POWER SAMACHARA | KANNADA NEWS | BREKING NEWS| 17-07-2023..

ದಾವಣಗೆರೆ: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪಕ್ಷವಾಗಿದ್ದರು ಸಹ ಕಾಂಗ್ರೆಸ್ ಕಾರ್ಯಕರ್ತರಿಗೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅಸಹಾಯಕನಂತೆ ಕಾಂಗ್ರೆಸ್ ಶಾಸಕ ಪೊಲೀಸ್ ಠಾಣೆ ಎದುರು ಕೈ ಕಟ್ಟಿ ನಿಂತು ಪ್ರೊಟೆಸ್ಟ್ ನಡೆಸಿದ್ದರು, ಆದರೆ ಶಾಸಕನ ಈ ಪ್ರೊಟೆಸ್ಟ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ, ಫೋಕ್ಸೋ ಕೇಸ್ ಒಂದನ್ನ ಮುಚ್ಚಿ ಹಾಕಲು ಶಾಸಕರು ಒತ್ತಡ ತಂತ್ರ ಅನುಸರಿದರಾ ಅನ್ನೋ ಅಂಶ ಬೆಳಕಿಗೆ ಬಂದಿದೆ..

ಹೌದು ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಇದ್ದರು ಸಹ ಚನ್ನಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮುಂಭಾಗ ಕೈ ಕಟ್ಟಿ ನಿಂತುಕೊಂಡು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಪ್ರತಿಭಟನೆ ನಡೆಸಿದ್ದರು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ, ವಿನಾಕಾರಣ ದೂರುಗಳನ್ನು ದಾಖಲು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಿಪಿಐ ಮಧು ಹಾಗೂ ಪಿಎಸ್ ಐ ಚಂದ್ರಕಾಂತ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು, ನಾನು ಎಂಎಲ್ಎ ಫೋನ್ ಮಾಡಿ ಹೇಳಿದರೆ ರಾಜಿ ಮಾಡೋ ಬದಲಾಗಿ ಕಡ್ಡಾಯವಾಗಿ ಕೇಸ್ ಮಾಡುತ್ತಾರೆ, ರಾಜಕೀಯ ಪ್ರೇರಿತವಾಗಿ, ಉದ್ದೇಶ ಪೂರ್ವಕವಾಗಿ ದೂರು ದಾಖಲು ಮಾಡುತ್ತಿದ್ದಾರೆ, ದ್ವೇಷಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಶಾಸಕ ಶಿವಗಂಗಾ ಬಸವರಾಜ್ ಆರೋಪಿಸಿದ್ದರು..

ಪ್ರೊಟೆಸ್ಟ್ ಗೆ ಬಿಗ್ ಟ್ವಿಸ್ಟ್..? ಆಗಿದ್ದೆ ಬೇರೆ..!

ಚನ್ನಗಿರಿ ಶಾಸಕರ ಪ್ರೊಟೆಸ್ಟ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ, ತಾಲ್ಲೂಕಿನ ಹಾಸ್ಟೇಲ್ ಒಂದರಲ್ಲಿ ಬಾಲಕನ ಮೇಲೆ ಬಾಲಕರಿಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದು, ಬಾಲಕನ ಪೋಷಕರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಿಸಿದ್ದರು, ಈ ವೇಳೆ ಪ್ರಕರಣ ದಾಖಲಿಸದಂತೆ ಶಾಸಕ ಶಿವಗಂಗಾ ಬಸವರಾಜ್ ಒತ್ತಡ ಹೇರಿದ್ದರು ಎನ್ನಲಾಗಿದೆ. ಬಾಲಕರು ಕಾಂಗ್ರೆಸ್ ಮುಖಂಡರ ಮಕ್ಕಳು ಎಂದು ಪ್ರಕರಣ ದಾಖಲಿಸದಂತೆ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ, ಈಗಾಗಲೇ ಎಫ್ ಐಆರ್ ದಾಖಲಾಗಿದೆ ಎಂಬುದು ಪೊಲೀಸರ ವಾದವಾಗಿದ್ದು, ಇದರಿಂದ ಕೆರಳಿದ ಶಾಸಕರು ಠಾಣೆ ಎದುರು ಪ್ರೊಟೆಸ್ಟ್ ನಡೆಸಿದ ಅಂಶ ಬೆಳಕಿಗೆ ಬಂದಿದೆ, ಆದರೆ ಈ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ..

ದಾವಣಗೆರೆಯಲ್ಲಿ ಎಸ್ಪಿ ಹೇಳಿದ್ದೇನು..?

ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಎಸ್ಪಿ ಡಾ. ಕೆ. ಅರುಣ್ ಸ್ಪಷ್ಟನೆ ನೀಡಿದ್ದಾರೆ, ಚನ್ನಗಿರಿ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿತ್ತು, ಇದು ಸುಳ್ಳು ಕೇಸ್ ಎಂದು ಶಾಸಕರು ಹೇಳಿದ್ದರು, ಸುಳ್ಳಾಗಲಿ, ನಿಜವಾಗಲಿ ತನಿಖೆ ನಡೆಯಲಿ ಎಂದು ನಾವು ಹೇಳಿದ್ದೆವು, ಆದರೆ ಶಾಸಕ ಬಸವರಾಜ್ ಅವರು ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ, ಶಾಸಕರು ಠಾಣೆ ಒಳಗಡೆ ಏನೂ ಮಾತನಾಡಿದ್ದಾರೆ, ಸಿಸಿ ಕ್ಯಾಮರದಲ್ಲಿ ಚೆಕ್ ಮಾಡುತ್ತೇವೆ, ಫೋಕ್ಸೋ ಪ್ರಕರಣದ ಬಗ್ಗೆ ಮಾತನಾಡಿದ್ದಾರ ಅಥವಾ ಇಲ್ಲವೋ ಮಾಹಿತಿ ಕಲೆ ಹಾಕುತ್ತೇವೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಸ್ಪಷ್ಟನೆ ಕೊಟ್ಟಿದ್ದಾರೆ, ಇನ್ನೂ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ ಎಂದು ಶಾಸಕ ಶಿವಗಂಗಾ ಬಸವರಾಜ್ ಆರೋಪ ಹಿನ್ನಲೆ ಚನ್ನಗಿರಿ ಸಿಪಿಐ ಮಧು, ಪಿಎಸ್ ಐ ಚಂದ್ರಶೇಖರ್ ಅವರಿಗೆ ರಜೆ ಮೇಲೆ ತೆರಳಲು ಎಸ್ಪಿ ಸೂಚನೆ ನೀಡಿದ್ದಾರೆ..

ಒಟ್ಟಾರೆ ಶಾಸಕರ ಪ್ರೊಟೆಸ್ಟ್ ಈಗ ಫೋಕ್ಸೋ ಪ್ರಕರಣಕ್ಕೆ ತಿರುವಿದೆ, ಸಮಗ್ರ ತನಿಖೆ ಮಾಡುವಂತೆ ಎಎಸ್ಪಿ ರಾಮಗೊಂಡ ಬಸರಗಿ ಅವರನ್ನ ನೇಮಕ ಮಾಡಲಾಗಿದ್ದು, ವಿವಾದ ಎಲ್ಲಿಗೆ ಬಂದು ತಲುಪುತ್ತದೆಯೋ ಕಾದು ನೋಡಬೇಕಿದೆ..