POWER SAMACHARA | KANNADA NEWS | BREKING NEWS| 31-08-2023..

ದಾವಣಗೆರೆ: ಅವರೆಲ್ಲ ಸಿಟಿಗೆ ಹತ್ತಿರ ಇದ್ದರೂ ಕೃಷಿಯನ್ನು ಮರೆತಿಲ್ಲ. ನಿತ್ಯ ವ್ಯವಸಾಯ ಮಾಡಿ ಜೀವನ ಮಾಡುತ್ತಿದ್ದ ರೈತರು. ಲೇಔಟ್ ಮಾಫಿಯಾಗಳ ಮುಂದೆ ಜಮೀನು ಮಾರಾಟ ಮಾಡದೇ ಕೃಷಿಯೇ ಮುಖ್ಯ ಎನ್ನುವಂತೆ ಸಾಧಿಸಿ ತೋರಿಸಿದವರು. ಆದರೆ ಸಿಟಿ ಹತ್ತಿರವಿರುವುದೇ ಇವರಿಗೆ ಮುಳುವಾಗಿದೆ. ಕಿಡಿಗೇಡಿಗಳು ಮಾಡುವ ಕೆಲಸದಿಂದ ರೈತರು ಸಂಕಷ್ಟ ಅನುವಿಸುತ್ತಿದ್ದಾರೆ.

ಹೌದು.. ರೈತರ ಪರಿಸ್ಥಿತಿಯೇ ವಿಚಿತ್ರ, ಸರಿಯಾದ ಮಳೆ ಇಲ್ಲ, ಬಂದರೆ ಅತೀ ವೃಷ್ಠಿ, ಎಲ್ಲವು ಸರೊ ಇದ್ದರೆ ಬೆಲೆ ಇಲ್ಲ, ಹೀಗೆ ಏನಾದರು ಒಂದು ತೊಂದರೆ ರೈತನಿಗೆ ತಪ್ಪಿದಲ್ಲ, ಕೆಲವೊಮ್ಮೆ ಕಿಡಿಗೇಡಿಗಳ ಕಾಟ. ಇದೆಲ್ಲದರಿಂದ ರೈತ ಬೇಸತ್ತು ಹೋಗಿದ್ದಾನೆ, ದಾವಣಗೆರೆಯ ಹೊರವಲಯದ ಬಾತಿ ಕೆರೆ ಪಕ್ಕದಲ್ಲಿರುವ ಭತ್ತದ ಜಮೀನುಗಳಲ್ಲಿ ಆ್ಯಸಿಡ್ ಮಿಶ್ರಿತ ಕೆಮಿಕಲ್ ಸೇರ್ಪಡೆಯಾಗಿದ್ದು, ಇದರಿಂದ ಭತ್ತದ ಬೆಳೆ ಸುಟ್ಟು ಹೋಗುತ್ತಿವೆ. ಬಾತಿ ಗ್ರಾಮದ ವಾಸು ಎನ್ನುವರಿಗೆ ಸೇರಿದ ಒಂದುವರೆ ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದ್ದು, ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನಲೆ ಬೆಳೆಯುವ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟು ಹೋಗಿದೆ..ಇದೆಕ್ಕೆಲ್ಲ ಕಾರಣ ಈ ಜಮೀನಿಗೆ ಹಾಯಿಸುವ ನೀರು, ಭದ್ರಾ ಚಾನಲ್ ನಿಂದ ಈ ನೀರು ಬರುತ್ತಿದ್ದು, ಆ ಭದ್ರಾ ಚಾನಲ್ ಗೆ ಆ್ಯಸಿಡ್ ಮಿಶ್ರಿತ ಕೆಮಿಕಲ್ ಅನ್ನು ಟ್ಯಾಂಕರ್ ಮೂಲಕ ಬಿಟ್ಟಿದ್ದು, ಇದರಿಂದ ಭದ್ರ ಚಾನಲ್ ನೀರು ಸಂಪೂರ್ಣ ಕಲುಷಿತ ವಾಗಿದೆ. ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ

ಅಷ್ಟಕ್ಕೂ ಆಗಿದ್ದೇನು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಯಾರಿಗೂ ಇಲ್ಲ, ರಾತ್ರೋ ರಾತ್ರಿ ಯಾವುದೋ ಫ್ಯಾಕ್ಟರಿಯಿಂದ ವೇಸ್ಟೇಜ್ ಕೆಮಿಕಲ್ ನ್ನು ನಾಲೆಗೆ ಚಲ್ಲಿ ಹೋಗಲಾಗಿದೆ, ಕೆಮಿಕಲ್ ಮಿಶ್ರಿತ ನೀರನ್ನು ಗೊತ್ತಾಗದೇ ರೈತ ವಾಸು ತನ್ನ ಒಂದುವರೆ ಎಕರೆ ಭತ್ತದ ಗದ್ದೆಗೆ ಹಾಯಿಸಿದ್ದು ಮರು ದಿನ ಬಂದು ನೋಡಿದಾಗ ಬೆಳೆಯಲ್ಲಾ ಸುಟ್ಟು ಹೋಗಿದೆ, ಇದರಿಂದ ರೈತ ದಿಕ್ಕು ತೋಚದೇ ಕಂಗಾಲಾಗಿ ಹೋಗಿದ್ದಾರೆ, ಅಷ್ಟೆ ಅಲ್ಲದೇ ಪಕ್ಕದ ಹೊಲದ ರೈತರು ಸಹ ಆತಂಕಕ್ಕೆ ಒಳಗಾಗಿದ್ದಾರೆ, ನಮ್ಮ ಬೆಳೆಗೆ ನೀರು ಬಂದಿರಬಹುದು ನಮ್ಮ ಗದ್ದೆ ಒಣಗುತ್ತಾ, ಸುಟ್ಟು ಹೋಗುತ್ತಾ ಎನ್ನುವ ಚಿಂತೆಯಲ್ಲಿದ್ದಾರೆ.

ಇನ್ನೂ ದಾವಣಗೆರೆ ಹತ್ತಿರ ಇರುವುದರಿಂದ ಕುಡುಕರು ಬಾಟಲ್ ಗಳನ್ನು ಇಲ್ಲೇ ಬಿಟ್ಟು ಹೋಗುತ್ತಾರೆ.. ಅಲ್ಲದೆ ಕೆಲವೊಂದು ಕಂಪನಿಗಳ ಕೆಮಿಕಲ್ ಗಳನ್ನು ರಾತ್ರೋರಾತ್ರಿ ಟ್ಯಾಂಕರ್ ಗಳಲ್ಲಿ ತಂದು ಸುರಿದು ಹೋಗುತ್ತಾರೆ. ಇದರಿಂದ ಭದ್ರಾ ಚಾನಲ್ ನ ನೀರು ಕಲುಷಿತ ವಾಗಿ ಮೀನುಗಳೆಲ್ಲ ಸಾವನ್ನಪ್ಪಿವೆ, ಜೊತೆಗೆ ರೈತರ ಜಮೀನುಗಳಿಗೆ ಕೆಮಿಕಲ್ ನೀರು ಹೋಗಿ ಇಡೀ ಭತ್ತದ ಗದ್ದೆ ಕೆಟ್ಟ ವಾಸನೆ ಜೊತೆಗೆ ಜಿಡ್ಡು ಜಿಡ್ಡಾದ ನೀರು ನಿಂತಿದ್ದು, ಸಂಕಷ್ಠ ತಂದಿದೆ. ಈ ನೀರನ್ನು ರೈತರು ಪಂಪ್ ಮೂಲಕ ಹೊರ ಹಾಕುತ್ತಿದ್ದಾರೆ, ಅಲ್ಲದೆ ಕೆಮಿಕಲ್ ನೀರು ನಿಂತ ಭೂಮಿ ಕೂಡ ಬರಡು ಭೂಮಿಯಾಗುವ ಅತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಸಿಟಿ ಹತ್ತಿರ ಜಮೀನು ಇದೆ ಎನ್ನುವ ಖುಷಿಗಿಂತ ಇಲ್ಲಿನ ರೈತರಿಗೆ ಆತಂಕವೇ ಹೆಚ್ಚಾಗಿದೆ, ಈಗಾಗಲೇ 20 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಕೆಮಿಕಲ್ ನೀರಿನಿಂದ ಇಡೀ ಬೆಳೆ ಹಾಳಾಗುವ ಸ್ಥಿತಿ ತಲುಪಿದೆ. ಏನೇ ಆಗಲಿ ಈ ರೀತಿ ರೈತರಿಗೆ ತೊಂದರೆ ಕೊಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಬೇಕಿದೆ..