POWER SAMACHARA | KANNADA NEWS | BREKING NEWS| 22-06-2023...

ದಾವಣಗೆರೆ : ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ನಂಬಿಕೆ ದ್ರೋಹ, ಮೋಸ ಮಾಡಿದ್ದಾರೆ, ಸದನ ಒಳಗಡೆ ಶಾಸಕರು, ಹೊರಗೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ..

ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಿಂದ ಏಳು ತಂಡಗಳಲ್ಲಿ ಪ್ರಚಾರ ಶುರು ಮಾಡಲಾಗಿದೆ, ಕಾಂಗ್ರೆಸ್ ನ ಮೋಸದ ಬಗ್ಗೆ ತಿಳಿಸುತ್ತೇವೆ, ಮನೆ ಮನೆಗೆ ಹೋಗಿ ಕಾಂಗ್ರೆಸ್ ಗ್ಯಾರಂಟಿ ಪ್ರಚಾರ ಮಾಡಿತ್ತು, ನಮ್ಮ ಕಾರ್ಯಕರ್ತರು ಸಹ ನಂಬಿ ಕಾಂಗ್ರೆಸ್ ಗೆ ವೋಟು ಮಾಡಿದ್ದರು, ನಿರೀಕ್ಷೆಗೆ ಮೀರಿ ಕಾಂಗ್ರೆಸ್ ನವರು ಗೆದ್ದಿದ್ದಾರೆ, ಆದರೆ ಒಂದು ತಿಂಗಳಿನಿಂದ ಭರವಸೆ ಈಡೇರಿಸಿಲ್ಲ, ಅಧಿವೇಶನ ಪ್ರಾರಂಭ ಆಗುತ್ತಿದೆ, ಯಾವುದೇ ಷರತ್ತು ಇಲ್ಲದೇ ಭರವಸೆ ಈಡೇರಿಸಬೇಕು, ಸೋತ ಎಲ್ಲಾ ಮುಖಂಡರೊಂದಿಗೆ ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಹಿನ್ನಡೆಯಾದ ಶಾಸಕರು ಜೊತೆ ಸೇರಿ ಸದನ ಮುಗಿಯುವವರೆಗೆ ಧರಣಿ ಕೂರುತ್ತೇನೆ ಎಂದರು..

ಉಸಿರಾಡದಂತೆ ಸರ್ಕಾರದ ಮೂಗು ಹಿಡಿಯಬೇಕು..

ಕಿವಿ ಹಿಂಡಿ ಭರವಸೆ ಈಡೇರಿಸಿ ಎಂದು ಕೇಳಬೇಕು, ಉಸಿರಾಡದಂತೆ ಸರ್ಕಾರದ ಮೂಗು ಹಿಡಿಯಬೇಕಿದೆ, ನಾವೆಲ್ಲ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇವೆ, ಕೊಟ್ಟ ಭರವಸೆ ಈಡೇರಿಸಿದ್ದಾರೆ ಸಹಿಸಲು ಸಾಧ್ಯವಿಲ್ಲ, ಇವರ ಯೋಗ್ಯತೆಗೆ ಫಸಲು ಭೀಮಾ ಯೋಜನೆ ಹಣ ಹಾಕಿಲ್ಲ, ರಾಜ್ಯ ದಿವಾಳಿಯಾಗಿದೆ, ಜನ ಹಿತ ಮರೆತು ದೊಂಬರಾಟ ಮಾಡುತ್ತಿದ್ದಾರೆ, ಇದನ್ನ ನೋಡಿ ಕೈ ಕಟ್ಟಿ ಕೂರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು..

ಕೇಂದ್ರದ ಕಡೇ ತೋರಿಸಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ..

ಸೋಲಿನ ಬಗ್ಗೆ ಚಿಂತೆ ಮಾಡುವ ಅಗತ್ಯ ಇಲ್ಲ, ಭರವಸೆ ಈಡೇರಿಸದಿದ್ದರೆ ತೊಲಗಬೇಕು ಎಂಬ ಹೋರಾಟ ಮಾಡೋಣ, ಅಕ್ಕಿ ಕೊಡುತ್ತೇವೆ ಎಂದು ನಾವು ಹೇಳಿರಲಿಲ್ಲ, ಕೇಂದ್ರದ ಕಡೇ ತೋರಿಸಿ ಬಾಯಿ ಬಡಿದುಕೊಳ್ಳುತ್ತಿದ್ದಾರೆ, ನೀವೆ ಅಕ್ಕಿ ವ್ಯವಸ್ಥೆ ಮಾಡಿಕೊಳ್ಳಬೇಕು, ಕೊಡದೇ ಇದ್ದರೆ ಅಷ್ಟು ಸುಲಭವಾಗಿ ಬಿಡೋದಿಲ್ಲ ಎಂದು ಬಿಎಸ್ ವೈ ಗುಡುಗಿದ್ದಾರೆ..

ಇಂದು ರಾತ್ರಿ 12ಗಂಟೆಗೆ ಮೋದಿ ಅಮೆರಿಕ ದೇಶದಲ್ಲಿ ಸಂಸತ್ ಉದ್ದೇಶಿಸಿ ಐತಿಹಾಸಿಕ ಭಾಷಣ ಮಾಡಲಿದ್ದಾರೆ, ಎಚ್ಚರದಿಂದ ಇದ್ದು ಅಭೂತ ಪೂರ್ವ ಭಾಷಣ ಕೇಳಿ, ವಿಶ್ವವೇ ಅಚ್ಚರಿಯಿಂದ ಕಾತುರದಿಂದ ಕಾಯುತ್ತಿದ್ದಾರೆ ಎಂದರು..