POWER SAMACHARA | KANNADA NEWS | BREKING NEWS| 29-06-2023..

ದಾವಣಗೆರೆ: ಪತ್ರಿಕಾ ದಿನಾಚರಣೆ ಹಿನ್ನಲೆ ದಾವಣಗೆರೆಯಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಜುಲೈ ೧ ರಿಂದ ಹತ್ತು ದಿನಗಳ ಕಾಲ ಪತ್ರಕರ್ತರು ಹಾಗೂ ಅವರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ..

ದಾವಣಗೆರೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ಕಾರ್ಯದರ್ಶಿ ಹಾಗೂ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಟಿ.ಜಿ.ರವಿಕುಮಾರ್, ಹದಡಿ ರಸ್ತೆಯಲ್ಲಿರುವ ಆರೈಕೆ ಆಸ್ಪತ್ರೆಯಲ್ಲಿ ಪತ್ರಕರ್ತರ ಕುಟುಂಬದವರಿಗಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿದೆ, ಜುಲೈ ೧ ರ ಬೆಳಗ್ಗೆ ೧೦ ಕ್ಕೆ ಆಸ್ಪತ್ರೆಯ ಆವರಣದಲ್ಲಿ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ಕೆ.ಏಕಾಂತಪ್ಪ ನೆರವೇರಿಸಲಿದ್ದಾರೆ. ಮಾಜಿ ಶಾಸಕರು ಟ್ರಸ್ಟ್ ಅಧ್ಯಕ್ಷರಾದ ಟಿ.ಗುರುಸಿದ್ದನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಸಿ.ವರದರಾಜ್, ಖಜಾಂಚಿ ಮಧು ನಾಗರಾಜ್ ಕುಂದುವಾಡ ಆಗಮಿಸಲಿದ್ದಾರೆ ಎಂದರು..

ಶಿಬಿರದಲ್ಲಿ ಹೃದಯ ತಪಾಸಣೆ, ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಚೆಸ್ಟ್ ಎಕ್ಸರೇ ಸೇರಿದಂತೆ ಹಲವಾರು ತಪಾಸಣೆ ಮಾಡಲಾಗುವುದು ಎಂದರು.

ಜುಲೈ ೧ ರಿಂದ ಬೆಳಗ್ಗೆ ೧೦ ರಿಂದ ರಾತ್ರಿ ೮ ರವರೆಗೆ ತಪಾಸಣೆ ಜರುಗಲಿದೆ, ಟ್ರಸ್ಟ್ ನಿಂದ ಪ್ರತಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿ ಚಿರಂತನ್ ಟಿ.ರವಿಕುಮಾರ್, ಕೋಆರ್ಡಿನೇಟರ್ ವಿರಾಜ್ ಕೆ ಅಣಜಿ ಉಪಸ್ಥಿತರಿದ್ದರು.