POWER SAMACHARA | KANNADA NEWS | 16-05-2023

ದಾವಣಗೆರೆ: ಹರಿಹರ ಬಿಜೆಪಿ ಶಾಸಕ ಬಿಪಿ ಹರೀಶ್ ವಿರುದ್ದ ದಲಿತ ಸಮುದಾಯ ಪ್ರತಿಭಟನೆ ನಡೆಸಿದೆ.

ನೂತನ ಶಾಸಕ ಬಿ ಪಿ ಹರೀಶ್ ಗೆ ಸನ್ಮಾನಿಸಲು ಪೌರಕಾರ್ಮಿಕರು ಆಗಮಿಸಿದ್ದರು, ಈ ವೇಳೆ ದಲಿತ ಸಮಾಜದ ಬಗ್ಗೆ ಹರೀಶ್ ಅವಹೇಳನ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾದಿಗ ಸಮಾಜ ವೋಟ್ ಹಾಕಿಲ್ಲ ಎಂದು ಶಾಸಕ ಬಿಪಿ ಹರೀಶ್ ಲಘುವಾಗಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಕೆರಳಿದ ಹರಿಹರದ ದಲಿತ ಸಂಘಟನೆಗಳು, ಹರಿಹರದ ಪ್ರಮುಖ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದು, ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ..