POWER SAMACHARA | KANNADA NEWS | BREKING NEWS| 14-08-2023..

ದಾವಣಗೆರೆ: ರೈತ ದೇಶದ ಬೆನ್ನೆಲುಬು ಅಂತಾರೆ ಆದರೆ ಎಲ್ಲಾ ಕಡೇಗಳಿಂದಲೂ ರೈತನ ಬೆನ್ನೆಲುಬು ಮುರಿತಗೊಳ್ಳುತ್ತಿದೆ, ಮಳೆ ಇಲ್ಲದೇ ಬೆಳೆ ಒಣಗಿ ಹೋಗಿದ್ದು ಕಣ್ಣೀರಿಟ್ಟಿದ್ದಾನೆ, ಬೆಳೆ ಒಣಗಿದ್ದರಿಂದ ಇಡೀ ಬೆಳೆಯನ್ನೆ ಟ್ರ್ಯಾಕ್ಟರ್ ನಿಂದ ಅಳಿಸಿ ಹಾಕಿದ್ದು, ದೃಶ್ಯ ಕರುಳು ಹಿಂಡುವಂತಿದೆ...
ಹೌದು.. ಈ ಮನಕಲಕುವ ಘಟನೆ ನಡೆದಿದ್ದು, ದಾವಣಗೆರೆಯ ಭಾನುವಳ್ಳಿಯಲ್ಲಿ. ಹೌದು.. ರೈತ ದೇಶದ ಬೆನ್ನೆಲುಬು ಅಂತಾರೆ ಆದರೆ ಬೆಳೆಗೆ ಸರಿಯಾಗಿ ಬೆಲೆ ಸಿಗದೇ ರೈತ ನಷ್ಟ ಅನುಭವಿಸಿದ್ರೆ, ಇನ್ನೊಂದೆಡೆ ಮಳೆ ಕೊರತೆ ಆಗಿ ಬೆಳೆಯೇ ಕೈಗೆ ಸಿಗದ ಪರಿಸ್ಥಿತಿ ಎದುರಾಗುತ್ತೆ, ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಬಾನುವಳ್ಳಿಯಲ್ಲಿ ಮಳೆಯ ಆಟಕ್ಕೆ ಬೇಸತ್ತು ರೈತ ಬೆಳೆ ನಾಶ ಮಾಡಿದ್ದಾನೆ, ಮಳೆಯಿಲ್ಲದೇ ಕಮರಿ ಮೆಕ್ಕೆಜೋಳ ಕಮರಿ ಹೋಗಿತ್ತು, ಮೆಕ್ಕೆಜೋಳ ಕಾಳು ಕಟ್ಟೋದಿಲ್ಲ ಎಂದು ಟ್ರ್ಯಾಕ್ಟರ್ ನಿಂದ ಒಟ್ಟಿಗೆ ಬೆಳೆಯನ್ನೇ ನಾಶ ಮಾಡಿದ್ದಾರೆ..
ಭಾನುವಳ್ಳಿಯ ಬಾಪುಗೌಡ ಪಾಟೀಲ್ ಮತ್ತು ಕೊಟ್ರೇಶ್ ಬೆಳೆ ನಾಶ ಮಾಡಿದ ರೈತರಾಗಿದ್ದು, ಸುಮಾರು ಹತ್ತು ಎಕರೆಗೂ ಹೆಚ್ಚು ಬೆಳೆಯನ್ನ ಬೇರೆ ದಾರಿ ಇಲ್ಲದೆ ನಾಶ ಮಾಡಿದ್ದಾರೆ, ದಾವಣಗೆರೆ ಭಾಗದಲ್ಲಿ ಮಳೆ ಕೊರತೆ ಆಗಿದೆ, ಈ ಹಿನ್ನಲೆ ಭಾನುವಳ್ಳಿ ಹಾಗೂ ಹೊಸಳ್ಳಿ ಭಾಗದಲ್ಲಿ ಸುಮಾರು 1800ಎಕರೆ ಮೆಕ್ಕೆಜೋಳ ಬೆಳೆ ಒಣಗಿ ಹೋಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ..

ಒಟ್ಟಾರೆ ರಾಜ್ಯದಲ್ಲಿ ಮಳೆ ಕೊರತೆ ಹೆಚ್ಷಾಗಿದೆ, ಸರ್ಕಾರ ಈ ಕೂಡಲೇ ಬರಪೀಡಿತ ತಾಲ್ಲೂಕು ಘೋಷಣೆ ಮಾಡಬೇಕಿದೆ, ಇತ್ತ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುತ್ತಿರುವ ರೈತರಿಗೆ ಪರಿಹಾರ ನೀಡುವ ಮೂಲಕ ಕಣ್ಣಿರು ಹೊರಸಬೇಕಿದೆ..