದರು. ಅವರ ಸುಂದರ ಸಂಸಾರಕ್ಕೆ 6 ವರ್ಷದ ಗಂಡು ಮಗು ಯಶ್ ಸಾಕ್ಷಿಯಾಗಿದ್ದ. ಇದೆ ಸುಂದರ ಕುಟುಂಬ ಐದು ವರ್ಷಗಳ ನಂತರ, ಅಂದರೆ ಇದೆ ಡಿಸೆಂಬರ್ ವೇಳೆಗೆ ಭಾರತಕ್ಕೆ ಬರುವ ಸಿದ್ಧತೆಯಲ್ಲಿತ್ತು. ಅಷ್ಟರಲ್ಲೇ ವಿಧಿ ಅವರ ಬದುಕನ್ನು ನುಂಗಿ ಹಾಕಿದೆ. ತಮ್ಮ ಮಕ್ಕಳ ದುಸ್ಥಿತಿ ನೆನೆದು ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ, ಇನ್ನೂ ಘಟನೆ ಬಳಿಕ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಅಮೆರಿಕಾಗೆ ತೆರಳಿದ್ದರು. ಭಾರತಕ್ಕೆ ಮೂವರ ಮೃತದೇಹಗಳನ್ನು ತರುವುದಕ್ಕೆ ನಡೆಸಿದ ಪ್ರಯತ್ನ ಕೈಗೂಡಲಿಲ್ಲ. ಕೇಂದ್ರ ವಿದೇಶಾಂಗ ಇಲಾಖೆ, ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದ ಜಿ. ಎಂ. ಸಿದ್ದೇಶ್ವರ ಅವರು ಮೃತದೇಹಗಳನ್ನು ದಾವಣಗೆರೆ ತೆಗೆದುಕೊಂಡು ಬರಲು ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದರು. ಆದರೆ, ಬಾಲ್ಟಿಮೋರ್ ನ ಆರೋಗ್ಯ ಇಲಾಖೆಯು ಮೃತದೇಹಗಳನ್ನು ವೈದ್ಯಕೀಯತೆ ಪ್ರಕಾರ ಕಳುಹಿಸಿಕೊಡಲು ಕಷ್ಟವಾಗುತ್ತದೆ ಎಂಬ ಕಾರಣ ನೀಡಿ ಅಲ್ಲಿಯೇ ಅಂತ್ಯಸಂಸ್ಕಾರ ನಡೆಸುವಂತೆ ಹೇಳಿದ್ದಾರೆ.

ಕುಟುಂಬಸ್ಥರ ಮನವೊಲಿಕೆ..

ಆಗಸ್ಟ್ 15 ರಂದು ಮೂರು ಮೃತದೇಹಗಳು ಪತ್ತೆಯಾಗಿದ್ದವು. ಘಟನೆ ನಡೆದು ಎರಡರಿಂದ ಮೂರು ದಿನಗಳ ಬಳಿಕ ಈ ವಿಚಾರ ಗೊತ್ತಾಗಿತ್ತು. ಅಷ್ಟೊತ್ತಿಗೆ ಮೃತದೇಹಗಳು ಕೊಳೆತು ಹೋಗಿದ್ದವು ಎನ್ನಲಾಗಿದೆ. ಇನ್ನು ಘಟನೆ ನಡೆದ ಬಳಿಕ ಮೃತದೇಹಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಿದ್ದರೂ ಮೃತದೇಹಗಳು ಪೂರ್ತಿಯಾಗಿ ಕೊಳೆತು ಹೋಗಿವೆ. ಹಾಗಾಗಿ ಮೃತದೇಹಗಳನ್ನು ಕಳುಹಿಸಿಕೊಡಲು ಕಷ್ಟವಾಗುತ್ತದೆ ಎಂದು ಬಾಲ್ಟಿಮೋರ್ ಕೌಂಟಿ ಪೊಲೀಸರು ಹಾಗೂ ಅಲ್ಲಿನ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ ಎನ್ನಲಾಗಿದೆ. ಮೂರು ಮೃತದೇಹಗಳು ಕೊಳೆತು ಹೋಗಿದ್ದು, ಭಾರತಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗೋದಿಲ್ಲ. ಇಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿದರೆ ಒಳ್ಳೆಯದು. ಇಷ್ಟೊಂದು ದೀರ್ಘ ಪ್ರಯಾಣ, ವೈದ್ಯಕೀಯವಾಗಿಯೂ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಕುಟುಂಬಸ್ಥರ ಮನವೊಲಿಸುವಲ್ಲಿ ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ಟಿಮೋರ್ ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿ ಆಗಿದ್ದಾರೆ. ಯೋಗೇಶ್ ಹೊನ್ನಾಳ ಹಾಗೂ ಪ್ರತಿಭಾ ಹೊನ್ನಾಳ ಕುಟುಂಬಸ್ಥರು ಸಹ ಇದಕ್ಕೆ ಸಹಮತಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆ ಯೋಗೇಶ್ ತಾಯಿ ಶೋಭಾ, ಸಹೋದರ ಪುನೀತ್ ಹಾಗೂ ಪ್ರತಿಭಾ ಹೊನ್ನಾಳರ ತಾಯಿ ಪ್ರೇಮಾ ಹಾಗೂ ಸಹೋದರ ಗಣೇಶ್ ಅಮೆರಿಕದಲ್ಲೆ ಇದ್ದು ಸಂಬಂಧಿ ಸೋಮಶೇಖರ್ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆದಿದೆ..

ಇನ್ನೂ ಯೋಗೇಶ್ ಕುಟುಂಬಸ್ಥರಿಗೆ ಡೆತ್ ನೋಟ್ ನೀಡಿರುವುದಾಗಿ ತಿಳಿದು ಬಂದಿದ್ದು ಸಾವಿನ ಕಾರಣ ಏನೆಂಬುದು ತಿಳಿದು ಬರಬೇಕಿದೆ. ಒಟ್ಟಿನಲ್ಲಿ ಸುಂದರ ಕುಟುಂಬ ದುರಂತ ಅಂತ್ಯ ಕಂಡಿದ್ದು ಮಾತ್ರ ಮನಮಿಡಿಯುವಂತಿದೆ..