POWER SAMACHARA | KANNADA NEWS | BREKING NEWS| 25-05-2023

ದಾವಣಗೆರೆ: ದಿ ಕೇರಳ ಸ್ಟೋರಿ ಸಿನಿಮಾ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದು, ಬೆಣ್ಣೆನಗರಿ ದಾವಣಗೆರೆಯಲ್ಲಿ ಸಹ ವಿದ್ಯಾರ್ಥಿನಿಯರಿಂದ ಭಾರೀ ರೆಸ್ಪಾನ್ಸ್ ಸಿಕ್ಕಿದೆ..

ದಾವಣಗೆರೆ ನಗರದ ತ್ರಿಶೂಲ ಚಿತ್ರಮಂದಿರದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಪ್ರೇರಣಾ ಯುವ ಸಂಸ್ಥೆ ಹಾಗೂ ಹಿಂದೂ ಜಾಗರಣ ವೇದಿಕೆ ಸಹಯೋಗದೊಂದಿಗೆ ಮಾಜಿ ಮೇಯರ್, ದಾವಣಗೆರೆ ಹಿಂದು ಫೈರ್ ಬ್ರ್ಯಾಂಡ್ ಎಂದೇ ಖ್ಯಾತಿ ಪಡೆದಿರುವ ಎಸ್ ಟಿ ವೀರೇಶ್ ನೇತೃತ್ವದಲ್ಲಿ ಉಚಿತ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ..

ಸಂಜೆ ಶೋನೂ ಉಚಿತ..!

ಗುರುವಾರ ಮಾರ್ನಿಂಗ್ ಶೋ, ಮ್ಯಾಟ್ನಿ ಶೋ ಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು, ಭಾರೀ ಪ್ರಶಂಸೆ ಬಂದ ಹಿನ್ನಲೆ ಸಂಜೆ ಫಸ್ಟ್ ಶೋ ಗೂ ಸಹ ಉಚಿತ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ..

ತಂಡೋಪತಂಡವಾಗಿ ವಿದ್ಯಾರ್ಥಿಗಳ ಆಗಮನ

ವಿವಿಧ ಕಾಲೇಜುಗಳಿಂದ ತಂಡೋಪ ತಂಡವಾಗಿ ಆಗಮಿಸಿದ ವಿದ್ಯಾರ್ಥಿನಿಯರು, ಸಿನಿಮಾ ನೋಡಿ ಅಬ್ಬಾ ಎಂತಹ ಸಿನಿಮಾ ಎಂದು ಉದ್ಘಾರ ವ್ಯಕ್ತಪಡಿಸುತ್ತಿದ್ದಾರೆ, ಈ ಸಿನಿಮಾದಿಂದ ನಾವು ಕಲಿಯುವುದು ತುಂಬಾ ಇದೆ, ಬೇರೆ ಧರ್ಮದ ಕುತಂತ್ರಕ್ಕೆ ಬಲಿಯಾಗಿ ಮತಾಂತರ ಆಗುವುದರ ಕುರಿತು ಅದ್ಭುತವಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ, ಪ್ರತಿಯೊಬ್ಬ ಹಿಂದು ಯುವತಿ ಸಿನಿಮಾ ನೋಡಬೇಕು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಇಂತಹ ಅರ್ಥಗರ್ಭಿತ ಸಿನಿಮಾ ತೋರಿಸಿದ ಎಸ್ ಟಿ ವೀರೇಶ್ ಹಾಗೂ ಅವರಿಗೆ ಸಹಾಯ ಮಾಡಿದ ಎಲ್ಲರಿಗೂ ವಿದ್ಯಾರ್ಥಿನಿಯರು ಧನ್ಯವಾದ ತಿಳಿಸಿದ್ದಾರೆ..

ಈ ಸಂದರ್ಭದಲ್ಲಿ ಮಾಜಿ ಮೇಯರ್ ಹಾಗೂ ಹಿಂದು ಪರ ಮುಖಂಡ ಎಸ್ ಟಿ ವೀರೇಶ್, ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್, ಬಿಜೆಪಿ ಹಿರಿಯ ಮುಖಂಡ ನಾಗಭೂಷಣ್ ವಾಣಿ, ರಮೇಶ್ ಸೇರಿದಂತೆ ಮತ್ತಿತರರಿದ್ದರು..