POWER SAMACHARA | KANNADA NEWS | BREKING NEWS| 13-07-2023..

ದಾವಣಗೆರೆ: ಕಾಲೇಜು ಮುಗಿಸಿ ರಸ್ತೆ ದಾಟುತ್ತಿದ್ದಾಗ ಹಾಲಿನ ಡೈರಿ ವಾಹನ ಡಿಕ್ಕಿಯಾಗಿ ಆಯುರ್ವೇದಿಕ್ ಕಾಲೇಜ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ದಾವಣಗೆರೆ- ಹರಿಹರ ರಸ್ತೆಯ ಬಾತಿ ಬಳಿ ನಡೆದಿದೆ..

ದಾವಣಗೆರೆಯ ಎಚ್.ಕೆ.ಆರ್. ನಗರದ ನಿವಾಸಿ ಶಿವಕುಮಾರಸ್ವಾಮಿ ಅವರ ಪುತ್ರ ಡಾ. ಮನೋಜ್ ಕುಮಾರ್ (20) ಮೃತ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಅಶ್ವಿನಿ ಆಯುರ್ವೇದ ಕಾಲೇಜಿನಲ್ಲಿ ಮೊದಲನೇ ವರ್ಷದ ಬಿಎಂಎಸ್ ವ್ಯಾಸಂಗ ಮಾಡುತ್ತಿದ್ದು ಸಂಜೆ ಕಾಲೇಜು ಮುಗಿಸಿಕೊಂಡು ಹತ್ತಿರದ ಬಸ್ ನಿಲ್ದಾಣಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ಡೇರಿಯ ವಾಹನ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡಿದ್ದ ವಿದ್ಯಾರ್ಥಿಯನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ, ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಎಐವೈಎಫ್ ಸಂಘಟನೆಯಿಂದ ಪ್ರತಿಭಟನೆ

ಅಪಘಾತ ಖಂಡಿಸಿ ಎಐವೈಎಫ್ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗಿದೆ.

ದಾವಣಗೆರೆ -ಹರಿಹರ ರಸ್ತೆಯಲ್ಲಿರುವ ಆಯುರ್ವೇದಿಕ್ ಕಾಲೇಜ್ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಘಟನೆಯಲ್ಲಿ ಎಚ್.ಕೆ.ಆರ್. ನಗರದ ವಿದ್ಯಾರ್ಥಿ ಡಾ. ಮನೋಜ್ ಕುಮಾರ್ ಸಾವನ್ನಪ್ಪಿದ್ದಾನೆ, ಈ ರಸ್ತೆಯಲ್ಲಿ ಎರಡು ತಿಂಗಳಲ್ಲಿ ಮೂವರು ವಿದ್ಯಾರ್ಥಿಗಳು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ, ಜಿಎಂಐಟಿ ಹಾಗೂ ಆಯುರ್ವೇದಿಕ್ ಕಾಲೇಜ್ ನ ಹೆಚ್ಚಿನ ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಇದಾಗಿದೆ, ಈ ಹಿಂದೆ ರಸ್ತೆಗೆ ಹಮ್ಸ್ ಹಾಕಿ ಎಂದು ಒತ್ತಾಯಿಸಿದ್ದರು ಸಹ ನಿರ್ಲಕ್ಷ್ಯ ವಹಿಸಲಾಗಿದೆ, ಈ ಹಿನ್ನಲೆ ರಸ್ತೆಗೆ ಹಮ್ಸ್ ಹಾಕಬೇಕು, ಈ ಸ್ಥಳದಲ್ಲಿ ಬಸ್ ಸ್ಟಾಪ್ ನಿರ್ಮಿಸಬೇಕು, ಬಾತಿಕೆರೆಗೆ ತಡೆಗೋಡೆ ನಿರ್ಮಿಸಬೇಕು, ಜೊತೆಗೆ ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಗಿದೆ..

ಈ ವೇಳೆ AIYF ರಾಜ್ಯ ಉಪಾಧ್ಯಕ್ಷರು ಅವರಗೆರೆ ವಾಸು, ವಕೀಲರಾದ ಪರಮೇಶ್ವರ್ S. ಕಾಲೇಜಿನ ಪ್ರಿನ್ಸಿಪಾಲ್ ಸೇರಿದಂತೆ ಜಿಜೆ ಹಿರೇಮಠ್ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.