POWER SAMACHARA | KANNADA NEWS | BREKING NEWS| 24-05-2023

ದಾವಣಗೆರೆ: ಅಲ್ಲಿ ನಿತ್ಯ ಗಂಟೆ ಮಂಗಳಾರತಿ ಸದ್ದು ಕೇಳಬೇಕಿತ್ತು. ಆದರೆ ಕೋಟಿ ಕೋಟಿ ಆಸ್ತಿಯಿಂದಾಗಿ ಆ ಸದ್ದುಗಳೇ ನಿಂತು ಹೋಗಿದ್ದವು. ನೂಕಾಟ ಎಳೆದಾಟ ಚಿರಾಟದ ಸದ್ದೆ ಹೆಚ್ಚಾಗಿತ್ತು. ಮೇಲಾಗಿ ಈ ದೇವಸ್ಥಾನ ಜಾಗದ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದು ಎರಡು ಬಣದ ಜನರ ಹೈ ಡ್ರಾಮಕ್ಕೆ ಕಾರಣವಾಗಿದೆ..

ಹೌದು.. ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಐತಿಹಾಸಿಕ ಹಾಗೂ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇರುವ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಗಲಾಟೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ದೇವಸ್ಥಾನಕ್ಕೆ ನಾಲ್ಕು ಎಕರೆ ಹತ್ತು ಗುಂಟೆ ಜಮೀನು ಇದೆ. ಈ ಜಮೀನು ದಾವಣಗೆರೆ ನಗರದ ಹೃದಯ ಭಾಗದಲ್ಲಿದೆ. ಕೋಟಿ ಕೋಟಿ ರೂಪಾಯಿ ಬೆಲೆ ಬಾಳುತ್ತಿದೆ. ಇಡಿ ಜಮೀನು ತನ್ನದೇ ಎಂದು ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಲಿಂಗೇಶ್ವರ ಹೈಕೋರ್ಟ್ ಮೊರೆ ಹೋಗಿದ್ದಾನೆ. ಆದರೆ ಇದು ದೇವಸ್ಥಾನ ಸಮಿತಿಗೆ ಸೇರಿದ್ದು ಎಂಬುದು ಸಮಿತಿ ವಾದ. ಆದರೆ ಇಂದು ನೋಟೀಸ್ ಒಂದರ ಸಂಬಂಧ ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಾದ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು ಇದರಿಂದ ಅಧಿಕಾರಿಗಳು ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಹೊರಟು ಹೋಗಿದ್ದಾರೆ.

ಜಾಗ ನಮ್ಮದು ಎಂದು ಪೂಜಾರಿ ವಾದ..!

ಕಳೆದ ಕೆಲ ವರ್ಷಗಳಿಂದ ದೇವಸ್ಥಾನ ಸಮಿತಿ ಹಾಗೂ ದೇವಸ್ಥಾನ ಪೂಜಾರಿ ಮನೆತನ ನಡುವೆ ಆಸ್ತಿಗಾಗಿ ಜಗಳ ಶುರುವಾಗಿದೆ. ಇದೇ ಕಾರಣಕ್ಕೆ ಪೂಜಾರಿ ಲಿಂಗೇಶ್ ನನ್ನ ಈ ಹಿಂದೆ ಪೂಜಾರಿ ಸ್ಥಾನದಿಂದ ವಜಾ ಮಾಡಿದ್ದರು. ಕಾರಣ ಇದು ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನ. ಮೇಲಾಗಿ ಇದೇ ದೇವಸ್ಥಾನದ ಆವರಣದಲ್ಲಿ ಅಂತರಾಷ್ಟ್ರೀಯ ಕುಸ್ತಿ ಅಖಾಡ ಸಹ ಇದೆ. ಪೂಜಾರಿ ಇಡಿ ಆಸ್ತಿ ತಮಗೆ ಸೇರಬೇಕು ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೇಸ್ ವಿಚಾರಣೆ ಹಂತದಲ್ಲಿದೆ. ಇಂಜೆಕ್ಷನ್ ಆರ್ಡರ್ ಕೂಡ ನೀಡಲಾಗಿದೆ. ಆದರೆ ವಿವಾದಿತ ಜಾಗದಲ್ಲಿ ಸಮಿತಿಯವರು ಕಟ್ಟಡವನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ, ದಾಖಲೆ ಎಲ್ಲವು ಇದೆ ಇದು ನಮ್ಮ ಕುಟುಂಬದ ಆಸ್ತಿ ಎಂಬುದು ಪೂಜಾರಿಯ ಆರೋಪವಾಗಿದೆ..

ಪೂಜಾರಿಕೆ ಮಾಡು ಅಂದ್ರೆ ಜಾಗನೇ ನಮ್ಮದು ಅಂದ್ರೆ ಹೆಂಗೆ..!

ಇದು ಸಮಾಜಕ್ಕೆ ನೀಡುತ್ತಿರುವ ಕೊಡುಗೆ ವಿನಃ ನಮ್ಮ ಸ್ವಂತಕ್ಕೆ ಅಲ್ಲ ಎಂದು ಇಲ್ಲಿನ ಕಮಿಟಿಯವರ ವಾದವಾಗಿದೆ, ತಲಾತಲಾಂತರದಿಂದ ಬೀರಲಿಂಗೇಶ್ವರ ದೇವಸ್ಥಾನ ಇದೆ, ಇದು ಕಮಿಟಿಗೆ, ದೇವಸ್ಥಾನಕ್ಕೆ ಸೇರಿದ್ದ ಜಾಗ, ಪೂಜಾರಿಕೆ ಮಾಡು ಎಂದರೆ ಪೂಜಾರಿ, ಯಾವೊದೊ ದಾಖಲೆ ಇಡಿದು ಇಡೀ ಜಾಗವೇ ನಂದು ಎನ್ನುತ್ತಿದ್ದಾನೆ, ಪ್ರಕರಣ ಕೋರ್ಟ್ ನಲ್ಲಿದೆ, ಏನೇ ತೀರ್ಪು ಬಂದರು ಕೋರ್ಟ್ ತೀರ್ಪಿಗೆ ನಾವು ತಲೆಬಾಗುತ್ತೇವೆ ಎಂದು ದೇವಸ್ಥಾನ ಸಮಿತಿಯ ವಾದವಾಗಿದೆ..

ಏನೇ ಆಗಲಿ ಶಾಂತಿ ನೆಲೆಸಬೇಕಿದ್ದ ದೇವಸ್ಥಾನ ಜಾಗದಲ್ಲಿಗ ಅಶಾಂತಿ ಮೂಡಿದೆ, ಜಾಗದ ವಿಚಾರದಲ್ಲಿ ದೇವರನ್ನೆ ಮರೆಯುವಂತಾಗಿದ್ದು, ಈ ಸಮಸ್ಯೆ ಬಗೆಹರಿಸಲು ದೈವ ಬೀರಲಿಂಗೇಶ್ವರನೇ ಎದ್ದು ಬರಬೇಕು ಎಂದು ಜನ ಮಾತನಾಡುತ್ತಿದ್ದು ಕಂಡು ಬಂದಿದೆ..