POWER SAMACHARA | KANNADA NEWS | BREKING NEWS| 25-08-2023..

ದಾವಣಗೆರೆ: ನಗರದ ಎಸ್ಪಿ ಕಚೇರಿಯಲ್ಲಿ ದಾವಣಗೆರೆ ನೂತನ ಎಸ್ಪಿ ಉಮಾ ಪ್ರಶಾಂತ್ ಅವರು ಅಧಿಕಾರ ಸ್ವೀಕಾರ ಮಾಡಿದರು. ನಿರ್ಗಮಿತ ಎಸ್ಪಿ ಡಾ. ಅರುಣ್ ಅವರು ಅಧಿಕಾರ ಹಸ್ತಾಂತರಿಸಿದರು..

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಎಸ್ಪಿ ಉಮಾ ಪ್ರಶಾಂತ್, ಅಪಘಾತಗಳ ಬಗ್ಗೆ ಅರಿವು ಮೂಡಿಸಲಾಗುವುದು, ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡಲಾಗುವುದು, ಕಾನೂನಾತ್ಮಕವಾಗಿ ಕೆಲಸ ಮಾಡುತ್ತೇನೆ. ದಾವಣಗೆರೆ ಜಿಲ್ಲೆ ಬೆಳವಣಿಗೆ ಕುರಿತು ತಿಳಿದುಕೊಳ್ಳಬೇಕಿದೆ., ಜನಸ್ನೇಹಿಯಾಗಿ ಆಡಳಿತ ನಡೆಸುತ್ತೇನೆ. ಈ ಹಿಂದೆ ಕೆಲಸ ಮಾಡಿದ್ದ ಚಿಕ್ಕಮಗಳೂರು ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿತ್ತು, ಚಿಕ್ಕಮಗಳೂರಿನಲ್ಲಿ ಕೆಲವೊಂದು ಹೊಸ ಹೊಸ ಆಡಳಿತ ಪ್ರಕ್ರಿಯೆ ನಡೆಸಲಾಗಿತ್ತು, ಇಲ್ಲಿಯೂ ಸಹ ಜನಸ್ನೇಹಿ ಆಡಳಿತಕ್ಕೆ ಒತ್ತು ನೀಡುತ್ತೇನೆ ಎಂದರು..