POWER SAMACHARA | KANNADA NEWS | BREKING NEWS| 21-06-2023..

ದಾವಣಗೆರೆ: ಶಾಲಾ-ಕಾಲೇಜು ತರಗತಿ ಶುರುವಾಗುವ ಸಮಯ ಮತ್ತು ಬಿಡುವ ಸಂದರ್ಭದಲ್ಲಿ ಹಾಗೂ ವಾಹನ ದಟ್ಟಣೆ ಹೆಚ್ಚಿರುವ ವೇಳೆ ನಗರದಲ್ಲಿ ಲಾರಿಗಳ ಸಂಚಾರ ನಿರ್ಭಂಧಿಸಲಾಗಿದೆ ಎಂದು ದಾವಣಗೆರೆಯಲ್ಲಿ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ..

ನಗರದ ಹಳೇ ಕುಂದುವಾಡದಲ್ಲಿ ಬಾಲಕಿ ಮೇಲೆ ಲಾರಿ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು, ಈ ಕುರಿತು ಮಾಧ್ಯಮಗಳು ವಿಸ್ತೃತ ವರದಿ ಪ್ರಸಾರ ಮಾಡಿದ್ದವು ಹಾಗೂ ವಿವಿಧೆಡೆ ಶಾಲಾ ಕಾಲೇಜ್ ಗಳ ವಿದ್ಯಾರ್ಥಿಗಳ ಓಡಾಟ ಸಂದರ್ಭದಲ್ಲಿ ಆದ ಕೆಲ ಘಟನೆ ಹಾಗೂ ಬೆಳಿಗ್ಗೆ ಸಂಜೆ ವಾಹನ ದಟ್ಟಣೆ ಹೆಚ್ಚಾಗಿರುವ ಕಾರಣ ಬೆಳಿಗ್ಗೆ 9 ರಿಂದ 11ರವರೆಗೆ ಮತ್ತು ಸಂಜೆ 4ರಿಂದ 6 ರವರೆಗೆ ಲಾರಿ ಸಂಚಾರಕ್ಕೆ ಅವಕಾಶ ಇಲ್ಲ ಎಂದು ಎಸ್ಪಿ ಸೂಚನೆ ನೀಡಿದ್ದಾರೆ, ಈ ಹಿಂದೆಯೂ ಸಹ ಬೆಳಿಗ್ಗೆ ಮತ್ತು ಸಂಜೆ ಅವಧಿಗೆ ಭಾರೀ ಲಾರಿ ಪ್ರವೇಶ ನಿರ್ಭಂಧಿಸಲಾಗಿತ್ತು, ಆದರೆ ಲಾರಿ ಓಡಾಟ ಹೆಚ್ಚಾದ ಹಿನ್ನಲೆ ಲಾರಿ ಸಂಚಾರ ನಿಷೇಧಿಸಿ ಮತ್ತೊಮ್ಮೆ ಎಸ್ಪಿ ಸೂಚನೆ ಹೊರಡಿಸಿದ್ದಾರೆ..

ಲಾರಿಗಳ ನಿಲುಗಡೆಗೆ ಸ್ಥಳ ಗುರುತು

ಈ ಅವಧಿಯಲ್ಲಿ ಲಾರಿಗಳ ಸ್ಥಳ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ, ಬಾಡಾ ಕ್ರಾಸ್, ಜಿಎಂಐಟಿ ಕಾಲೇಜ್, ಮಾಗನಹಳ್ಳಿ ರಸ್ತೆ, ಡಿಸಿಎಂ ಅಂಡರ್ ಪಾಸ್, ಶಾಮನೂರು ಅಂಡರ್ ಪಾಸ್, ಲೋಕಿಕೆರೆ ಕ್ರಾಸ್ ಬಳಿ ಲಾರಿ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ.

ಈ ಅವಧಿಯಲ್ಲಿ ಗ್ಯಾಸ್ ವಾಹನಗಳು, ಪೆಟ್ರೋಲ್ ವಾಹನಗಳು ಮತ್ತು ಜಿಲ್ಲಾಧಿಕಾರಿಗಳಿಂದ ವಿಶೇಷ ಅನುಮತಿ ಪಡೆದ ಕೆಲವು ವಾಹನಗಳಿಗೆ ಮಾತ್ರ ಅನುಮತಿಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ..