POWER SAMACHARA | KANNADA NEWS | 24-04-2023

ದಾವಣಗೆರೆ : ಕಾಂಗ್ರೆಸ್ ನವರು ಲಿಂಗಾಯಿತ ವಿವಾದ ತೆಗೆದಿದ್ದೆ ಒಳ್ಳೆಯದಾಯ್ತು, ಇದು ಬಿಜೆಪಿ ಅನುಕೂಲ ಆಗಲಿದೆ, ಕಾಂಗ್ರೆಸ್ ಮಿತ್ರರಿಗೆ ನಾನು ಧನ್ಯವಾದ ಹೇಳಲು ಇಷ್ಟ ಪಡುತ್ತೇನೆ ಎಂದು ದಾವಣಗೆರೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ನಗರದ ಜಿಎಂಐಟಿ ಗೆಸ್ಟ್ ಹೌಸ್ ನಲ್ಲಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ನಮಗೆ ಮತಗಳು ಹೆಚ್ಚಾಗುತ್ತವೆ, ಹೇಳಿಕೆ ತಿರುಚಿದ್ದಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ, ಮೀಡಿಯಾದಲ್ಲೇ ಸ್ಪಷ್ಟವಾಗಿ ಸಿದ್ದರಾಮಯ್ಯ ಹೇಳಿದ್ದಾರೆ, ಆದರೆ ಈಗ ಅವರ ಹೇಳಿಕೆಯನ್ನು ಬದಲಾವಣೆ ಮಾಡಿ ಹೇಳುತ್ತಿದ್ದಾರೆ, ಜನರು ಏನು ದಡ್ಡರಲ್ಲ, ಎಲ್ಲವನ್ನು ಗಮನಿಸಿದ್ದಾರೆ ಎಂದು ಹೇಳಿದರು..

ಸವದಿ, ಶೆಟ್ಟರ್ ಕಾಂಗ್ರೆಸ್ ಗೆ ಹೋಗಿರೋದು ಬಿಜೆಪಿ ಗೆ ಖಂಡಿತ ಪ್ಲಸ್ ಆಗುತ್ತೆ, ಅವರ ಕ್ಷೇತ್ರದಲ್ಲಿ ಅವರ ವಿರುದ್ದ ಜನರು ಮಾತನಾಡುತ್ತಿದ್ದಾರೆ, ಎಲ್ಲಾ ಪದವಿ ಪಡೆದು ನಂತರ ಕಾಂಗ್ರೇಸ್ ಗೆ ಹೋಗಿದ್ದು ಜನರು ಅವರನ್ನು ಒಪ್ಪುವುದಿಲ್ಲ ಎಂದರು..

ರಾಹುಲ್ ಗಾಂಧಿ ತೋರಿಕೆಗೆ ಲಿಂಗಾಯತ ಮಠಗಳಿಗೆ ಭೇಟಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂದಿ ತೋರಿಕೆಗಾಗಿ ಲಿಂಗಾಯತ ಮಠಕ್ಕೆ ಹೋಗುತ್ತಿರುವುದಕ್ಕೆ ಧನ್ಯವಾದಗಳನ್ನು ಹೇಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಸೃತಿ ಇರಾನಿ, ಸೇರಿದಂತೆ ಹಲವು ನಾಯಕರು ತಾರಾ ಪ್ರಚಾರಕರಾಗಿ ಆಗಮಿಸುತ್ತಿದ್ದಾರೆ ಎಂದರು.

ಸಿಎಂ ಆಗಬೇಕು ಎಂದು ನಾನು ಅಂದುಕೊಂಡಿರಲಿಲ್ಲ. ಹಿಂದೆಯೂ ಹೈಕಮಾಂಡ್ ತೀರ್ಮಾನ ಮಾಡಿದ್ದು, ಈಗಲೂ ಕೂಡ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ವರಿಷ್ಠರು ಎಲ್ಲವನ್ನೂ ಗಮನಿಸುತ್ತಿರುವುದಾಗಿ ತಿಳಿಸಿದರು.

ಡಿಕೆಶಿ ಹೇಳುವುದು ಒಂದು ಮಾಡೋದು ಒಂದು

ಭಾವನೆಗಳ ಜೊತೆ ಬಿಜೆಪಿ ಆಟವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಲಿಂಗಾಯತ ವಿವಾದಗಳನ್ನು ತೆಗೆದಿದ್ದೇ ಅವರು. ಡಿಕೆಶಿ ಹೇಳುವುದು ಒಂದು ಮಾಡೋದು ಒಂದು, ದೇವರು ಯಾರಿಗೆ ಆಶೀರ್ವಾದ ಮಾಡ್ತಾರೆ ಎಂದು ಕಾದು ನೋಡೋಣ ಎಂದು ತಿಳಿಸಿದರು.

*ಪುತ್ರನ ಮಾಡಾಳ್ ವಿರೂಪಾಕ್ಷಪ್ಪ ಪ್ರಚಾರ*:

ಪುತ್ರನ ಪರ ಅವರು ಪ್ರಚಾರ ಮಾಡುತ್ತಿದ್ದು, ಹೈಕಮಾಂಡ್ ಎಲ್ಲವನ್ನು ಗಮನಿಸುತ್ತಿದೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು...