POWER SAMACHARA | KANNADA NEWS | BREKING NEWS| 23-07-2023..

Power Exclusive

ದಾವಣಗೆರೆ: ಖಾಸಗಿ ಬಸ್ ಮತ್ತು ಬುಲೆರೋ ವಾಹನ ನಡುವೆ ಡಿಕ್ಕಿಯಾಗಿ, ಕೂದಲೆಳೆ ಅಂತರದಲ್ಲಿ ಕೆರೆಗೆ ಬೀಳುತ್ತಿದ್ದ ಬಸ್ ಪಾರಾಗಿರುವ ಘಟನೆ ದಾವಣಗೆರೆ ತಾಲೂಕಿನ ಕೊಡಗನೂರು ಕೆರೆ ಏರಿ ಮೇಲೆ ನಡೆದಿದೆ..

ದೃಶ್ಯ ಮೈ ಜುಮ್ಮೆನ್ನೆಸುವಂತಿದೆ, ಕೆರೆಗೆ ಇನ್ನೆನ್ನು ಬಸ್ ಪಲ್ಟಿಯಾಯಿತು ಎಂದುಕೊಂಡ ಪ್ರಯಾಣಿಕರಿಗೆ ಅದೃಷ್ಟ ಚೆನ್ನಾಗಿತ್ತೇನೊ, ಕೂದಲೆಳೆ ಅಂತರದಲ್ಲಿ ಬಸ್ ನಿಂತಿದೆ..

ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರು ಪಾರಾಗಿದ್ದಾರೆ, ಬುಲೆರೋ ವಾಹನ ಚಾಲಕ ಗಾಯಗೊಂಡಿದ್ದು, ದಾವಣಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ದಾವಣಗೆರೆ ಕಡೆಯಿಂದ SMMS ಖಾಸಗಿ ಬಸ್ ಮತ್ತು ಹೊಳಲ್ಕೆರೆ ಕಡೆಯಿಂದ ತೆರಳುತ್ತಿದ್ದ ಹೆದ್ನೆ ಗ್ರಾಮದ ಬುಲೇರೋ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಸ್ವಲ್ಪದರಲ್ಲಿ ಕೆರೆಗೆ ಬೀಳುತ್ತಿದ್ದ ಬಸ್ ಪಾರಾಗಿದೆ, ಬಸ್ ಕೆರೆಗೆ ಬಿದ್ದಿದ್ದರೆ ನಾವೆಲ್ಲ ಸಾವನ್ನಪ್ಪುತ್ತಿದ್ದೆವು ಎಂದು ಎದುಸಿರು ಬಿಡುತ್ತಾ ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದು ಕಂಡು ಬಂದಿದೆ, ಇನ್ನೂ ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..