POWER SAMACHARA | KANNADA NEWS | BREKING NEWS| 05-07-2023..

ದಾವಣಗೆರೆ: ಕರ್ನಾಟಕವನ್ನ ಬರಪೀಡಿತ ರಾಜ್ಯ ಎಂದು ಘೋಷಣೆ ಮಾಡುವಂತೆ ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒತ್ತಾಯಿಸಿದ್ದಾರೆ..

ಬಹುತೇಕ ಜಿಲ್ಲೆಗಳಲ್ಲಿ ಮಳೆ ಇಲ್ಲ, 10% ರಷ್ಟು ಕೂಡ ಮಳೆಯಾಗಿಲ್ಲ, ಎಲ್ಲೂ ಕೂಡ ಬಿತ್ತನೆ ಕಾರ್ಯ ಪ್ರಾರಂಭ ಆಗಿಲ್ಲ, ರಾಜ್ಯದಲ್ಲಿ ಭೀಕರ ಪರಿಸ್ಥಿತಿ ಎದುರಾಗಿದೆ, ಸರ್ಕಾರ ಬರಗಾಲ ಪೀಡಿತ ಪ್ರದೇಶ ಘೋಷಣೆ ಮಾಡಲು ಮೀನಾಮೇಶ ಎಣಿಸುತ್ತಿದೆ, ನಮ್ಮವರು ಸದನದ ಒಳಗು ಹೊರಗು ಹೋರಾಟ ಮಾಡುತ್ತಿದ್ದಾರೆ, ತಡ ಮಾಡದೆ ಭೀಕರ ಪ್ರದೇಶಗಳನ್ನು ಘೋಷಣೆ ಮಾಡಿ, ಜಲಾಶಯಗಳು ಬತ್ತಿ ಹೋಗಿವೆ, ಆದರೆ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ, ಇನ್ನಾದರು ಕಣ್ಣು ತೆರೆಯಲಿ ಎಂದು ಕಿಡಿಕಾರಿದ್ದಾರೆ..

ರಾಜ್ಯ ಸರ್ಕಾರದ ವಿರುದ್ದ ನಿರಂತರ ಹೋರಾಟ..

ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ, ಸರ್ಕಾರ ತನಿಖೆ ಮಾಡುತ್ತೇವೆ ಎಂಬ ಸರ್ಕಾರ ಹೇಳಿಕೆ ಸ್ವಾಗತಿಸುತ್ತೇನೆ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ..

ಗ್ಯಾರಂಟಿಗಳನ್ನ ಜಾರಿಗೆ ತರುವ ತನಕ ಹೋರಾಟ ನಿರಂತರವಾಗಿರುತ್ತದೆ, ಸದನದ ಹೊರಗೆ ಹಾಗೂ ಸದನದ ಒಳಗೆ ನಿರಂತರ ಹೋರಾಟ ಮಾಡಲಾಗುವುದು ಎಂದು ಹೇಳಿದ್ದಾರೆ. ಇಂದು ಅಥವಾ ನಾಳೆ ಪ್ರತಿ ಪಕ್ಷದ ನಾಯಕನ ಆಯ್ಕೆ ಆಗುತ್ತದೆ ಎಂದು ಬಿಎಸ್ ವೈ ಹೇಳಿದ್ದಾರೆ..