<strong>POWER SAMACHARA | KANNADA NEWS | BREKING NEWS| 07-09-2023..</strong> <strong>ದಾವಣಗೆರೆ</strong> : ಸನಾತನ ಧರ್ಮದ ವಿರುದ್ದ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ ವಿರೋಧಿಸಿ ದಾವಣಗೆರೆಯಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆದಿದೆ, ಪ್ರತಿಕೃತಿ ದಹನ ವೇಳೆ ಒಂದೇ ಸಮನೇ ಬೆಂಕಿ ಹತ್ತಿದ ಪರಿಣಾಮ ಮಾಜಿ ಮೇಯರ್ ಹಾಗೂ ಕಾರ್ಯಕರ್ತರು ಜಸ್ಟ್ ಮಿಸ್ ಆದ ಘಟನೆ ನಡೆದಿದೆ.. <img class="aligncenter wp-image-2382 size-full" src="https://powersamachara.com/wp-content/uploads/2023/09/Torn-fire-spark-1.jpg" alt="" width="870" height="570" /> ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಹಾಗೂ ಹಿಂದು ಪರ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು, ಉದಯನಿಧಿ ಸ್ಟಾಲಿನ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು, ಉದಯ ನಿಧಿ ಪ್ರತಿಕೃತಿ ಸುಡುವ ವಿಚಾರವಾಗಿ ಕಾರ್ಯಕರ್ತರು ಪೊಲೀಸರ ನಡುವೆ ವಾಗ್ವಾದ ಉಂಟಾಯಿತು, ಪಟ್ಟು ಬಿಡದೇ ಕಾರ್ಯಕರ್ತರು ಪ್ರತಿಕೃತಿಗೆ ಬೆಂಕಿ ಇಟ್ಟೆ ಬಿಟ್ಟರು, ಈ ವೇಳೆ ಒಂದೇ ಸಮನೆ ಬೆಂಕಿ ಹರಿದಿದ್ದು ಅಲ್ಲಿದ್ದ ಮಾಜಿ ಮೇಯರ್ ಅಜಯ್ ಕುಮಾರ್, ಎಸ್ ಟಿ ವೀರೇಶ್, ಯುವ ಮೋರ್ಚಾ ಅಧ್ಯಕ್ಷ ಶಿವಪ್ರಕಾಶ್ ಸೇರಿದಂತೆ ಕಾರ್ಯಕರ್ತರ ಮೇಲೆ ಬೆಂಕಿ ನುಗ್ಗಿದ್ದು, ಕೂದಲೆಳೆ ಅಂತರದಲ್ಲಿ ಭಾರೀ ಅವಘಡ ತಪ್ಪಿದೆ. <img class="aligncenter wp-image-2383 size-full" src="https://powersamachara.com/wp-content/uploads/2023/09/Torn-fire-spark.jpg" alt="" width="870" height="570" /> ಪೆಟ್ರೋಲ್ ಸುರಿದಿದ್ದರಿಂದ ಧಗ್ಗನೇ ಬೆಂಕಿ ಧಗ್ಗನೇ ಹತ್ತಿದೆ ಎನ್ನಲಾಗಿದ್ದು, ಪ್ರತಿಕೃತಿ ಹಿಡಿದಿದ್ದ ಮಾಜಿ ಮೇಯರ್ ಅಜಯ್ ಕುಮಾರ್, ಎಸ್ ಟಿ ವೀರೇಶ್ ಬೇಗ ಹಿಂದಕ್ಕೆ ಸರಿದಿದ್ದರಿಂದ ಸೇಫ್ ಆಗಿದ್ದಾರೆ, ಇನ್ನೂ ಪ್ರತಿಕೃತಿ ಬಿಟ್ಟು ಕಾರ್ಯಕರ್ತರು ಸಹ ಹಿಂದಕ್ಕೆ ಓಡಿದ್ದಾರೆ. ಉದಯ ನಿಧಿ ಸ್ಟಾಲಿನ್ ಪ್ರತಿಕೃತಿ ದಹಿಸಿ ವೇಳೆ ಅವಘಡ ನಡೆದಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಕಾರ್ಪೋರೇಟರ್ ಪ್ರಸನ್ನಕುಮಾರ್, ಮಾಜಿ ಎಂಎಲ್ ಸಿ ಶಿವಯೋಗಿಸ್ವಾಮಿ ಸೇರಿದಂತೆ ಮತ್ತಿತರರಿದ್ದರು.. <img class="aligncenter wp-image-2384 size-full" src="https://powersamachara.com/wp-content/uploads/2023/09/Torn-fire-spark-3.jpg" alt="" width="870" height="570" />