POWER SAMACHARA | KANNADA NEWS | BREKING NEWS| 31-08-2023..

ದಾವಣಗೆರೆ: ಬಿಜೆಪಿಯ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರ ದಾವಣಗೆರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ, ಈ ಬಗ್ಗೆ ದಾವಣಗೆರೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್ ಬಿ ಮಂಜಪ್ಪ ಸುದ್ದಿಗೋಷ್ಠಿ ನಡೆಸಿದ್ದು, ಎಂಪಿ ರೇಣುಕಾಚಾರ್ಯ ವಿವಾದಾತ್ಮಕ ವ್ಯಕ್ತಿ, ಡಬಲ್ ಗೇಮ್ ರಾಜಕಾರಣಿ, ಸೋತ ಬಳಿಕ ಬುದ್ದಿ ಭ್ರಮಣೆಯಾಗಿದೆ, ಈ ಕಾಂಟ್ರವರ್ಸಿ ಮನುಷ್ಯ ನಮಗೆ ಬೇಡವೇ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ..

ರೇಣುಕಾಚಾರ್ಯರಿಂದ ಹುಚ್ಚಾಟ.

ಬಿಜೆಪಿ ಶಿಸ್ತಿನ ಪಕ್ಷ ಅಂತಾರೆ, ಅಲ್ಲಿಯೇ ಶಿಸ್ತು ಉಲ್ಲಂಘನೆ ಮಾಡಿ ನೋಟೀಸ್ ಪಡೆದಿದ್ದಾರೆ, ಅದಕ್ಕೆ ಉತ್ತರ ಕೊಟ್ಟಿಲ್ಲ, ಇಷ್ಟೊಂದು ವಿವಾದ ಮಾಡಿದ್ದರು ಬಿಜೆಪಿ ಪಕ್ಷದವರು ಸಹ ಕ್ರಮ ಕೈಗೊಂಡಿಲ್ಲ, ಬಿಎಸ್ ವೈ ಮಾನಸ ಪುತ್ರ ಅಂತಾರೆ, ಇವರು ಮಾನಸ ಪುತ್ರ ಅಲ್ಲ ಮಾನಸಿಕ ಪುತ್ರ, ಅಧಿಕಾರ ಕೊಟ್ಟ ಪಕ್ಷಕ್ಕೆ ಮಾರ್ಯಾದೆ ಕೊಡ್ತಾ ಇಲ್ಲ, ಇನ್ನೂ ನಮಗೆ ಕೊಡ್ತಾರಾ, ಇವರ ಹುಚ್ಚಾಟಗಳನ್ನ ನಾವು ನೋಡೊಕೆ ಆಗಲ್ಲ, ಹೀಗಾಗಿ ರೇಣುಕಾಚಾರ್ಯ ನಮ್ಮ ಪಕ್ಷಕ್ಕೆ ಅವಶ್ಯಕತೆ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ..

ರೇಣುಕಾಚಾರ್ಯ ಡಬಲ್ ಗೇಮ್ ರಾಜಕಾರಣಿ..

ಬಿಜೆಪಿಗೆ ಬ್ಲಾಕ್ ಮಾಡೋಕೆ ಹೀಗೆ ಮಾಡುತ್ತಿದ್ದಾರೆ, ಸುಖಾಸುಮ್ಮನೆ ಪ್ರಚಾರ ತೆಗೆದುಕೊಳ್ಳಲು ಮಂತ್ರಿಗಳನ್ನ ಭೇಟಿಯಾಗಿ ಫೋಟೊ ತೆಗೆಸಿಕೊಳ್ಳುತ್ತಿದ್ದಾರೆ, ಜಗದೀಶ್ ಶೆಟ್ಟರ್ ಅವರು ಇವರ ರೀತಿ ಹುಚ್ಚಾಟ ಮಾಡಿರಲಿಲ್ಲ, ಹೀಗಾಗಿ ಪಕ್ಷಕ್ಕೆ ಕರೆದುಕೊಂಡೆವು, ರೇಣುಕಾಚಾರ್ಯ ಡಬಲ್ ಗೇಮ್ ರಾಜಕಾರಣಿ, ಬಿಜೆಪಿಗೆ ಮುಜುಗರ ಮಾಡುತ್ತಿದ್ದಾರೆ, ಜಿಲ್ಲಾ ಕಾಂಗ್ರೆಸ್ ನಿಂದ ಸಂಪೂರ್ಣ ವಿರೋಧ ಮಾಡುತ್ತಿದ್ದೇವೆ, ಅಧಿಕಾರ ಇದ್ದಾಗ ಏನೂ ಮಾಡಲಿಲ್ಲ, ಈಗ ಅಭಿವೃದ್ದಿ ನೆಪ ಹೇಳಿ ಸಚಿವರ ಬಳಿ ಓಡಾಡ್ತಾ ಇದ್ದಾರೆ, ಈ ಬಗ್ಗೆ ಪಕ್ಷದ ನಾಯಕರಿಗೆ ಮನವರಿಕೆ ಮಾಡ್ತಿವಿ, ಅವರ ಭ್ರಷ್ಟಾಚಾರಗಳನ್ನು ಮುಚ್ಚಿ ಹಾಕಲು ಈ ರೀತಿ ಮಾಡುತ್ತಿರಬಹುದು ಎಂದು ಕಿಡಿಕಾರಿದ್ದಾರೆ..