<strong>POWER SAMACHARA | KANNADA NEWS | BREKING NEWS| 28-09-2023..</strong> <strong>ದಾವಣಗೆರೆ</strong> : ಪಿಕ್ ನಿಕ್ ಗೆ ತೆರಳಿದ್ದ ತಂದೆ ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ದೇವರಬೆಳಕೆರೆ ಪಿಕಪ್ ಡ್ಯಾಂನಲ್ಲಿ ನಡೆದಿದೆ.. <img class="aligncenter wp-image-2526 size-full" src="https://powersamachara.com/wp-content/uploads/2023/09/father-son-death8.jpg" alt="" width="870" height="570" /> <img class="aligncenter wp-image-2523 size-full" src="https://powersamachara.com/wp-content/uploads/2023/09/father-son-death6.jpg" alt="" width="870" height="570" /> ವೀಕೆಂಡ್ ರಜೆ ಹಿನ್ನಲೆ ಡ್ಯಾಂ ನೋಡಲು ಇಬ್ಬರು ಮಕ್ಕಳೊಂದಿಗೆ ಚಂದ್ರು ದಂಪತಿಗಳು ದೇವರ ಬೆಳಕೆರೆ ಪಿಕಪ್ ಡ್ಯಾಂಗೆ ತೆರಳಿದ್ದರು, ಡ್ಯಾಂನ ದಡದಲ್ಲಿ ಉಪಹಾರ ಸೇವಿಸಿದ್ದಾರೆ ಎನ್ನಲಾಗಿದೆ, ಬಳಿಕ ಇಬ್ಬರು ಮಕ್ಕಳು ನೀರಿನಲ್ಲಿ ಕೈ ತೊಳೆದು ಕೊಳ್ಳುವಾಗ ಕಾಲು ಜಾರಿ ಬಿದ್ದಿದಾರೆ ಎನ್ನಲಾಗಿದ್ದು, ಬಳಿಕ ನೀರಿನ ಸುಳಿಗೆ ಸಿಲುಕಿದ್ದಾರೆ ಎನ್ನಲಾಗಿದೆ, ಕೂಡಲೇ ಎಚ್ಚೆತ್ತ ತಂದೆ ಚಂದ್ರು ಒಬ್ಬ ಮಗನನ್ನು ದಡಕ್ಕೆ ಎಳೆದು ತಂದಿದ್ದಾರೆ, ಇನ್ನೊಬ್ಬ ಮಗನನ್ನು ಕಾಪಾಡುವ ವೇಳೆ ಚಂದ್ರು ಸಹ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮಿಟ್ಲಕಟ್ಟೆ ಗ್ರಾಮದ ಚಂದ್ರು(40), ಶೌರ್ಯ(9) ಸಾವನ್ನಪ್ಪಿದ ದುರ್ಧೈವಿಗಳು ಎಂದು ತಿಳಿದು ಬಂದಿದೆ. ಚಂದ್ರು ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರೆ ಶೌರ್ಯ ಮೃತದೇಹ ಇನ್ನೂ ಸಿಕ್ಕಿಲ್ಲ, ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ, ಹರಿಹರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. <img class="aligncenter wp-image-2516 size-full" src="https://powersamachara.com/wp-content/uploads/2023/09/Father-son-death2.jpg" alt="" width="870" height="570" />