POWER SAMACHARA | KANNADA NEWS | 09-04-2023 ದಾವಣಗೆರೆ: ಬೆಣ್ಣೆನಗರಿ ಬಿಜೆಪಿಯಲ್ಲಿ ಬಂಡಾಯದ ಬಿಸಿ ಗಾಳಿ ಎದ್ದಿದೆ, ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಈಗ ಒಂದೊಂದಾಗಿ ಹೊರ ಬರುತ್ತಿದ್ದು ವಲಸಿಗ-ಸ್ಥಳಿಯ ಎಂಬ ಚರ್ಚೆ ಶುರುವಾಗಿದೆ.. ವಲಸಿಗರಿಗೆ ಬಿಟ್ಟು ಸ್ಥಳಿಯರಿಗೆ ಟಿಕೆಟ್ ನೀಡಿ ಎಂಬ ಬೇಡಿಕೆ ಚರ್ಚೆಗೆ ಗ್ರಾಸವಾಗಿದೆ..
ಉತ್ತರಕ್ಕೆ ಸಿಗದ ಉತ್ತರ..!
ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ, ಅದರಲ್ಲೂ ಹೆಡ್ ಕ್ವಾಟರ್ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ.. ಯೆಸ್ ದಾವಣಗೆರೆ ಉತ್ತರ ಕ್ಷೇತ್ರ ಗೆದ್ದವರು ಹೆಡ್ ಕ್ವಾಟರ್ ರನ್ನೆ ವಶಕ್ಕೆ ಪಡೆದಂತೆ, ಹೀಗಾಗಿ ಈ ಕ್ಷೇತ್ರ ಯಾವಾಗಲು ಸಖತ್ ಸದ್ದು ಮಾಡ್ತಾ ಇರುತ್ತೆ.. ಈಗಾಗಲೇ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ರಿಗೆ ಟಿಕೆಟ್ ಘೋಷಣೆ ಆಗಿದ್ದು, ಪ್ರಚಾರದಲ್ಲಿ ತೊಡಗಿದ್ದಾರೆ, ಆದರೆ ಬಿಜೆಪಿ ಅಭ್ಯರ್ಥಿ ಯಾರೆಂಬುದು ಮಾತ್ರ ಇನ್ನೂ ಬಗೆಹರಿದಿಲ್ಲ, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್ ಅವರು ಸ್ಪರ್ಧೆ ನಡೆಸೋದಿಲ್ಲ ಎಂಬ ಘೋಷಣೆ ಬಳಿಕ ಆಕಾಂಕ್ಷಿಗಳ ದಂಡು ಹೆಚ್ಚಿದೆ. ಮಲ್ಲಿಕಾರ್ಜುನ್ ಎದುರಿಗೆ ಸಂಸದ ಜಿಎಂ ಸಿದ್ದೇಶ್ವರ್ ಅವರ ಪುತ್ರ ಅನಿತ್ ಕುಮಾರ್ ಸೂಕ್ತ ಎಂಬ ಚರ್ಚೆ ಗೊಂದಲಕ್ಕೆ ಕಾರಣಾವಾಗಿದೆ, ಆದರೆ ವಲಸಿಗ ಸ್ಥಳಿಯ ಎಂಬ ಚರ್ಚೆ ಶುರುವಾಗಿದೆ ಒಳಗೊಳಗೆ ಕಿಡಿ ಆವರಿಸಿದೆ..
ಸಂಸದ ಸಿದ್ದೇಶ್ವರ್ ಕುಟುಂಬ ಆರು ಬಾರಿ ಎಂಪಿ, ಮತ್ತೆ ಎಂಎಲ್ ಎ ಬೇಕಾ.?
ಸ್ಥಳಿಯರಿಗೆ ಬಿಜೆಪಿ ಟಿಕೇಟ್ ನೀಡಿ ಎಂದು ದಾವಣಗೆರೆಯ ಶಿರಮಗೊಡನಹಳ್ಳಿಯಲ್ಲಿರುವ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್ ಅವರ ಮನೆ ಮುಂಭಾಗ ಕಾರ್ಯಕರ್ತರ ಜಮಾವಣೆಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ...ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಸಂಸದ ಜಿಎಂ ಸಿದ್ದೇಶ್ವರ್ ಪುತ್ರ ಜಿ ಎಸ್ ಅನಿತ್ ಕುಮಾರ್ ಹೆಸರು ಚರ್ಚೆ ನಡೆಯುತ್ತಿದ್ದು ಈ ಗದ್ದಲಕ್ಕೆ ಕಾರಣವಾಗಿದೆ. ಜಿಎಸ್ ಅನಿತ್ ಚಿತ್ರದುರ್ಗ ಜಿಲ್ಲೆಯವರು, ಈಗಾಗಲೇ ಅವರ ತಂದೆ ಸಿದ್ದೇಶ್ವರ್, ತಾತಾ ಮಲ್ಲಿಕಾರ್ಜನಪ್ಪ ಆರು ಬಾರಿ ದಾವಣಗೆರೆ ಎಂಪಿಯಾಗಿದ್ದಾರೆ, ಈಗ ಮತ್ತೆ ದಾವಣಗೆರೆ ಎಂಎಲ್ ಎ ಸ್ಥಾನವು ಬೇಕು ಎಂದರೆ ಹೇಗೆ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ..   ಜನರ ಸೇವೆ ಮಾಡಿರುವ ಲೋಕಿಕೆರೆ ನಾಗರಾಜ್ ರಿಗೆ ಟಿಕೆಟ್ ಕೊಡಿ.. ಯಾರಿಗೆ ಆಗಲಿ ಸ್ಥಳೀಯರಿಗೆ ಟಿಕೆಟ್ ಕೊಡಿ, ಸ್ಥಳೀಯವಾಗಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಸಾಕಷ್ಟು ಕೆಲಸ ಮಾಡಿದ್ದಾರೆ, ಕೊರೊನಾ ಸಂದರ್ಭದಲ್ಲಿ ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ ಇವರ ಜೊತೆ ಮಾಜಿ ಮೇಯರ್ ಎಸ್ ಟಿ ವೀರೇಶ್ ಸೇರಿದಂತೆ ಐದಾರು ಜನ ಆಕಾಂಕ್ಷಿಗಳಿದ್ದಾರೆ, ಸ್ಥಳೀಯರಿಗೆ ಟಿಕೆಟ್ ಕೊಡಿ, ಮೇಲಾಗಿ ವಂಶ ಆಡಳಿತದ ರಾಜಕೀಯಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ..
ವರಿಷ್ಠರ ಗಮನಕ್ಕೆ ತರುತ್ತೇನೆ; ಎಸ್ ಎ ರವೀಂದ್ರನಾಥ್
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಹಾಲಿ ಶಾಸಕ ಎಸ್ ಎ ರವೀಂದ್ರನಾಥ್, ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ, ಒಟ್ಟಾರೆ ದಾವಣಗೆರೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಬೆಂಕಿಯಾಡಲು ಶುರು ಮಾಡಿದೆ, ಏನೇ ಆಗಲಿ ವಂಶಾಡಳಿತ ಬಿಟ್ಟು ಸ್ಥಳಿಯರಿಗೆ ಟಿಕೆಟ್ ಕೊಟ್ಟರೆ ಮಾತ್ರ ಕೆಲಸ ಮಾಡ್ತಿವಿ ಇಲ್ಲ ಅಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದ್ದು, ವರಿಷ್ಠರ ಮುಂದಿನ ನಿರ್ಧಾರ ಏನಾಗುತ್ತೋ ಕಾದು ನೋಡಬೇಕಿದೆ..