<strong>POWER SAMACHARA | KANNADA NEWS | 18-04-2023</strong> <strong>ದಾವಣಗೆರೆ:</strong> ದಾವಣಗೆರೆಯಲ್ಲಿ ಮಾಯಕೊಂಡ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಅಬ್ಬರದ ಮೆರವಣಿಗೆ ನಡೆಸಿದ್ದಾರೆ. <img class="alignnone size-medium wp-image-1013" src="https://powersamachara.com/wp-content/uploads/2023/04/basavaraj-naik-nomination-300x174.jpg" alt="" width="300" height="174" /> <img class="alignnone size-medium wp-image-1014" src="https://powersamachara.com/wp-content/uploads/2023/04/basavaraj-naik-nomination-2-300x166.jpg" alt="" width="300" height="166" /> ದಾವಣಗೆರೆ ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ನಡೆಸಿದ್ರು, ಮೆರವಣಿಗೆ ಬಳಿಕ ತಹಶೀಲ್ದಾರ್ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ರು, ಸಂಸದ ಜಿಎಂ ಸಿದ್ದೇಶ್ವರ್, ಶಾಸಕ ಪ್ರೋ. ಲಿಂಗಣ್ಣ ಬಾಗಿಯಾಗಿದ್ರು, ಈ ವೇಳೆ ಮಾತನಾಡಿದ ಬಸವರಾಜ್ ನಾಯ್ಕ್ ಮಾಯಕೊಂಡದಲ್ಲಿ ಜನ ಬಿಜೆಪಿ ಬಿಜೆಪಿ ಎನ್ನುತ್ತಿದ್ದಾರೆ ಎಂದರು.. <img class="alignnone size-medium wp-image-1015" src="https://powersamachara.com/wp-content/uploads/2023/04/basavaraj-naik-nomination3-300x165.jpg" alt="" width="300" height="165" /> <h3>ಬಂಡಾಯ ಶಮನ ಮಾಡುತ್ತೇವೆ..</h3> ಹನ್ನೊಂದು ಜನ ಆಕಾಂಕ್ಷಿಗಳು ಬಂಡಾಯ ಎದ್ದಿದ್ದು, ವರಿಷ್ಠರು ಬಂಡಾಯ ಶಮನ ಮಾಡುತ್ತಾರೆ ಎಂದು ಭರವಸೆ ಮಾತು ವ್ಯಕ್ತಪಡಿಸಿದ್ದು, ಮಾನದಂಡದ ಆಧಾರದ ಮೇಲೆ ಟಿಕೆಟ್ ನೀಡಿದ್ದಾರೆ, ಅವರಿಗೆ ಟಿಕೆಟ್ ಸಿಗಲಿಲ್ಲ ಎಂದು ನನ್ನ ಮೇಲೆ ಬೇಜಾರ್ ಆದರೆ ಹೇಗೆ, ಎಲ್ಲರನ್ನು ಸಮಾಧಾನಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು..