<strong>POWER SAMACHARA | KANNADA NEWS | BREKING NEWS| 22-09-2023..</strong> <strong>ದಾವಣಗೆರೆ</strong> : ಕಾವೇರಿ ಸಮಸ್ಯೆ ಬಗೆಹರಿಸುವಂತೆ ದಾವಣಗೆರೆಯಲ್ಲಿ ಗಣೇಶ ದೇವರ ಬಳಿ ನಾಯಕ ನಟ ಅಭಿಷೇಕ್ ಅಂಬರೀಶ್ ಪ್ರಾರ್ಥನೆ ಮಾಡಿದ್ದಾರೆ, ದಾವಣಗೆರೆ ನಗರದ BIET ಕಾಲೇಜು ರಸ್ತೆಯಲ್ಲಿ ಟೀಮ್ 42 ವತಿಯಿಂದ ಎರಡನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಗಣೇಶೋತ್ಸವ ಕಾರ್ಯಕ್ರಮಕ್ಕೆ ದಾವಣಗೆರೆಗೆ ಆಗಮಿಸಿದ್ದ ನಟ ಅಭಿಷೇಕ್ ಅಂಬರೀಶ್, ಕಾರ್ಯಕ್ರಮದ ವೇದಿಕೆಯಲ್ಲಿ ರೈತರನ್ನು ನೆನಪಿಸಿಕೊಂಡರು. <img class="aligncenter wp-image-2480 size-full" src="https://powersamachara.com/wp-content/uploads/2023/09/abishek-ambarish1.jpg" alt="" width="870" height="570" /> ನಮ್ಮ ನಾಡಿನಲ್ಲಿ ಹಲವಾರು ಸಮಸ್ಯೆಗಳು ಇದೆ, ಅದರಲ್ಲೂ ನಮ್ಮ ರೈತರು ಹಲವಾರು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಈ ವೇದಿಕೆ ಮುಖಾಂತರ ರೈತರ ಕಷ್ಟಗಳಿಗೆ ಪರಿಹಾರ ದೊರಕಲಿ ಅಂತ 30 ಸೆಕೆಂಡ್ ನಾಡಿನ ರೈತರ ಒಳಿತಿಗಾಗಿ ಪ್ರಾರ್ಥನೆ ಮಾಡಲಾಯಿತು.. ಇದೇ ವೇಳೆ ತಮ್ಮ ತಂದೆಯ 49ನೇ ಹುಟ್ಟು ಹಬ್ಬಕ್ಕೆ ದಾವಣಗೆರೆಯಲ್ಲಿ ಆಚರಣೆ ಮಾಡಿದ್ದರು, ಆಗ ನಾನು ಇನ್ನೂ ಚಿಕ್ಕ ಹುಡುಗ ಇಲ್ಲಿಗೆ ಬಂದಿದ್ದೆ, ವಿಷ್ಣುವರ್ಧನ್ ಹಾಗೂ ಅಂಬರೀಶ್ ಜೊತೆಗೆ ಹೆಲಿಕ್ಯಾಪ್ಟರ್ ನಲ್ಲಿ ದಾವಣಗೆರೆಗೆ ಬಂದಿದ್ದೆ, ಆಗ ನಮ್ಮ ತಂದೆ ನೋಡಲು ಸಾಕಷ್ಟು ಜನ ಸೇರಿದ್ದರು ಎಂದು ಹಳೆಯ ನೆನಪು ಮೆಲುಕು ಹಾಕಿದರು.. <img class="aligncenter wp-image-2481 size-full" src="https://powersamachara.com/wp-content/uploads/2023/09/abishek-ambarish2.jpg" alt="" width="870" height="570" /> ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅಭಿಷೇಕ್ ಅಂಬರೀಶ್, ಆ ತರ ಏನು ಇಲ್ಲ, ಇಡೀ ಕನ್ನಡ ಚಿತ್ರರಂಗ, ಯಾವತ್ತೂ ಸಮಸ್ಯೆ ಬಂದಾಗ ರೈತರ ಪರ ನಿಂತಿದೆ, ಇವತ್ತಿಗೂ ನಿಲ್ತಾರೆ, ಇನ್ನೂ ಮುಂದಕ್ಕೂ ಯಾವಾಗಲೂ ನಿಲ್ತಾರೆ, ಒಂದು ವೇದಿಕೆ ಸೃಷ್ಟಿಯಾಗಲಿ ಎಲ್ಲರೂ ಬರ್ತಾರೆ, ಹಿರಿಯರೆಲ್ಲ ಕೂತು ಮಾತನಾಡುತ್ತಾ ಇದ್ದಾರೆ, ಬಂದೆ ಬರ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಮಾತನಾಡಿದ್ದಾರೆ, ಬರ್ತಾರೆ ವೇದಿಕೆ ರೆಡಿ ಮಾಡಿಕೊಳ್ಳುತ್ತಿದ್ದಾರೆ, ಖಂಡಿತವಾಗಲೂ ನಾವು ರೈತರ ಕೈ ಹಿಡಿಯುತ್ತೇವೆ, ಚಿತ್ರರಂಗದ ಪ್ರತಿನಿಧಿಯಾಗಿ ಕಿರಿಯನಾಗಿ ಮಾತನಾಡುತ್ತಿದ್ದೇನೆ ಎಂದು ದಾವಣಗೆರೆಯಲ್ಲಿ ನಟ ಅಭಿಷೇಕ್ ಅಂಬರೀಶ್ ಹೇಳಿಕೆ ನೀಡಿದ್ದಾರೆ..