POWER SAMACHARA | KANNADA NEWS | BIG BREKING NEWS|20-05-2023

ದಾವಣಗೆರೆ : ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಭಾಗ್ಯಗಳ ಸರದಾರ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಲಿದ್ದು, ಇವರುಗಳ ಜೊತೆ ಯಾರು ಸಂಪುಟ ದರ್ಜೆ ಸಚಿವರು ಪದಗ್ರಹಣ ಮಾಡುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ..

ಸಿದ್ದರಾಮಯ್ಯ ಸಂಪುಟದಲ್ಲಿ ಕಾಂಗ್ರೆಸ್ ನ ಹಿರಿಯರಿಗೆ ಮಣೆ ಹಾಕಲಾಗಿದೆ, ಈ ಹಿಂದೇ ಇದ್ದ ಎಂಟು ಮಂದಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ದೊರಕಿದೆ, ಸಂಪುಟ ದರ್ಜೆ ಸಚಿವರಾಗಿ ಡಾ. ಜಿ ಪರಮೇಶ್ವರ್, ಕೆಎಚ್ ಮುನಿಯಪ್ಪ, ಕೆಜೆ ಜಾರ್ಜ್, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗರೆಡ್ಡಿ, ಜಮೀರ್ ಖಾನ್ ಇಂದು ಪದಗ್ರಹಣ ಮಾಡಲಿದ್ದಾರೆ, ಮುಂದೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ತಿಳಿಸಿದ್ದಾರೆ..

ಲಕ್ಷ್ಮಣ್ ಸವಧಿ, ಜಗದೀಶ್ ಶೆಟ್ಟರ್ ಗಿಲ್ಲ ಸ್ಥಾನ..

ಇನ್ನೂ ಬಿಜೆಪಿಯಿಂದ ಸಿಡಿದೆದ್ದು ಬಂದಿದ್ದ ಹಿರಿಯ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವಧಿ ಅವರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಿಲ್ಲ, ಈ ಇಬ್ಬರು ನಾಯಕರು ಟಿಕೆಟ್ ಸಿಗದ ಹಿನ್ನಲೆ ಬಿಜೆಪಿಯಿಂದ ಸಿಡಿದೆದ್ದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು, ಲಿಂಗಾಯಿತ ನಾಯಕರಿಗೆ ಬಿಜೆಪಿಯಲ್ಲಿ ಅನ್ಯಾಯ ಮಾಡಲಾಗುತ್ತಿದೆ ಎಂದು ದೊಡ್ಡ ಮಟ್ಟದ ಪ್ರಚಾರ ಮಾಡಿದ್ದರು, ಬಳಿಕ ಲಕ್ಷ್ಮಣ್ ಸವಧಿ ಗೆದ್ದು ಬೀಗಿದ್ರೆ, ಜಗದೀಶ್ ಶೆಟ್ಟರ್ ಸೋತಿದ್ರು, ಸಚಿವ ಸಂಪುಟದಲ್ಲಿ ಈ ಇಬ್ಬರನ್ನ ಸೇರಿಸಿಕೊಳ್ಳಲಾಗುತ್ತದೆ ಎಂದೇ ಭಾವಿಸಲಾಗಿತ್ತು, ಆದರೆ ಮೊದಲ ಹಂತದಲ್ಲಿ ಸೇರ್ಪಡೆ ಮಾಡಿಲ್ಲ, ಮುಂದೇ ಈ ಇಬ್ಬರು ಸಂಪುಟ ಸೇರ್ತಾರ ಇಲ್ವಾ ಕಾದು ನೋಡಬೇಕಿದೆ..