POWER SAMACHARA | KANNADA NEWS | BREKING NEWS| 14-06-2023

ದಾವಣಗೆರೆ: ಮನೆ ಗೋಡೆ ಮೇಲಿಂದ ಬಿದ್ದು ಬಿಸಲೇರಿ ಗ್ರಾಮದ ವ್ಯಕ್ತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತ್ನಿಯೇ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ..
ದಾವಣಗೆರೆ ತಾಲ್ಲೂಕಿನ ಹೊರವಲಯದ ದುರ್ಗಾಂಬಿಕಾ ಕ್ಯಾಂಪ್ ಹಳೇಬಿಸಲೇರಿ ಗ್ರಾಮದಲ್ಲಿ ನಡೆದಿದ್ದ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಸಾವು ಪ್ರಕರಣವನ್ನು ಹದಡಿ ಠಾಣೆ ಪೊಲೀಸರು ಭೇದಿಸಿದ್ದಾರೆ.
ಹಳೇ ಬಿಸಲೇರಿ ಗ್ರಾಮದ ನಿವಾಸಿ ಲಿಂಗರಾಜ್ (34) ಜೂನ್ 9ರ ತಡರಾತ್ರಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು, ಗೋಡೆ ಮೇಲಿಂದ ಬಿದ್ದು ಪತಿ ಸಾವನ್ನಪ್ಪಿದ್ದಾರೆ ಎಂದು ಪತ್ನಿ ಕಾವ್ಯ ತಿಳಿಸಿದ್ದಳು. ನನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಲಿಂಗರಾಜ್ ನ ತಾಯಿ ಶಿವಲಿಂಗಮ್ಮ ಜೂನ್ 10ರಂದು ಹದಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು..

ಪ್ರಕರಣ ಸಂಬಂಧ ತನಿಖೆಗಾಗಿ ಗ್ರಾಮಾಂತರ ಎಎಸ್‌ಪಿ ಕನ್ನಿಕಾ ಸಿಕ್ರಿವಾಲ್, ಮಾಯಕೊಂಡ ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜು ನೇತೃತ್ವದಲ್ಲಿ ಪಿಎಸ್‌ಐಗಳಾದ ಸಂಜೀವಕುಮಾರ್, ಶಕುಂತಲಾ, ಕಾನ್‌ಸ್ಟೆಬಲ್ ಕರಿಬಸಪ್ಪ, ಕಾನ್‌ಸ್ಟೆಬಲ್‌ಗಳಾದ ಶ್ರೀನಿವಾಸ, ಚನ್ನಬಸವ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು..

ಹಳೇ ಪ್ರಕರಣದಿಂದ ಹೊಸ ಪ್ರಕರಣ ಬಯಲಿಗೆ..!

ಈ ಹಿಂದೆ ಲಿಂಗರಾಜ್ ನ ಪತ್ನಿ ಕಾವ್ಯ ವಿನೋಬನಗರದ ಬೀರೇಶ್ ಎಂಬಾತನ ಜೊತೆ ಮಂಗಳೂರಿಗೆ ಓಡಿ ಹೋಗಿದ್ದಳು. ಕಾಣೆಯಾದ ಬಗ್ಗೆ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾವ್ಯ ಪತ್ತೆಯಾದ ನಂತರ ಪ್ರಕರಣ ಅಂತ್ಯ ಕಂಡಿತ್ತು, ಹಳೇ ಪ್ರಕರಣದ ಜಾಡು ಹಿಡಿದ ಪೊಲೀಸರು, ಪ್ರಕರಣ ಭೇದಿಸಿದ್ದಾರೆ, ಕಾವ್ಯ ತನ್ನ ಗಂಡನೊಂದಿಗೆ ಜೀವನ ಮಾಡಲು ಇಷ್ಟವಿಲ್ಲದೆ, ಜೂನ್ 9ರ ರಾತ್ರಿ ಪ್ರಿಯಕರನ ಜೊತೆ ಸೇರಿ ಲಿಂಗರಾಜ್ ನ ತಲೆಗೆ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾಳೆ ಎನ್ನಲಾಗಿದೆ..

ಪ್ರಿಯಕರನ ಜೊತೆ ಸೇರಿ ಇಟ್ಟಳು ಮುಹೂರ್ತ

ಲಿಂಗರಾಜ್ ಗೋಡೆ ಮೇಲಿಂದ ಬಿದ್ದು ಸತ್ತಿದ್ದಾನೆ ಹೇಳಿ ನಂಬಿಸಲು ಯತ್ನಿಸಿದ್ದಾಳೆ. ಹದಡಿ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣ ಪರಿಶೀಲಿಸಿ ತನಿಖೆ ನಡೆಸಿದಾಗ ಪತ್ನಿ ಕಾವ್ಯ, ಪತಿಯನ್ನು ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ..

ಅನೈತಿಕ ಸಂಬಂಧಕ್ಕೆ ಲಿಂಗರಾಜ್ ಅಡ್ಡಿಪಡಿಸುತ್ತಾನೆ ಎಂಬ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಬಂಧಿತರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ, ಪ್ರಕರಣದ ಪ್ರಮುಖ ಆರೋಪಿ ನಿಂಗರಾಜ್ ಅವರ ಪತ್ನಿ ಕಾವ್ಯ ಹಾಗೂ ಈಕೆಯ ಪ್ರಿಯಕರ ವಿನೋಬನಗರದ ನಿವಾಸಿ ಬೀರೇಶ ಅವರನ್ನು ಬಂಧಿಸಲಾಗಿದೆ.