ದಾವಣಗೆರೆ: ಒಂದಿಲ್ಲೊಂದು ವಿವಾದದಲ್ಲಿ ತೊಳಲಾಡುತ್ತಿದ್ದ ರಾಜ್ಯ ಬಿಜೆಪಿಗೆ ಶುಕ್ರದೆಸೆ ತಿರುಗಿದಂತೆ ಕಾಣುತ್ತಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಚಾಣಾಕ್ಯ ಅಮಿತ್ ಶಾ ಕರ್ನಾಟಕ್ಕೆ ಪದೇ ಪದೇ ಆಗಮಿಸಿ ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬುತ್ತಿದ್ದಾರೆ, ಇದಕ್ಕೆ ಮತ್ತೊಂದು ಎಂಟ್ರಿಯಾಗಿದ್ದು ನಾಯಕ ನಟ ಕಿಚ್ಚ ಸುದೀಪ್, ಸ್ಟಾರ್ ಕ್ಯಾಂಪೇನ್ ಮಾಡಲು ಒಪ್ಪಿಗೆ ಸೂಚಿಸಿದ್ದು, ಇದರಿಂದ ದಾವಣಗೆರೆ ಕೈ ಪಡೆ ಚಿಂತೆಗೀಡಾಗಿದೆ..
ಬರೋಬ್ಬರಿ 212000 ವಾಲ್ಮೀಕಿ ಜನಾಂಗದ ಮತದಾರರು
ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಸಭಾ ಕ್ಷೇತ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹರಪನಹಳ್ಳಿ ಕ್ಷೇತ್ರ ಸೇರಿ ಒಟ್ಟು ಎಂಟು ಕ್ಷೇತ್ರಗಳಲ್ಲಿ ವಾಲ್ಮೀಕಿ ಜನಾಂಗದ ಮತಗಳು ಇರೋದು ಬರೋಬ್ಬರಿ 212000... ಹೌದು.. ನಾಲ್ಕೈದು ಕ್ಷೇತ್ರಗಳಲ್ಲಿ ನಿರ್ಣಾಯಿಕವಾಗಿರುವ ವಾಲ್ಮೀಕಿ ಜನಾಂಗಕ್ಕೆ ಸ್ವ ಜಾತಿಯ ಕಿಚ್ಚ ಸುದೀಪ್ ಎಂದರೆ ಎಲ್ಲಿಲ್ಲದ ಪ್ರೀತಿ, ಸ್ವಜಾತಿಯ ಜೊತೆಗೆ ಬೇರೆ ಬೇರೆ ಸಮುದಾಯದ ಜನರು ಸಹ ಕಿಚ್ಚನ ಫ್ಯಾನ್ಸ್, ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಕಿಚ್ಚ ಆಗಮಿಸಿದರೆ ಲಕ್ಷ ಲಕ್ಷ ಯುವಕರು ಸೇರೋದು ಪಕ್ಕಾ, ಹಲವು ಭಾರೀ ಲಾಠಿ ಚಾರ್ಜ್ ಆಗಿದ್ದು ಇದೆ, ಹೀಗಾಗಿಯೇ ಈ ಕ್ಷೇತ್ರಗಳಲ್ಲಿ ಕಿಚ್ಚ ಎಂಟ್ರಿ ಕೊಟ್ರೆ ಬಿಜೆಪಿ ಗೆಲುವು ಪಕ್ಕಾ ಪಕ್ಕಾ ಅಂತಿದೆ ದಾವಣಗೆರೆ ಬಿಜೆಪಿ ವಲಯ.
ಕ್ಷೇತ್ರ-ವಾಲ್ಮೀಕಿ ಜನಾಂಗದ ಮತಗಳು(ಅಂದಾಜು)

ಜಗಳೂರು-46000

ಮಾಯಕೊಂಡ- 40000

ಉತ್ತರ-25000

ಚನ್ನಗಿರಿ-22000

ಹರಿಹರ- 15000

ಹರಪನಹಳ್ಳಿ- 28000

ಹೊನ್ನಾಳಿ- 20000

ದಾವಣಗೆರೆ ದಕ್ಷಿಣ-16000

ಮೂರು ಕ್ಷೇತ್ರ ಫಿಕ್ಸ್, ಉಳಿದಿದ್ದು ಬೋನಸ್
ಮೇಲಿನ ಅಂದಾಜು ಅಂಕಿ ಅಂಶಯದ ಪ್ರಕಾರ ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬರೋಬ್ಬರಿ 46 ಸಾವಿರ, ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 40 ಸಾವಿರ, ಹರಪನಹಳ್ಳಿಯಲ್ಲಿ 28 ಸಾವಿರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಾಲ್ಮೀಕಿ ನಾಯಕ ಜನಾಂಗ್ ಮತಗಳು ನಿರ್ಣಾಯಿಕವಾಗಿದೆ.
ಕಿಲ ಕಿಲ ನಗೆಯಲ್ಲಿ ಕಮಲ ಪಡೆ
ಜಗಳೂರು, ಮಾಯಕೊಂಡ, ಹರಪನಹಳ್ಳಿಗೆ ಕಿಚ್ಚ ಕ್ಯಾಂಪೇನ್ ಗೆ ಬರೋದು ಬಹುತೇಕ ಫಿಕ್ಸ್ ಆಗಿದ್ದು, ಕಾಂಗ್ರೆಸ್ ಗೆ ನಷ್ಟ ಗ್ಯಾರಂಟಿ. ಇನ್ನೂ ಉಳಿದ ಕ್ಷೇತ್ರಗಳಲ್ಲಿ ಸಹ ನಾಯಕ ಜನಾಂಗದ ಮತಗಳು ಇದ್ದು ಕಿಚ್ಚನ ಎಂಟ್ರಿಯಿಂದ ದಾವಣಗೆರೆ ಕಮಲ ಪಡೆ ಕಿಲ ಕಿಲ ನಗೆ ಬೀರುತ್ತಿದೆ..