POWER SAMACHARA | KANNADA NEWS | BREKING NEWS| 18-06-2023..

ದಾವಣಗೆರೆ: ಕ್ರೀಡಾ ಸಚಿವ ಬಿ.ನಾಗೇಂದ್ರ ಮಾಮ, ಮಾಮ ಅಂದ್ಕೊಂಡೆ ಶ್ರೀರಾಮುಲುನ ಸೋಲಿಸಿದ್ರು, ಪ್ರಬಲ ವ್ಯಕ್ತಿಯನ್ನ ಸೋಲಿಸಿ ನಾಗೇಂದ್ರ ಸಚಿವರಾಗಿದ್ದಾರೆ ಎಂದು ದಾವಣಗೆರೆ ಜಿಲ್ಲೆಯ ಹರಿಹರದ ವಾಲ್ಮೀಕಿ ಗುರುಪೀಠದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಬಿಜೆಪಿ ಎಸ್ಟಿ ಮೀಸಲಾತಿ ನೀಡಿದೆ ಅಂತ ನೀವು ಮರುಳಾಗಬೇಡಿ, ಎಸ್ಟಿ ಸಮುದಾಯಕ್ಕೆ ಬಿಜೆಪಿ ಪ್ರೀತಿಯಿಂದ ಮೀಸಲಾತಿ ಕೊಟ್ಟಿಲ್ಲ, ಚುನಾವಣೆಯಲ್ಲಿ ಸಮುದಾಯ ಕೈ ಕೊಡುತ್ತೇ ಅನ್ನೋ ಭಯದಲ್ಲಿ ಕೊಟ್ಟಿರೋದು, ಸ್ವಾಮೀಜಿ ಹೋರಾಟದಿಂದ ಮೀಸಲಾತಿ ಕೊಟ್ಟಿರೋದು, 274 ದಿನ ಧರಣಿಗೆ ಹೆದರಿ ಬಿಜೆಪಿ ಮೀಸಲಾತಿ ನೀಡಿದೆ, ಸ್ವಾಮೀಜಿ ಬಿಜೆಪಿ ಅವರು ಬಂದಾಗ ಅವರಂತೆ, ನಾವು ಬಂದಾಗ ನಮ್ಮಂತೆ ಇರಬಾರದು, ಬಿಜೆಪಿಯ ನಾಲ್ಕೈದು ಜನರ ಮೇಲೆ ಮಾತ್ರ ವಿಶ್ವಾಸವಿಡಿ, ಎಲ್ಲರನ್ನೂ ನಂಬಬೇಡಿ ಎಂದು ಹೇಳಿದ್ದಾರೆ..

ಯಾರೂ ಇದುವರೆಗೂ ನಮ್ಮೂರಿಗೆ ಶಾಲೆ ಬೇಕು ಅಂತ ಕೇಳಿಲ್ಲ

ದಾವಣಗೆರೆ ಜಿಲ್ಲೆಯ ಹರಿಹರದ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಸಮುದಾಯದ ಸಚಿವರು, ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಮುದಾಯ ಭವನ ನಿರ್ಮಿಸಲಾಗಿದೆ, ಆ ಸಮುದಾಯ ಭವನಗಳಿಂದ ಸಮುದಾಯಕ್ಕೆ ಏನು ಲಾಭ ಆಗಿದೆ ಅನ್ನೋದು ಯೋಚಿಸಬೇಕಿದೆ, ಎಸ್ಸಿ-ಎಸ್ಟಿ ಸಮುದಾಯಕ್ಕೆ ಸಮುದಾಯ ಭವನಕ್ಕಿಂತ ಶಾಲೆಗಳು ಮುಖ್ಯ, ಯಾರೂ ಇದುವರೆಗೂ ನಮ್ಮೂರಿಗೆ ಶಾಲೆ ಬೇಕು ಅಂತ ಕೇಳಿಲ್ಲ, ನಾನು 21 ವರ್ಷದಿಂದ ನೋಡ್ತಿದ್ದೇನೆ, ಬರೀ ಸಮುದಾಯ ಭವನಕ್ಕೆ ಅಂತ ಬರ್ತಾರೆ, ಎಸ್ಸಿ-ಎಸ್ಟಿ ಸಮುದಾಯವರು ಸಮುದಾಯ ಭವನಕ್ಕೆ ಹೋರಾಟ ಮಾಡುವುದು ಕೈಬಿಡಬೇಕು, ಎಷ್ಟೋ ಕಡೆ ಸಮುದಾಯ ಭವನ ನೀಡಿಲ್ಲ ಅಂತ ಶಾಸಕರನ್ನೇ ಸೋಲಿಸಿದ್ದಾರೆ, ಶಿಕ್ಷಣ ಯಾರೂ ಕದಿಯಲಾರದ ಆಸ್ತಿ, ಮಕ್ಕಳಿಗೆ ಶಿಕ್ಷಣ ಕೊಡಿಸಿ, ಜನ ಬದಲಾಗಬೇಕು, ಜನ ಏನ್ ಕೇಳ್ತಾರೋ ಶಾಸಕರು, ಸಚಿವರು ಅದನ್ನ ಕೊಡ್ತಾರೆ, ಶಾಸಕರು, ಸಚಿವರು ಕೇಳೋದು ಸರ್ಕಾರ ಕೊಡುತ್ತದೆ, ಈ ಸಮುದಾಯ ಭವನ ಅನ್ನೋ ಕಾನ್ಸೆಪ್ಟ್ ನಿಲ್ಲಬೇಕು, ಶಾಲೆ ಕಾನ್ಸೆಪ್ಟ್ ಬರಬೇಕು ಎಂದರು..

ಎಸ್ಸಿ-ಎಸ್ಟಿ ಸಮುದಾಯದ ಭೂರಹಿತರಿಗೆ ಭೂಮಿ ಕೊಡೋ ಯೋಜನೆಯೂ ವ್ಯರ್ಥ, 3 ಲಕ್ಷದ ಭೂಮಿಗೆ 15 ಲಕ್ಷ ಕೊಡ್ಸಿ ಅಕ್ರಮ ಮಾಡ್ತಿದ್ದಾರೆ, ಎಸ್ಸಿ-ಎಸ್ಟಿ ಸಮುದಾಯದ ಬಹಳಷ್ಟು ಸ್ಕೀಂಗಳು ದುರುಪಯೋಗ ಆಗ್ತಿದೆ, ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಗೆ ಇನ್ನೂ ಕನೆಕ್ಷನ್ ಕೊಟ್ಟಿಲ್ಲ, ವಾಲ್ಮೀಕಿ ಸಮುದಾಯ ಕಾಂಗ್ರೆಸ್ ಮೇಲೆ ಬಹಳ ನಿರೀಕ್ಷೆ ಇಟ್ಟಿದೆ, ಆದರೆ, ವಾಲ್ಮೀಕಿ ಸಮುದಾಯ ಕಾಂಗ್ರೆಸ್ ಗೆ ಕೇವಲ 46% ಮತ ಹಾಕಿದೆ, ಇನ್ನೂ 54% ನಮಗೆ ವಿರೋಧವಾಗಿ ಮತ ಚಲಾಯಿಸಿದ್ದಾರೆ, ನೋಡೋಣ ಮುಂದಿನ ದಿನಗಳಲ್ಲಿ ಬದಲಾಗ್ತಾರಾ ಅಂತ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ..