POWER SAMACHARA | KANNADA NEWS | BREKING NEWS| 12-07-2023..

ದಾವಣಗೆರೆ : ನಗರ ಸಮೀಪದ ಶಿರಮಗೊಂಡನಹಳ್ಳಿ ಮನೆಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರನ್ನ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಭೇಟಿ ಆಗಿ ಕೆಲ ಹೊತ್ತು ರಹಸ್ಯ ಮಾತುಕತೆ ನಡೆಸಿದ್ದಾರೆ..!

ಲೋಕಸಭೆ ಚುನಾವಣೆ ಸಮೀಪ ಹಿನ್ನಲೆ ಭೇಟಿ ಮಹತ್ವ ಪಡೆದಿದೆ, ಎಂಎಲ್ ಎ ಚುನಾವಣೆ ಸೋತ ಬಳಿಕ ಎಂಪಿ ಚುನಾವಣೆ ಮೇಲೆ ರೇಣುಕಾಚಾರ್ಯ ಕಣ್ಣಿಟ್ಟಿದ್ದು, ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ, ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಎಂದು ಈಗಾಗಲೇ ರೇಣುಕಾಚಾರ್ಯ ಘೋಷಿಸಿಕೊಂಡಿದ್ದು, ಈ ಹಿನ್ನಲೆ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳನ್ನು ರೇಣುಕಾಚಾರ್ಯ ಭೇಟಿಯಾಗುತ್ತಿದ್ದಾರೆ, ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಹಾಗೂ ಎಂಪಿ ರೇಣುಕಾಚಾರ್ಯ ನಡುವೆ ಈಗಿನಿಂದಲೇ ಟಿಕೆಟ್ ಫೈಟ್ ಶುರುವಾಗಿದೆ..

ನಾಮಕಾವಸ್ಥೆಗೆ ಟಿಕೆಟ್ ಕೇಳಲ್ಲ, ನಾನು ಪ್ರಬಲ ಆಕಾಂಕ್ಷಿ..!

ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಅವರು ದಾವಣಗೆರೆ-ಚಿತ್ರದುರ್ಗ ಅಖಂಡ ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದವರು, ಲೋಕಸಭೆ ಚುನಾವಣೆಗೆ ಮಾರ್ಗದರ್ಶನ ಪಡೆಯಲು ಬಂದಿದ್ದೇನೆ, ಬೆಂಬಲ ಕೇಳಿದೀನಿ, ಕೊಟ್ಟಿದ್ದಾರೆ, ನಾಮಕಾವಸ್ಥೆಗೆ ಎಂಪಿ ಟಿಕೆಟ್ ಕೇಳುವುದಿಲ್ಲ, ನಾನು ಪ್ರಬಲ ಟಿಕೆಟ್ ಆಕಾಂಕ್ಷಿ, ಪಕ್ಷ ತೀರ್ಮಾನಕ್ಕೆ ಬದ್ದನಾಗಿದ್ದೇನೆ ಎಂದು ದಾವಣಗೆರೆಯಲ್ಲಿ ಎಂಪಿ ರೇಣುಕಾಚಾರ್ಯ ಹೇಳಿಕೆ ನೀಡಿ ಸಂಚಲನ ಮೂಡಿಸಿದ್ದಾರೆ.

ದಾವಣಗೆರೆಯ ಎಲ್ಲಾ ತಾಲ್ಲೂಕಿನ ಮುಖಂಡರಿಂದ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದಾರೆ, ಹಾಲಿ ಸಂಸದ ಸಿದ್ದೇಶ್ವರ್ ನಾಲ್ಕು ಭಾರೀ ಗೆದ್ದವರು, ಅವರಿಗೆ ಟಿಕೆಟ್ ಪ್ರತಿ ಸ್ಪರ್ಧೆ ನಾನಲ್ಲ ಎಂದರು..

ಜೈನ ಮುನಿ ಬರ್ಬರ ಹತ್ಯೆ ಹಿನ್ನಲೆ ಮಾತನಾಡಿದ ಅವರು, ಧರ್ಮ ಭೋದನೆ ಮಾಡುವವರನ್ನೆ ಹತ್ಯೆ ಮಾಡಿದರೆ ಹೇಗೆ, ಸಿಬಿಐಗೆ ವಹಿಸಬೇಕು, ಶಿಕ್ಷೆ ಕೊಡಬೇಕು, ಸರಿಯಾದ ತನಿಖೆ ಆಗಬೇಕಂದ್ರೆ ಸಿಬಿಐ ವಹಿಸಬೇಕು ಎಂದರು..

ರಾಗಾ ಪರವಾಗಿ ಕಾಂಗ್ರೆಸ್ ಪ್ರತಿಭಟನೆ ಹಿನ್ನಲೆ ಮಾತನಾಡಿದ ಅವರು, ರಾಹುಲ್ ಗೆ ಪ್ರಬುದ್ದತೆ ಇಲ್ಲ, ಹಿಡಿತ ಇಲ್ಲ, ಈ ದೇಶದ ಕಾನೂನು ಗೌರವಿಸಬೇಕು, ರಾಹುಲ್ ಗೆ ನಾಯಕತ್ವ ಎಲ್ಲಿದೆ, ಕಾನೂನು ಗೌರವಿಸಬೇಕು, ಮಾತನಾಡುವಾಗ ನಾಲಿಗೆ ಮೇಲೆ ಹಿಡಿತ ಇರಬೇಕು ಎಂದು ವಾಗ್ದಾಳಿ ನಡೆಸಿದರು..

ರಾಜ್ಯಾಧ್ಯಕ್ಷ ವಿಪಕ್ಷ ನಾಯಕರ ಗೊಂದಲ ವಿಚಾರವಾಗಿ ಮಾತನಾಡಿದ ಅವರು, ಆದಷ್ಟು ಬೇಗ ಮಾಡುತ್ತಾರೆ, ಕಾರ್ಯಕರ್ತರ ಮನಸ್ಸಿಗೆ ನೋವಿದೆ, ಅಧಿಕೃತವಾಗಿ ನೇಮಕ ಮಾಡುತ್ತಾರೆ, ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ, ಮುಂದಿನ ಚುನಾವಣೆಗೆ ಸನ್ನದ್ದರಾಗಬೇಕು, ಬಹಳ ವಿಳಂಬ ಆಗಿದೆ ನಿಜ, ಶೀಘ್ರದಲ್ಲೇ ಅಧ್ಯಕ್ಷರ, ವಿಪಕ್ಷನ ನಾಯಕರ ಆಯ್ಕೆ ಆಗುತ್ತದೆ ಎಂದರು, ಶಿಸ್ತು ಸಮಿತಿ ಕೊಟ್ಟಿರುವ ನೋಟೀಸ್ ಗೆ ಯಾವುದೇ ಕಾರಣಕ್ಕೂ ಉತ್ತರ ಕೊಡೋದಿಲ್ಲ ನಾನು ತಪ್ಪು ಮಾಡಿಲ್ಲ, ನೋಟೀಸ್ ಗೆ ಉತ್ತರ ಕೊಡಲ್ಲ, ಬಿಜೆಪಿ ಬಿಡಲ್ಲ ಕಾಂಗ್ರೆಸ್ ಸೇರಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ..

ರೇಣುಕಾಸ್ವಾಮಿಗೆ ಟಿಕೆಟ್ ಸಿಕ್ಕರೆ ಕೆಲಸ ಮಾಡಲು ರೆಡಿ..!

ಎಂಪಿ ರೇಣುಕಾಸ್ವಾಮಿ ಬಿಜೆಪಿಯಲ್ಲಿ 25-30 ವರ್ಷ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ, ನಾನು 1991ರಲ್ಲಿ ಲೋಕಸಭೆ ಚುನಾವಣೆಗೆ ನಿಂತಾಗ ಹಗಲು ರಾತ್ರಿ ಕೆಲಸ ಮಾಡಿದ್ದ, ಅವನಿಗೆ ಎಂಪಿ ಟಿಕೆಟ್ ಕೊಟ್ಟರೆ ಕೆಲಸ ಮಾಡುತ್ತೇವೆ, ಜಿಎಂ ಸಿದ್ದೇಶ್ವರ್ ಮತ್ತೆ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ, ಯಾರಿಗೆ ಟಿಕೆಟ್ ಕೊಟ್ಟರು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ಹೇಳಿಕೆ ನೀಡಿದ್ದಾರೆ..

ಬಿಜೆಪಿ ಬುದ್ದಿವಂತರ ಪಾರ್ಟಿ..!

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಆಗುತ್ತದೆ, ಸಣ್ಣಪುಟ್ಟ ದೋಷ ಇದ್ದರೆ ಸರಿ ಮಾಡುತ್ತೇವೆ, ಬುದ್ದಿವಂತರ ಪಾರ್ಟಿಯಲ್ಲಿ ಇದೆಲ್ಲ ಇದ್ದಿದ್ದೆ, ಆಯ್ಕೆ ಮಾಡಲು ರಾಜ್ಯ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ, ನಾನು ಪಕ್ಷ ಹೇಳಿದ್ದ ಕೆಲಸಗಳನ್ನು ಮಾಡುತ್ತೇನೆ, ಸರ್ಕಾರದ ಸಾಧನೆಗಳ ಬಗ್ಗೆ ಕರಪತ್ರ ಹಂಚಲು ಹೇಳಿದ್ದಾರೆ, ಇಂದಿನಿಂದ ಪಲಾನುಭವಿಗಳ ಮನೆಗೆ ಹೋಗಿ ಕರ ಪತ್ರ ಹಂಚುತ್ತೇವೆ ಎಂದರು..

ದುಡ್ಡು ಇದ್ದೋರಿಗೆ ದುಡ್ಡಿನ ಬಗ್ಗೆ ಚಿಂತೆ..!

ಆಶ್ರಯ ಮನೆ ಹಕ್ಕುಪತ್ರ ಬಗ್ಗೆ ಪರಿಶೀಲನೆ ಮಾಡುತ್ತೇವೆ, ಕೆಲವೆಡೆ ಹಣ ಪಡೆದು ಹಕ್ಕು ಪತ್ರ ಕೊಡಿಸುವ ಪ್ರಯತ್ನ ನಡೆದಿದೆ ಎಂಬ ಮಾಹಿತಿ ಇದೆ, ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಹೇಳಿಕೆ ಹಿನ್ನಲೆ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಸ್ ಎ ರವೀಂದ್ರನಾಥ್, ಸಾಲಕಟ್ಟೆ ಆಶ್ರಯ ಮನೆ ಹಕ್ಕುಪತ್ರ ಇನ್ನೂ ಕೊಟ್ಟೆ ಇಲ್ಲ, ಯಾರಿಂದಲೂ ಹಣ ಪಡೆದಿಲ್ಲ, ಪಲಾನುಭವಿಗಳನ್ನು ಗುರುತಿಸಿ 26 ಎಕರೆಯಲ್ಲಿ 956 ಹಕ್ಕುಪತ್ರವನ್ನ ಮಾರ್ಚ್ ತಿಂಗಳಲ್ಲೇ ರೆಡಿ ಮಾಡಿದ್ದಾರೆ, ನಾವಂತ್ರು ದುಡ್ ಇಸ್ಕೊಂಡಿಲ್ಲ, ದುಡ್ಡು ಇದ್ದೋರು ದುಡ್ಡಿನ ಬಗ್ಗೆ ಚಿಂತೆ ಮಾಡುತ್ತಾರೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರಿಗೆ ಟಾಂಗ್ ನೀಡಿದರು..