POWER SAMACHARA | KANNADA NEWS | BREKING NEWS| 30-05-2023

ದಾವಣಗೆರೆ : ಪೊಲೀಸರ ಕಸ್ಟಡಿಯಲ್ಲಿದ್ದ RTI ಕಾರ್ಯಕರ್ತ ಹರೀಶ್ ಹಳ್ಳಿ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಕರ್ತವ್ಯ ಲೋಪದ ಹಿನ್ನಲೆ ಇಬ್ಬರು ಪೊಲೀಸರನ್ನ ಈಗಾಗಲೇ ಅಮಾನತು ಮಾಡಲಾಗಿದ್ದು, ಪ್ರಕರಣವನ್ನ ಸಿಐಡಿ ಹೆಗಲಿಗೆ ವಹಿಸಲಾಗಿದೆ.. ಆದರೆ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆರ್ ಟಿಐ ಕಾರ್ಯಕರ್ತರು ಪಟ್ಟು ಹಿಡಿದು ಕೂತಿದ್ದಾರೆ..

ಹೌದು.. ಹರೀಶ್ ಹಳ್ಳಿ ಸಾವಿನ ಪ್ರಕರಣ ಸಂಬಂಧ ಗಾಂಧಿ ನಗರದ ಪಿಎಸ್ ಐ ಕೃಷ್ಣಪ್ಪ, ಪೇದೆ ದೇವರಾಜ್ ಅಮಾನತು ಮಾಡಲಾಗಿದೆ, ಪ್ರಕರಣವನ್ನ ಸಿಐಡಿಗೆ ಒಪ್ಪಿಸಲಾಗಿದೆ ಎಂದು ದಾವಣಗೆರೆಯಲ್ಲಿ ಎಸ್ಪಿ ಡಾ. ಅರುಣ್ ಮಾಹಿತಿ ನೀಡಿದ್ದಾರೆ.. ಆದರೆ ಇದು ಅವಘಡ ಅಲ್ಲ, ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವು ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಹರೀಶ್ ಹಳ್ಳಿ ಸ್ನೇಹಿತರ ಬಳಗದಿಂದ ಆಗ್ರಹಪಡಿಸಲಾಗಿದೆ..

ಒಟ್ಟಾದ ಆರ್ ಟಿಐ ಕಾರ್ಯಕರ್ತರು, ಹೋರಾಟಗಾರರು..

ಆರ್ ಟಿ ಐ ಕಾರ್ಯಕರ್ತನಾದ ಗುರುಪಾದಯ್ಯ ಮಠದ್, ಹೋರಾಟಗಾರರಾದ ಎಂಜಿ ಶ್ರೀಕಾಂತ್, ಗಿರೀಶ್ ದೇವರಮನೆ, ಕೆಟಿ ಗೋಪಾಲಗೌಡ, ನಾಗರಾಜ್ ಸುರ್ವೆ, ಮಲ್ಲಿಕಾರ್ಜುನ್ ಇಂಗಳೇಶ್ವರ, ಚೇತನ್, ಬಲ್ಲೂರು ರವಿಕುಮಾರ್ ಸೇರಿದಂತೆ ಹೋರಾಟಗಾರರೆಲ್ಲ ಹರೀಶ್ ಹಳ್ಳಿ ಸಾವಿಗೆ ನ್ಯಾಯ ಕೊಡಿಸಲು ಒಂದಾಗಿದ್ದು ದಾವಣಗೆರೆಯಲ್ಲಿ ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ..

ಷ್ಯಡ್ಯಂತ್ರ ಮಾಡಿ ಕೊಲೆ..?

ಹರೀಶ್ ಸಾವಿನ ಹಿಂದೆ ಷ್ಯಡ್ಯಂತ್ರ ಅಡಗಿದೆ, ಹರೀಶ್ ಹಳ್ಳಿ ಓಡಿ ಹೋಗುವವನು ಅಲ್ಲ, ಹರೀಶ್ ಹಳ್ಳಿ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದು ಅವರ ಕುಟುಂಬದವರು ಈಗಾಗಲೇ ದೂರು ನೀಡಿದ್ದಾರೆ, ಪ್ರಕರಣವನ್ನ ಸಿಬಿಐಗೆ ವಹಿಸಿ ಎಂದು ಆರ್ ಟಿಐ ಕಾರ್ಯಕರ್ತ ಗುರುಪಾದಯ್ಯ ಮಠದ್ ಮನವಿ ಮಾಡಿದ್ದಾರೆ.

ಕಾಣದ ಕೈಗಳ ಷ್ಯಡ್ಯಂತ್ರ: ಹೋರಾಟ ಮಾಡಬೇಕೆ ಬೇಡವೇ..?

ವಾಹನದಿಂದ ಜಿಗಿದು ಬಿದ್ದು ಸಾವನ್ನಪ್ಪಿರುವುದು ಸುಳ್ಳು, ಕಾಣದ ಕೈಗಳು ಷ್ಯಡ್ಯಂತ್ರ ಮಾಡಿ ಕೊಲೆ ಮಾಡಲಾಗಿದೆ ಎಂದು ಹರೀಶ್ ಪತ್ನಿ ದೂರು ದಾಖಲಿಸಿದ್ದರು, ಇನ್ನೂ ಪ್ರಕರಣದ ಬೆನ್ನಿಗೆ ದಾವಣಗೆರೆಯ ಆರ್ ಟಿಐ ಕಾರ್ಯಕರ್ತರು, ಸ್ನೇಹಿತರು ನಿಂತಿದ್ದು, ಈ ಕೊಲೆಯ ಹಿಂದೆ ದೊಡ್ಡ ದೊಡ್ಡ ಕಾಣದ ಕೈಗಳಿವೆ, ಸರ್ಕಾರ ಈ ಕೇಸನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ, ಅನಾಮಧೇಯ ಶವಗಳ ಕುರಿತಾಗಿ ಆಡಳಿತದ ವಿರುದ್ದ ಹರೀಶ್ ಧ್ವನಿ ಎತ್ತಿದ್ದ, ಅಷ್ಟೆ ಅಲ್ಲ ಹಲವು ಭ್ರಷ್ಟಾಚಾರ ಪ್ರಕರಣವನ್ನ ಬಯಲಿಗೆ ಎಳೆದಿದ್ದ, ಆದರೆ ಈ ಸಾವಿನಿಂದ ಹೋರಾಟಗಾರರಿಗೆ ಹೋರಾಟ ಮಾಡಬೇಕೆ ಬೇಡವೇ ಎಂಬ ಭಯ ಹುಟ್ಟು ಹಾಕಿದೆ, ಈ ಹಿನ್ನಲೆ ಗೃಹ ಸಚಿವರು ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್ ಎಸ್ ದೇವರಮನೆ ಆಗ್ರಹಪಡಿಸಿದ್ದಾರೆ..

ನಕಲಿ ದಾಖಲೆ ಸೃಷ್ಠಿಸಿ ಮೂರು ಸೈಟ್ ಗಳನ್ನ ರಿಜಿಸ್ಟ್ರಾರ್ ಮಾಡಿಸಿಕೊಂಡಿದ್ದ ಆರೋಪ ಹರೀಶ್ ಹಳ್ಳಿ ಮೇಲೆ ಕೇಳಿ ಬಂದಿತ್ತು, ಸೈಟ್ ಮಾಲೀಕ ಬಾಬುರಾವ್ ಎಂಬುವವರು ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಹರೀಶ್, ಜಯಶ್ರೀ ಹಾಗೂ ವಕೀಲ ಲಿಂಗರಾಜ್, ಸಬ್ ರಿಜಿಸ್ಟ್ರಾರ್ ಸೇರಿ ಐವರ ಮೇಲೆ ಕೇಸ್ ದಾಖಲಿಸಿದ್ದರು, ಪ್ರಕರಣ ದಾಖಲಾಗುತ್ತಿದ್ದಂತೆ ದಾವಣಗೆರೆ ಸಬ್ ರಿಜಿಸ್ಟ್ರಾರ್ ರಜೆ ಹಾಕಿ ಬೇರೆಡೆ ತೆರಳಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ, ಇನ್ನೂ ಕೇಸ್ ಸಂಬಂಧ ಹರೀಶ್ ರನ್ನ ವಶಕ್ಕೆ ಪಡೆದು ಕರೆ ತರುವಾಗ ತಪ್ಪಿಸಿಕೊಳ್ಳಲು ಹೋಗಿ ಬ್ರಿಡ್ಜ್ ನಿಂದ ಹಾರಿ ಹರೀಶ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದರು..

ಒಟ್ಟಾರೆ ಆರ್ ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಸಾವಿನ ಪ್ರಕರಣ ದಿನಕ್ಕೊಂದು ರೂಪ ಪಡೆಯುತ್ತಿದೆ, ಹರೀಶ್ ನಿಜವಾಗಿ ಜಿಗಿದು ಬಿದ್ದ ಸಾವನ್ನಪ್ಪಿದ್ದ ಅಥವಾ ಕಾಣದ ಕೈಗಳು ಕೆಲಸ ಮಾಡಿದ್ದವಾ, ಅಥವಾ ಕೊಲೆ ಮಾಡಿ ನಾಟಕ ಕಟ್ಟಲಾಗಿದೆಯಾ ಎಂಬೆಲ್ಲ ಪ್ರಶ್ನೆಗಳಿಗೆ ತನಿಖೆಯಿಂದ ಮಾತ್ರ ಉತ್ತರ ಸಿಗಬೇಕಿದೆ..