POWER SAMACHARA | KANNADA NEWS | BREKING NEWS| 29-05-2023

ದಾವಣಗೆರೆ: ಕಾಂಗ್ರೆಸ್ ಗ್ಯಾರಂಟಿ ಜಾರಿ ಮಾಡದ ವಿಚಾರ ದಾವಣಗೆರೆ ಜಿಲ್ಲೆ ಹರಿಹರದ ಬೆಳ್ಳೂಡಿ ಕಾಗಿನೆಲೆ ಪೀಠದಲ್ಲಿ ಸರ್ಕಾರಕ್ಕೆ ಶಾಸಕ ಬಿ ವೈ ವಿಜಯೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದು, ಯಾರು ನಿರೀಕ್ಷೆ ಮಾಡದೆ ಇರೋ ರೀತಿಯಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕಿದೆ, ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ಡಬಲ್ ಸ್ಟೇರಿಂಗ್ ಸರ್ಕಾರ, ಸಿಎಂ ಒಂದು ಕಡೆ, ಡಿಸಿಎಂ ಒಂದ ಕಡೆ ಎಳಿತಾ ಇದ್ದಾರೆ, ಅದಕ್ಕಾಗಿ ಡಬಲ್ ಸ್ಟೇರಿಂಗ್ ಸರ್ಕಾರ ಅಂತ ಹೇಳಿದ್ದೀನಿ ಎಂದರು..
ಸರ್ಕಾರಕ್ಕೆ ಬಹುಮತ ಸಿಕ್ಕ ಬೆನ್ನಲ್ಲೆ ಮೊದಲ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ಜಾರಿ ಮಾಡ್ತೀನಿ ಅಂದ್ರು, ಹೀಗಾಗಿ ರಾಜ್ಯದಲ್ಲಿ ಅಲ್ಲಲ್ಲಿ ಟಿಕೆಟ್ ತೆಗೆದುಕೊಳ್ಳದೆ ತಾಯಂದಿರು ಗಲಾಟೆ ಮಾಡ್ತಾ ಇದಾರೆ, ಕರೆಂಟ್ ಬಿಲ್ ಕಟ್ಟಲ್ಲ ಅಂತ ಜನ ಜಗಳ ಮಾಡ್ತಾ ಇದ್ದಾರೆ, ಗ್ಯಾರಂಟಿ ಯೋಜನೆ ಬೇಗ ಜಾರಿ ಮಾಡದೆ ಇದ್ದಲ್ಲಿ ರಾಜ್ಯದಲ್ಲಿ ಗದ್ದಲ ಉಂಟಾಗುತ್ತೆ, ಈ ಸರ್ಕಾರ ಏನಾಗುತ್ತೋ ಮುಂದೆ ಕಾದು ನೋಡಬೇಕಿದೆ, ಗೊಂದಲ ಹೆಚ್ಚಾಗುವ ಮುನ್ನ ಎಚ್ಚರಿಕೆ ವಹಿಸಿ ಎಂದರು..
ಬಿವೈ ವಿಜಯೇಂದ್ರ ಅವರು ವಿರೋಧ ಪಕ್ಷದ ನಾಯಕರಾಗ್ತಾರಾ..? ರಾಜ್ಯಾಧ್ಯಕ್ಷರು ಆಗ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ಶಾಸಕರ ಸಭೆ ಕರೆದು ಹಿರಿಯರು ತೀರ್ಮಾನ ಮಾಡ್ತಾರೆ, ನಾನು ಇದೀಗ ಕೇವಲ ಶಿಕಾರಿಪುರದ ಶಾಸಕನಷ್ಟೆ ಎಂದು ನಕ್ಕಿದ್ದಾರೆ...

ಕಾಗಿನೆಲೆ ಶ್ರೀ ಆಶೀರ್ವಾದ ಪಡೆದ ವಿಜಯೇಂದ್ರ..

ಹರಿಹರದ ಬೆಳ್ಳೂಡಿಯ ಕನಕ ಗುರು ಪೀಠಕ್ಕೆ ಶಾಸಕ ಬಿ ವೈ ವಿಜಯೇಂದ್ರ ಭೇಟಿ ನೀಡಿ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮಿಜಿ ಆಶೀರ್ವಾದ ಪಡೆದರು, ಶಾಸಕರಾದ ನಂತರ ಶ್ರೀಗಳ ಆಶೀರ್ವಾದ ಪಡೆಯಲು ಮಠಕ್ಕೆ ಆಗಮಿಸಿದರು, ವಿಜಯೇಂದ್ರಗೆ ಕಂಬಳಿ ಹೊದಿಸಿ ಸನ್ಮಾನ ಮಾಡಲಾಯಿತು, ಶ್ರೀಗಳ ಜೊತೆ ಕೆಲ ಹೊತ್ತು ವಿಜಯೇಂದ್ರ ಗುಪ್ತ ಮಾತುಕಥೆ ನಡೆಸಿದರು..

ಅಪ್ಪನ ರೀತಿ ಕೆಲಸ ಮಾಡಿಕೊಂಡು ಹೋಗು ಎಂದು ಕಾಗಿನೆಲೆ ಶ್ರೀ..

ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರಿಗೆ ತಂದೆ, ಅಣ್ಣನಿಗೆ ಆಶೀರ್ವಾದ ಮಾಡಿಕೊಂಡು ಬಂದವರು, ರಾಘಣ್ಣನಿಗೆ ಕೂಡ ಶ್ರೀಗಳ ಆಶೀರ್ವಾದ ಮಾಡಿದ್ದರು, ನಾನು ಶಿಕಾರಿಪುರ ಕ್ಷೇತ್ರದಿಂದ ನಿಲ್ತೀನಿ ಅಂತ ಅಂದುಕೊಂಡಿರಲಿಲ್ಲ, ಶಾಸಕನಾಗಿ ಆಯ್ಕೆ ಆಗಿದ್ದಕ್ಕೆ ಶ್ರೀಗಳ ಆಶೀರ್ವಾದ ಪಡೆಯಲು ಬಂದಿದ್ದೇನೆ, ತಂದೆಯವುರು ಮುಖ್ಯ ಮಂತ್ರಿ ಆದ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ, ನೀವು ಅದೇ ಹಾದಿಯಲ್ಲಿ ಸಾಗಬೇಕು ಅಂತ ಶ್ರೀಗಳು ಹೇಳಿದ್ರು ಎಂದು ವಿಜಯೇಂದ್ರ ತಿಳಿಸಿದ್ದಾರೆ..