POWER SAMACHARA | KANNADA NEWS | BIG BREKING NEWS|17-05-2023

ದಾವಣಗೆರೆ: ಸಿದ್ದರಾಮಯ್ಯ ಸಿಎಂ ಆಯ್ಕೆಯಾಗಿದ್ದಾರೆ ಎಂಬ ಸುದ್ದಿಗೆ ಸದ್ಯ ಬ್ರೇಕ್ ಬಿದ್ದಿದೆ, ರಾಹುಲ್ ಗಾಂಧಿ ಮುಂದೆ ಡಿಕೆಶಿ ಪಟ್ಟು ಹಿಡಿದು ಕೂತಿದ್ದು, ಕರ್ನಾಟಕ ಸಿಎಂ ಆಯ್ಕೆ ಹಗ್ಗಜಗ್ಗಾಟ ಮುಂದುವರೆದಿದೆ..

ಕರ್ನಾಟಕ ಸಿಎಂ ಆಯ್ಕೆ ಮತ್ತೆ ಕಗ್ಗಂಟಾಗಿ ಕೂತಿದೆ, ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ, ಸುಳ್ಳು ಸುದ್ದಿ ಹರಡುವುದು ಬೇಡ, ಅಧಿಕಾರ ಹಂಚಿಕೆ ಸರ್ಕಸ್ ನಡೆಯುತ್ತಿದೆ, 48ಗಂಟೆ ಒಳಗೆ ಸಿಎಂ ಆಯ್ಕೆ ಮಾಡುತ್ತೇವೆ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೀವಾಲ್ ಸ್ಪಷ್ಟನೆ ನೀಡಿದ್ದಾರೆ..

ನವ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದೆ, ಅಧಿಕಾರ ಹಂಚಿಕೆ ಕಸರತ್ತು ಮುಂದುವರೆದಿದೆ, ಇನ್ನೂ ಅಧ್ಯಕ್ಷರು ಯಾವುದೇ ನಿರ್ಣಯ ಕೈಗೊಂಡಿಲ್ಲ, ರಾಹುಲ್ ಗಾಂಧಿ ಅವರನ್ನ ನಾಯಕರುಗಳು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ..

48ಗಂಟೆ ಒಳಗಾಗಿ ಸಿಎಂ ಆಯ್ಕೆ ನಡೆಯುತ್ತದೆ, 72 ಗಂಟೆ ಒಳಗಾಗಿ ಹೊಸ ಸಚಿವ ಸಂಪುಟ ರಚನೆ ಆಗುತ್ತದೆ, ಕರ್ನಾಟಕದ ಜನರ ಆಶೋತ್ತರಗಳ ಅನ್ವಯ, ಅವಿರೋಧವಾಗಿ ಸಿಎಲ್ ಪಿ ನಾಯಕನ ಆಯ್ಕೆ ಆಗುತ್ತದೆ, ಬಿಜೆಪಿ ಹಲವು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ, ಯಾವುದೇ ಊಹಾಪೋಹಗಳಿಗೆ ಕಿವಿಗೊಡಬೇಡಿ, ಅಧ್ಯಕ್ಷರೇ ಸಿಎಂ ಆಯ್ಕೆ ಅಧಿಕೃತಗೊಳಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ..